ಗದಗ ಡಿಸೆಂಬರ್ ೩೧: ಮಾರ್ಚ ೧ ರಿಂದ ೩ ಮಾರ್ಚ್ ೨೦೨೩ ರವರೆಗೆ ವಿಶ್ವವಿದ್ಯಾಲಯವು ಹಲವು ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದಲ್ಲಿ ಸ್ವರಾಜ್-ಸ್ವ ಆಡಳಿತದ ಸ್ಥಳೀಯ ಮಾದರಿಗಳು ಎಂಬ ಶೀರ್ಷಿಕೆಯಡಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸುತ್ತಿದೆ. ತನ್ನಿಮಿತ್ತ ೨-೧-೨೦೨೩ ರ ಬೆಳಿಗ್ಗೆ ೧೦.೩೦ ಗಂಟೆಗೆ ನಾಗಾವಿಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಲೋಗೋ ಹಾಗೂ ಮಾಹಿತಿ ಕೈಪಿಡಿಯನ್ನು ಕೇಂದ್ರಮಂತ್ರಿಗಳಾದ ಪ್ರಲ್ಹಾದ ಜೋಶಿ ಅವರು ಬಿಡುಗಡೆಗೊಳಿಸಲಿದ್ದಾರೆ.
ಪ್ರಜ್ಞಾ ಪ್ರವಾಹ ಸಂಘಟನೆಯ ಅಖಿಲ ಭಾರತೀಯ ಸಂಯೋಜಕರಾದ ಜೆ ನಂದಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೃಷಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಸಂಸದರಾದ ಶಿವಕುಮಾರ ಉದಾಸಿ, ಗದಗ ಶಾಸಕ ಹೆಚ್. ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎಸ್. ವಿ. ಸಂಕನೂರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.
Gadi Kannadiga > State > ಸ್ವರಾಜ್-ಅಂತಾರಾಷ್ಟ್ರೀಯ ಸಮ್ಮೇಳನದ ಲೋಗೋ ಹಾಗೂ ಮಾಹಿತಿ ಕೈಪಿಡಿಯ ಬಿಡುಗಡೆ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023