ಯರಗಟ್ಟಿ: ಸಮೀಪದ ಚುಂಚನೂರ ಗ್ರಾಮದಲ್ಲಿ ಶ್ರೀ ಶಿದ್ರಾಯಜ್ಜನವ ಸೌಹಾರ್ದ ಸಹಕಾರಿ ಸಂಘದ ನೂತನ ನಾಲ್ಕನೇ ಶಾಖೆಯು ಬುಧುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗ???ಂದಿಗೆ ಲೋಕಾ ರ್ಪಣೆ???ಂಡಿತು.
ಪೂರ್ವಾಹ್ನ ಸಂಸ್ಥೆಯ ಕಾರ್ಯಾಧ್ಯಕ್ಷ ಅಭಿನವ ಸಿದ್ರಾಯಜ್ಜನವರು ಅವರ ಅಧ್ಯಕ್ಷತೆಯಲ್ಲಿ ಕುಮಾರೇಶ್ವರ ವಿರಕ್ತಮಠದ ಮ. ನಿ. ಪ್ರ. ಸ್ವ. ಸಚ್ಚಿದಾನಂದ ಮಹಾಸ್ವಾಮಿಗಳು ನೂತನ ಶಾಖೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಶುಭಹಾರೈಸಿದರು.
ಶಿವಯೋಗೀಶ್ವರ ಮಠ ಮ. ಘ. ಚ. ಡಾ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಕಂಪ್ಯೂಟರ್ ಸೇವೆಗೆ ಮತ್ತು ಸೇಫ್ ಲಾಕರ್‌ಗೆಚಾಲನೆ ನೀಡಿದರು.ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ಢವಳೇಶ್ವರ ಮಠದ ಪ್ರ. ಸ್ವ. ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಯರಗಟ್ಟಿ ರಾಜರಾಜೇಶ್ವರಿ ಆಶ್ರಯದ ಗಣಪತಿ ಮಹಾರಾಜರು
ಮುಖ್ಯ ಅತಿಥಿಗಳಾಗಿ ಉಮೇಶ ಬಾಳಿ, ಟಿ. ಪಿ, ಮುನವಳ್ಳಿ, ಪಂಚನಗೌಡ್ರ ದ್ಯಾಮನಗೌಡ್ರ, ರಮೇಶ ಹುಲಕುಂದ, ಸದಾನಂದ ಕರಿಗಾರ, ತಿಪ್ಪಣ್ಣಾ ಶಿಂಗಾರಗೊಪ್ಪ, ಶಂಕರ ರೆಬ್ಬಣ್ಣವರ ಸ್ಥಳಿಯ ಗ್ರಾ. ಪಂ. ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಪಿಕೆಪಿಎಸ್ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಬ್ಯಾಂಕ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ ೬ರಿಂದ ಗಣಹೋಮ, ಆನಂತರ ಶ್ರೀ ಮಹಾಲಕ್ಷ್ಮಿ,ಮಹಾಸರಸ್ವತಿ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಪೂರ್ವಾಹ್ನ ೧೧.೩೦ ರಿಂದ ಸಭಾ ಕಾರ್ಯಕ್ರಮ ನಡೆಯಿತು.
Gadi Kannadiga > Local News > ಶಿದ್ರಾಯಜ್ಜನವ ಸೌಹಾರ್ದ ಸಹಕಾರಿ ಸಂಘದ ನೂತನ ನಾಲ್ಕನೇ ಶಾಖೆಗೆ ಚಾಲನೆ
ಶಿದ್ರಾಯಜ್ಜನವ ಸೌಹಾರ್ದ ಸಹಕಾರಿ ಸಂಘದ ನೂತನ ನಾಲ್ಕನೇ ಶಾಖೆಗೆ ಚಾಲನೆ
Suresh23/03/2023
posted on
