This is the title of the web page
This is the title of the web page

Please assign a menu to the primary menu location under menu

Local News

ದಿ.ಬೆಟಗೇರಿ ಕೃಷ್ಣಶರ್ಮ ಅವರ ದತ್ತಿ ಕಾರ್ಯಕ್ರಮದ ನಿಮಿತ್ತ ಉಪನ್ಯಾಸ ಮತ್ತು ದಿ.ಪ್ರೊ.ಜ್ಯೋತಿ ಹೊಸೂರ ಅವರ ಬದುಕು ಬರಹ ಕುರಿತು ಉಪನ್ಯಾಸ


ಬೆಳಗಾವಿ:೦೫: ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ಸಹಯೋಗ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಗೋಕಾಕ ಮತ್ತು ಗೋಕಾಕ ಶಿಕ್ಷಣ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ(ಬಿಈಡಿ)ಗೋಕಾಕ ಸಹಯೋಗದಲ್ಲಿ ದಿ.ಬೆಟಗೇರಿ ಕೃಷ್ಣಶರ್ಮ ಅವರ ದತ್ತಿ ಕಾರ್ಯಕ್ರಮದ ನಿಮಿತ್ತ ಉಪನ್ಯಾಸ ಮತ್ತು ದಿ.ಪ್ರೊ.ಜ್ಯೋತಿ ಹೊಸೂರ ಅವರ ಬದುಕು ಬರಹ ಕುರಿತು ಉಪನ್ಯಾಸ ಹಾಗೂ ಕಾವ್ಯ ಗಾಯನ ಕಾರ್ಯಕ್ರಮವು, ಮಂಗಳವಾರ ದಿ:೧೨/೦೪/೨೦೨೨ ರಂದು, ಮಧ್ಯಾಹ್ನ:೩:೦೦ ಕ್ಕೆ, ಸ್ಥಳ:ಜಿ.ಇ.ಎಸ್. ಬಿಈಡಿ ಕಾಲೇಜು ಗೋಕಾಕದಲ್ಲಿ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಗೋಕಾಕ ದ ಜನಪ್ರೀಯ ಶಾಸಕರಾದ ಸನ್ಮಾನ.್ಯ ಶ್ರೀ ರಮೇಶಣ್ಣಾ ಲ. ಜಾರಕಿಹೊಳಿ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಜಿ.ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತರಾದ, ಬೈಲಹೊಂಗಲದ ಹಿರಿಯ ಪತ್ರಕರ್ತರು ಶ್ರೀ ಈಶ್ವರ ಹೋಟಿ ಅವರಿಗೆ ಗೌರವ ಸನ್ಮಾನ ಸಲ್ಲಿಸಲಾಗುತ್ತದೆ. ಗೋಕಾಕ ಶಿಕ್ಷಣ ಸಂಸ್ಥೆ ಚೇರಮನ್ನರು ಶ್ರೀ ವ್ಹಿ. ಎ. ಕಡಕೋಳ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕ.ಸಾ.ಪ.ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೋಕಾಕದ ಹಿರಿಯ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಅಕ್ಕಿ ಅವರು ಆನಂದಕಂದರ ಕಾವ್ಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬೆಳಗಾವಿ ಸಾಹಿತಿಗಳಾದ ಶ್ರೀ ಎ.ಎ. ಸನದಿ ಅವರು ದಿ:ಪ್ರೊ. ಜ್ಯೋತಿ ಹೊಸೂರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಶ್ರೀ ಆರ್.ಎಮ್.ವಾಲಿ ಕಾರ್ಯದರ್ಶಿಗಳು ಜಿ.ಇ.ಎಸ್. ಗೋಕಾಕ, ಶ್ರೀ ವಿ.ವಿ.ಮೋದಿ ಪ್ರಾಚಾರ್ಯರು ಜಿ.ಇ.ಎಸ್. ಬಿಈಡಿ ಕಾಲೇಜು ಗೋಕಾಕ, ಶ್ರೀಮತಿ ಭಾರತಿ ಮದಬಾವಿ ಅಧ್ಯಕ್ಷರು ಕ.ಸಾ.ಪ.ತಾ.ಘಟಕ ಗೋಕಾಕ, ಸರ್ವ ಪದಾಧಿಕಾರಿಗಳು, ಕ.ಸಾ.ಪ. ಗೋಕಾಕ ಹಾಗೂ ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಸಾಹಿತಿಗಳು, ಕಲಾವಿದರು, ಕಸಾಪ ಸರ್ವ ಸದಸ್ಯರು ಮತ್ತು ಸಮಸ್ತ ಕನ್ನಡ ಮನಸ್ಸುಗಳು ಗೌರವ ಉಪಸ್ಥಿತಿಯಲ್ಲಿರುವರು. ಶ್ರೀಮತಿ ವಿದ್ಯಾ ಮಗದುಮ್, ಶ್ರೀಮತಿ ರಾಜಶ್ರೀ ಬಿರಾದಾರ, ಶ್ರೀಮತಿ ವೀಣಾ ತಮ್ಮಣ್ಣಿ, ಶ್ರೀಮತಿ ಅಶ್ವಿನಿ ವಿರಕ್ತಿಮಠ, ಶ್ರೀಮತಿ ಆಶಾ ಯಮಕನಮರಡಿ, ಶ್ರೀ ಮಂಜುನಾಥ ಮುನವಳ್ಳಿ, ಶ್ರೀಮತಿ ರಾಜೇಶ್ವರಿ ಹಿರೇಮಠ ಗೀತಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ. ಸಾಹಿತಿಗಳು, ಕಲಾವಿದರು, ಬೆಳಗಾವಿ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ವಿನಂತಿಸಿಕೊಂಡಿದ್ದಾರೆ.


Gadi Kannadiga

Leave a Reply