ಬೆಳಗಾವಿ – ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಮಂಜೂರು ಮಾಡಿಸಿದ್ದಕ್ಕಾಗಿ ಗ್ರಾಮದ ಜನರು ಕೃತಜ್ಞತೆಯ ಪ್ರತೀಕವಾಗಿ ಸನ್ಮಾನಿಸಿದ ಪರಿ ಕಂಡು ಶಾಸಕಿ ಲಕ್ಷಿ÷್ಮ ಹೆಬ್ಬಾಳಕರ್ ಭಾವುಕರಾಗಿ ಆನಂದಭಾಷ್ಪ ಸುರಿಸಿದರು.
ಸುಳಗಾ (ವೈ) ಗ್ರಾಮದ ಶ್ರೀ ಭಾವಕೇಶ್ವರಿ ಮಂದಿರದ ಅಭಿವೃದ್ಧಿಯ ಸಲುವಾಗಿ ಲಕ್ಷಿ÷್ಮ ಹೆಬ್ಬಾಳಕರ್ ೨೩.೨೪ ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಜನರು, ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ಸೇರಿ ಆತ್ಮೀಯ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು.
ನನ್ನನ್ನು ಶಾಸಕಿಯಾಗಿ ನೀವು ಆಯ್ಕೆ ಮಾಡಿದ್ದೀರಿ. ನಿಮ್ಮ ಕೆಲಸ ಮಾಡಿಕೊಡುವ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಆದರೆ ನೀವು ನನ್ನನ್ನು ಮನೆಯ ಮಗಳಂತೆ ಹರಸಿ, ಆಶೀರ್ವದಿಸಿ ಸನ್ಮಾನಿಸಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ನಿಮ್ಮ ಪ್ರೀತಿಗೆ ಹೇಗೆ ಪ್ರತಿಕ್ಕಿಯಿಸಬೇಕೆಂದು ತಿಳಿಯುತ್ತಿಲ್ಲ ಎಂದು ಕಣ್ಣೀರು ಸುರಿಸಿದರು.
ನಿಮ್ಮ ಈ ತುಂಬು ಹೃದಯದ ಪ್ರೀತಿ, ಪ್ರೋತ್ಸಾಹ, ವಿಶ್ವಾಸಕ್ಕೆ ನನ್ನ ಮನ ತುಂಬಿ ಬಂದಿ?ದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಕಾರ್ಯಕರ್ತರು ಇದ್ದರು.