ಬೆಳಗಾವಿ ೫: – ಸಾಹಿತ್ಯ , ಪತ್ರಿಕೆ, ಕಲಾ ಕ್ಷೇತ್ರಗಳಲ್ಲಿ ಆರು ದಶಕಗಳ ಸೇವೆ ಸಲ್ಲಿಸಿರುವ ಬೆಳಗಾವಿಯ ಹಿರಿಯ ಸಾಹಿತಿ, ಪತ್ರಕರ್ತ, ಸಾಂಸ್ಕöÈತಿಕ ನೇತಾರ ಎಲ್. ಎಸ್. ಶಾಸ್ತಿö್ರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಲೋಕವಿಕಾಸ ಪ್ರತಿಷ್ಠಾನದ( ರಿ.) ವೇ. ಮೂ. ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದೇ ಅಗಸ್ಟ್ ೨೦ ರವಿವಾರ ಅಪರಾಹ್ನ ೩ ಗಂಟೆಗೆ ಪುತ್ತೂರಿನ ಕೃಷ್ಣ ಆರ್ಕೇಡ್ ಸಭಾಭವನದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಕೆ. ಜಯರಾಜ ಆಚಾರ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು , ಖ್ಯಾತ ತಾಳಮದ್ದಳೆ ಅರ್ಥಧಾರಿ , ಚಿಂತಕ ಶ್ರೀ ನಾರಾಯಣ ಯಾಜಿ ಸಾಲೇಬೈಲು, ಹೊನ್ನಾವರ ಅವರು ಅಭಿನಂದನ ಭಾಷಣ ಮಾಡಲಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಮಾನಪತ್ರ, ಸ್ಮರಣಿಕೆ ಮೊದಲಾದವುಗಳಿಂದ ಕೂಡಿದೆ.