This is the title of the web page
This is the title of the web page

Please assign a menu to the primary menu location under menu

Local News

ಪ್ರಕಾಶ್ ಹುಕ್ಕೇರಿ ಬೆಂಬಲಿಗರಿಂದ ಹಣ ಹಂಚಿಕೆ : ಕಠಿಣ ಕಾನೂನು ಕ್ರಮಕ್ಕೆ ಶಾಸಕ ಅಭಯ್ ಪಾಟೀಲ್ ಒತ್ತಾಯ


ಬೆಳಗಾವಿ : ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಕಾಶ ಹುಕ್ಕೇರಿ ಅವರು ಮತದಾರರಿಗೆ ಕ್ಷೇತ್ರದಾದ್ಯಂತ ಹಣ ಹಂಚುವ ಮೂಲಕ ಮತದಾರರಿಗೆ ಆಮೀಷ ಒಡ್ಡುತ್ತಿದ್ದಾರೆ.

ಇಂದು ಕೇವಲ ವಿಜಯಪುರ ನಗರದಲ್ಲಿ ಸುಮಾರು 17.40 ಲಕ್ಷ ರೂ ಹಣದ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅಭ್ಯರ್ಥಿ ಕರಪತ್ರಗಳು ಸಿಕ್ಕಿವೆ. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಯಾವ ರೀತಿ ಕಾಂಗ್ರೆಸ್ ಪಕ್ಷ ಹಣ ಹಂಚಿಕೆ ನಡೆಯುತ್ತಿದೆ ಎಂಬುದು ಊಹೆ ಮಾಡಲಾಗದು. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕವಾಗಿದೆ.

ಅಲ್ಲದೇ ಕಾಂಗ್ರೆಸ್ ನಾಯಕರಿಗೆ ಸೇರಿದ “ರವದಿ ಫಾರ್ಮ್ ಹೌಸ್” ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಹಣ ಹಂಚಲು ಸೇರಿದಂತೆ ಅನೇಕ ಅಕ್ರಮ ನಡೆಸುತ್ತಿರುವ ಮಾಹಿತಿಯಿದೆ. ಈ ಬಗ್ಗೆ ಚುನಾವಣಾ ಆಯೋಗ ಕೂಡಲೇ ಕ್ರಮ ಜರುಗಿಸಬೇಕು.

ಶಿಕ್ಷಕರ ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ಕಾಂಗ್ರೆಸ್ ಪಕ್ಷವು ಅಕ್ರಮವಾಗಿ, ಆಸೆ-ಆಮೀಷಗಳ ಮೂಲತ ಗೆಲ್ಲಲು ಹವಣಿಸುತ್ತಿರುವುದು ಖಂಡನೀಯ.

ಆದ್ದರಿಂದ ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಪ್ರಕಾಶ ಹುಕ್ಕೇರಿ ಅವರ ಮೇಲೆ “ಪ್ರಜಾಪ್ರತಿನಿಧಿ ಕಾಯ್ದೆ” ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಈ ಪರಿಷತ್ ಚುನಾವಣೆಯಿಂದ ಅವರನ್ನು ವಜಾಗೊಳಿಸಬೇಕೆಂದು ನಾನು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ ಎಂದರು.


Gadi Kannadiga

Leave a Reply