This is the title of the web page
This is the title of the web page

Please assign a menu to the primary menu location under menu

Local News

ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಸಕ ಅನಿಲ ಬೆನಕೆ ಮನವಿ


ಬೆಳಗಾವಿ ೧೩ : ಸಕಲ ಮರಾಠಾ ಸಮಾಜ ಬೆಳಗಾವಿ ವತಿಯಿಂದ ೧೫ ನೇ ಏಪ್ರಿಲ್ ರವಿವಾರದಂದು ಬೆಳಗಾವಿ ನಗರದ ಆದರ್ಶ ವಿದ್ಯಾ ಮಂದಿರ ಶಾಲಾ ಆವರಣ, ಗ್ರಾಮೀಣ ಪೊಲೀಸ್ ಠಾಣೆ ಹತ್ತಿರ, ವಡಗಾವಿಯಲ್ಲಿ ಮರಾಠಾ ಸಮಾಜದ ಗುರುಗಳಾದ ಶ್ರೀ. ಶ್ರೀ. ಶ್ರೀ. ಮಂಜುನಾಥ ಭಾರತಿ ಸ್ವಾಮಿಜಿಗಳ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕೋಲ್ಹಾಪೂರದ ಛತ್ರಪತಿ ಸಂಭಾಜಿ ರಾಜೆ ಇವರ ಅಮೃತ ಹಸ್ತದಿಂದ ಮರಾಠಾ ಸಮಾಜದ ಗುರುಗಳಾದ ಶ್ರೀ. ಶ್ರೀ. ಶ್ರೀ. ಮಂಜುನಾಥ ಭಾರತಿ ಸ್ವಾಮಿಜಿಗಳ ಪಾದಪೂಜೆ ಹಾಗೂ ಸನ್ಮಾನ ಕಾರ್ಯಕ್ರಮವು ಜರುಗುವುದಾಗಿ ಶಾಸಕ ಅನಿಲ ಬೆನಕೆರವರು ತಿಳಿಸಿರುತ್ತಾರೆ.
ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಎಲ್ಲ ಗಣ್ಯ ವ್ಯಕ್ತಿಗಳು, ಪ್ರಮುಖರು, ಮರಾಠಾ ಸಮಾಜದ ಹಿರಿಯ ನಾಗರಿಕರು, ಯುವಕ ಯುವತಿಯರು ಲಕ್ಷಾಂತರ ಸಂಖ್ಯೆಯಲ್ಲಿ ಮರಾಠಾ ಸಮಾಜದ ಏಳ್ಗೆಗಾಗಿ ಒಗ್ಗಟ್ಟಿನಿಂದ ಭಾಗವಹಿಸಿ ಗುರುವಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿಯ ಮಾಡಿದರು.


Leave a Reply