ಕೊಪ್ಪಳ ಡಿಸೆಂಬರ್ ೨೦ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾ.ಆ.ಕೇಂದ್ರ ವೆಂಕಟಗಿರಿ ವ್ಯಾಪ್ತಿಯ ಬೊಮ್ಮಸಾಗರತಾಂಡಾ ಗ್ರಾಮದಲ್ಲಿ ಡಿಸೆಂಬರ್ ೧೭ ರಂದು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ” ಗ್ರಾಮಸ್ತಾವ್ಯ ಕಾರ್ಯಕ್ರಮದ ದಿನದಂದು ಶಾಲಾ ಆವರಣದಲ್ಲಿ ವಿಟಮಿನ್ ‘ಎ’ ಅನ್ನಾಂಗ ಪೂರಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಮಗುವಿಗೆ ‘ಎ’ ಅನ್ನಾಂಗ ದ್ರಾವಣ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳು ಈ ದೇಶದ ಸಂಪತ್ತು ಅವರ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಡಿ. ೧೭ ರಿಂದ ಡಿ. ೩೧ ರವರೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆ, ಉಪ-ಕೇಂದ್ರ ಹಾಗೂ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ೦೫ ವರ್ಷದೊಳಗಿನ ಮಕ್ಕಳಿಗೂ ಪ್ರತಿ ೦೬ ತಿಂಗಳಿಗೊಮ್ಮೆ ‘ಎ’ ಅನ್ನಾಂಗ ದ್ರಾವಣ ಬಾಯಿ ಮೂಲಕ ಹಾಕಲಾಗುತ್ತದೆ. ಇದರ ಉದ್ದೇಶ ಮಕ್ಕಳಲ್ಲಿ ಕಂಡು ಬರುವ ಸಂಜೆ ಕುರುಡು/ ಇರುಳು ಕಣ್ಣು ತಡೆಗಟ್ಟಲು ಈ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದೆ. ಈ ದ್ರಾವಣ ಹಾಕುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅತಿಸಾರ ಭೇಧಿ ತಡೆಗಟ್ಟುತ್ತದೆ, ಚರ್ಮ ಕಾಂತಿಯುಕ್ತವಾಗುತ್ತದೆ, ಇದರಿಂದ ಮಕ್ಕಳ ದೈಹಿಕ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಆದ್ದರಿಂದ ಎಲ್ಲಾ ಸಾರ್ವಜನಿಕರು ತಮ್ಮ ೦೫ ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆ, ಉಪ-ಕೇಂದ್ರಕ್ಕೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ‘ಎ’ ಅನ್ನಾಂಗ ದ್ರಾವಣ ಹಾಕಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರು ಮಾತಾನಾಡಿ, ಮಕ್ಕಳಲ್ಲಿ ‘ಎ’ ಅನ್ನಾಂಗ ಕೊರತೆಯನ್ನು ತಡೆಗಟ್ಟಲು ಪ್ರತಿನಿತ್ಯದ ಆಹಾರದಲ್ಲಿ ‘ಎ’ ಅನ್ನಾಂಗ ಇರುವ ಆಹಾರ ಪದಾರ್ಥಗಳಾದ ಹಳದಿ ಪದಾರ್ಥ, ಹಣ್ಣುಗಳು, ಕ್ಯಾರೆಟ್ (ಗಜ್ಜರಿ), ಹಸಿರು ಸೊಪ್ಪು, ಕುಂಬಳಕಾಯಿ, ಮಾವಿನ ಹಣ್ಣು, ಪಪ್ಪಾಯಿ ಹಣ್ಣು (ಪರಂಗಿ ಹಣ್ಣು), ಕಿತ್ತಳೆ ಹಣ್ಣು ಇವುಗಳನ್ನು ಆಹಾರದಲ್ಲಿ ಬಳಸಬೇಕು. ಜೊತೆಗೆ ಸರ್ಕಾರ ಆಯೋಜಿಸಿದ ‘ಎ’ ಅನ್ನಾಂಗ ದ್ರಾವಣ ಮಕ್ಕಳಿಗೆ ಕೊಡಿಸಿ ಆರೋಗ್ಯವಂತ ಮಕ್ಕಳನ್ನಾಗಿ ಮಾಡಲು ಸಹಕರಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಮ್.ಹೆಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಶಶಿಧರ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ರಮೇಶ ಮೂಲಿಮನಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಶರಣಪ್ಪ ಚಕೋಟಿ ಸೇರಿದಂತೆ ವೈದ್ಯಾಧಿಕಾರಿಗಳು ವಿವಿಧ ವೃಂದಗಳ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Gadi Kannadiga > State > `ಎ’ ಅನ್ನಾಂಗ ಪೂರಕ” ಕಾರ್ಯಕ್ರಮಕ್ಕೆ ಚಾಲನೆ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023