ಬೆಳಗಾವಿ, ಮಾ.೧೭: ೨೦೨೩ ರಲ್ಲಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದಿಂದ ಎಲ್ಲ ರಾಜಕೀಯ ಪಕ್ಷಗಳ ಸಭೆಯನ್ನು ಜರುಗಿಸಿ, ರಾಜಕೀಯ ಪಕ್ಷಗಳು, sಸಾರ್ವಜನಿಕರು ಚುಣಾವಣೆಗೆ ಸ್ಪರ್ಧಿಸಲಿರುವ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಇತರರು ಪಾಲಿಸಬೇಕಾದ ಚುನಾವಣಾ ನೀತಿ ಸಂಹಿತೆಗಳ ಕುರಿತು ಈಗಾಗಲೇ ತಿಳಿಸಲಾಗಿದೆ.
ಬೆಳಗಾವಿ ಜಿಲ್ಲೆ, ಹಾಗೂ ಬೆಳಗಾವಿ ತಾಲೂಕಿನಲ್ಲಿ ಒಳಪಡುವ ೧೩-ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿನ ಸಂತಿ ಬಸ್ತವಾಡ ಗ್ರಾಮದ ಶಾಲಾ ಮೈದಾನ ಒಂದರಲ್ಲಿ ಮಾರ್ಚ.೧೫ ೨೦೨೩ ರಂದು ರಾತ್ರಿ ೯ ಗಂಟೆಗೆ ಎಸ್ಸಿ, ಎಸ್ಟಿ ಸಮಾವೇಶದ ಹೆಸರಿನಲ್ಲಿ, ಮತದಾರರಿಗೆ ಆಮಿಷ ಒಡ್ಡುವ ಉದ್ದೇಶದಿಂದ, ಸುಮಾರು ೩೦೦೦ ಜನರನ್ನು ಸೇರಿಸಿದ್ದಾರೆ ಎಂಬ ದೂರು ಸ್ವೀಕೃತವಾದ ಮೇರೆಗೆ ಚುನಾವಣಾ ಫ್ಲೆöÊಯಿಂಗ್ ಸ್ಕಾ÷್ವಡ್ ತಂಡವು ದಾಳಿ ಮಾಡಿದ್ದು, ಬಾಡೂಟ ವ್ಯವಸ್ಥೆಯನ್ನು ಮಾಡಿರುವುದು ಕಂಡುಬಂದಿದ್ದು, ಅಡುಗೆಗೆ ಬಳಸಲಾದ ಪಾತ್ರೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಚುನಾವಣಾ ಅಕ್ರಮ ಎಸಗಿದ ಆರೋಪದ ಮೇರೆಗೆ ಸಂತಿಬಸ್ತವಾಡ ನ ನಾಗೇಂದ್ರ ಬಾಳಪ್ಪ ನಾಯಿಕ, ನಾಗೇಶ ಮನ್ನೋಳಕರ ಮತ್ತು ಇತರರ ವಿರುದ್ಧ ಪ್ರಥಮ ವರ್ತಮಾನ ವರದಿ(ಈIಖ) ಅನ್ನು ದಾಖಲಿಸಲಾಗಿದೆ ಎಂದು ೧೩-ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಚುಣಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಚುನಾವಣಾ ಅಕ್ರಮ: ಆರೋಪಿಗಳ ವಿರುದ್ಧ ಕಾನೂನು ಕ್ರಮ
ಚುನಾವಣಾ ಅಕ್ರಮ: ಆರೋಪಿಗಳ ವಿರುದ್ಧ ಕಾನೂನು ಕ್ರಮ
Suresh17/03/2023
posted on
More important news
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
24/05/2023