ಬೆಳಗಾವಿ:೦೩-ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ ವತಿಯಿಂದ, ರವಿವಾರ ದಿ:೦೬/೦೮/೨೦೨೩ ರಂದು ಮುಂಜಾನೆ:೧೧:೩೦ಕ್ಕೆ ಕನ್ನಡ ಭವನ ನೆಹರು ನಗರ ಬೆಳಗಾವಿಯಲ್ಲಿ ವಿವಿಧ ದತ್ತಿ ಕಾರ್ಯಕ್ರಮಗಳ ಉಪನ್ಯಾಸ ಮತ್ತು ಕಾವ್ಯಗಾಯನ ನಡೆಯಲಿವೆ. ಕಾರ್ಯಕ್ರಮದ ಉದ್ಘಾಟಕರಾಗಿ ಬೆಳಗಾವಿ ಹಿರಿಯ ಸಾಹಿತಿಗಳಾದ ಶ್ರೀ ಸ ರಾ ಸುಳಕೂಡೆ ಅವರು ಆಗಮಿಸಲಿದ್ದಾರೆ. ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರು, ಶ್ರೀಮತಿ.ಮಂಗಲಾ ಶ್ರೀ ಮೆಟಗುಡ್ಡ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀಮತಿ.ಶಿವಲೀಲಾ ಬಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕನ್ನಡ ಉಪನ್ಯಾಸಕರು, ಕೆ.ಎಲ್.ಇ.ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿಯ ಶ್ರೀ ಬಿ ಬಿ ಮಠಪತಿ ಅವರು “ವಚನ ಸಾಹಿತ್ಯದ ಮೂಲ ಪುರುಷ ಶರಣ ಬಿಬ್ಬಿ ಬಾಚಯ್ಯ” ಅವರ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ. ಶ್ರೀಮತಿ ಶೈಲಜಾ ಭಿಂಗೆ ಇವರಿಂದ ಭಾವಗೀತೆ ಗಾಯನ ವಿಜೇತÀ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಶ್ರೀ ಮಲ್ಲಿಕಾರ್ಜುನ ಕನಶೆಟ್ಟಿ, ಶ್ರೀ ಮಹಾಂತೇಶ ಗಂ ತಾಂವಶಿ, ಕು.ಪ್ರೀತಿ ಸವದಿ ಇವರೆಲ್ಲರಿಗೂ ಗೌರವ ಸನ್ಮಾನ ಮಾಡಲಾಗುವುದು. ಶ್ರೀಮತಿ.ಭಾರತಿ ಮದಭಾವಿ ಅವರು ಡಾ. ಬೆಟಗೇರಿ ಕೃಷ್ಣಶರ್ಮ ಅವರ ಪರಿಚಯವನ್ನು ಮಾಡಲಿದ್ದಾರೆ. ಶ್ರೀಮತಿ ಪ್ರತಿಭಾ ಕಳ್ಳಿಮಠ, ಶ್ರೀಮತಿ ರಾಜೇಶ್ವರಿ ಹಿರೇಮಠ, ಶ್ರೀಮತಿ ನಂದಿತಾ ಮಾಸ್ತಿಹೊಳಿಮಠ, ಶ್ರೀ ಶ್ರೀರಂಗ ಜೋಶಿ, ಶ್ರೀ ಬಾಳಗೌಡ ಶಂಕರ ದೊಡ್ಡಬಂಗಿ, ಇವರೆಲ್ಲರೂ ಡಾ.ಬೆಟಗೇರಿ ಕೃಷ್ಣಶರ್ಮ ಅವರ ಕವನಗಳ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ಕ.ಸಾ.ಪ. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಹಾಗೂ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು, ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ವಿನಂತಿಸಿಕೊಂಡಿದ್ದಾರೆ.
Gadi Kannadiga > Local News > ವಿವಿಧ ದತ್ತಿ ಕಾರ್ಯಕ್ರಮಗಳ ಉಪನ್ಯಾಸ ಮತ್ತು ಕಾವ್ಯಗಾಯನ
ವಿವಿಧ ದತ್ತಿ ಕಾರ್ಯಕ್ರಮಗಳ ಉಪನ್ಯಾಸ ಮತ್ತು ಕಾವ್ಯಗಾಯನ
Suresh03/08/2023
posted on