This is the title of the web page
This is the title of the web page

Please assign a menu to the primary menu location under menu

Local News

ಹೈಟೆಕ್ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ


ಬೆಳಗಾವಿ: ಅತೀ ವೇಗವಾಗಿ ಬೆಳೆಯುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಶಾಲಾ ಮಕ್ಕಳು ತ್ವರಿತಗತಿಯಲ್ಲಿ ಪಠ್ಯವನ್ನು ಗ್ರಹಿಸಲು ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಗಳ ಸೇವೆ ಅತ್ಯಗತ್ಯವಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯಪಟ್ಟರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಕಡೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ 2 ಹೈಟೆಕ್ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಗಳ ಸೇವೆಯನ್ನು ಕಲ್ಪಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ತಂತ್ರಜ್ಞಾನ ವಲಯದಲ್ಲಿ ಆಗುತ್ತಿರುವ ಭಾರಿ ಬದಲಾವಣೆಗಳು ಶಿಕ್ಷಣ ವಲಯವನ್ನು ಸಹ ಪ್ರಭಾವಿಸುತ್ತಿವೆ. ಕಲಿಕೆ, ಬೋಧನೆ, ಪಠ್ಯಕ್ರಮದಲ್ಲಿ ಹೊಸ ಸಂಚಲನೆಗಳನ್ನು ಉಂಟುಮಾಡುತ್ತಿವೆ. ಒಟ್ಟಾರೆಯಾಗಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಸೇವೆಗಳು ಮಕ್ಕಳಿಗೆ ಅನುಕೂಲಕರವಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಸಹ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಬೆಳಗಾವಿ ಗ್ರಾಮೀಣ ಯಾವುದೇ ಕಾರಣಕ್ಕೂ ಹಿಂದುಳಿಯಬಾರದೆನ್ನುವ ಮಹದಾಸೆಯಿಂದ ಶಿಕ್ಷಣ ಕ್ಷೇತ್ರಗಳಿಗೂ ಒತ್ತು ನೀಡುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಕರೆಮ್ಮ ಹುಚ್ಚನವರ, ಈರನಗೌಡ ಪಾಟೀಲ, ಮಲ್ಲೇಶಿ ಗಿರಿಯಾಲ, ರಮೇಶ ಮರಕಟ್ಟಿ, ಶಿವಪ್ಪ ಕುಂಬಾರ, ಮಂಜುನಾಥ ಹುಬ್ಬಳ್ಳಿ, ರಮೇಶ ವಡ್ಡಿನ, ಮಂಜುನಾಥ ಬೈರೋಜಿ, ತಾಯಪ್ಪ ಮರಕಟ್ಟಿ, ನಾಗೇಶ, ಮಾರುತಿ ಸಾರಾವರಿ, ಗದಿಗೆಪ್ಪ ವಡ್ಡಿನ, ಸುರೇಶ ಸಕ್ರಪ್ಪನವರ, ಎಸ್ ಡಿಎಂಸಿ ಅಧ್ಯಕ್ಷರು, ಶಾಲಾ ಮಕ್ಕಳು, ಜ್ಞಾನಸುಧಾ ಇನ್ನೋವೇಟಿವ್ ಸೊಲ್ಯೂಷನ್ಸ್ ನ ಸಿಇಒ ರೋಹಿತ್ ಡಿ. ಎಮ್., ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಡಿ.ಎಮ್., ಶಾಲಾ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.


Gadi Kannadiga

Leave a Reply