This is the title of the web page
This is the title of the web page

Please assign a menu to the primary menu location under menu

Local News

ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ : ಶಶಿಧರ ಎಮ್ ಗೌಡಾ


ಸವದತ್ತಿ ೩೦ ಮನುಷ್ಯರಾದ ನಮಗೆ ಕಾನೂನಿನ ಅರಿವು ಅಗತ್ಯವಾಗಿ ಬೇಕು ಅದರಲ್ಲೂ ಈಗಿನ ಯುವಕರಲ್ಲಿ ಕಾನೂನಿನ ಅರಿವು ಇಲ್ಲದ ಕಾರಣ ಅವರು ದಾರಿತಪ್ಪುತ್ತೊದ್ದಾರೆ, ವಾಹನ ಚಲಾಯಿಸುವ ಸಂದರ್ಭದಲ್ಲಿ ಅತ್ಯವಶ್ಯವಾಗಿ ಚಾಲನಾ ಪತ್ರವನ್ನು ಅವಶ್ಯವಾಗಿ ಇಟ್ಟುಕೊಳ್ಳಬೇಕು. ಇದು ಪೋಲಿಸರಿಗೆ ತೋರಿಸಲು ಮಾತ್ರಬೇಕು ಎಂದು ಯಾರೂ ಭಾವಿಸಬಾರದು ಚಾಲನಾ ಪರವಾನಿಗೆ ಪತ್ರ ಮತ್ತು ಆ ವಾಹನಕ್ಕೆ ಬೇಕಾಗುವ ಎಲ್ಲ ದಾಖಲೆ ಪತ್ರಗಳನ್ನು ಅತ್ಯವಶ್ಯಾಗಿ ಇಟ್ಟುಕೊಳ್ಳಬೇಕು ಏನಾದರೂ ಅನಾಹುತಗಳು ಸಂಭವಿಸಿದರೆ ಪ್ರಾಣ ಹಾನಿಯಾದರೆ ಅವರಿಗೆ ಆ ಗಾಡಿಯ ಮಾಲಿಕರೆ ಜವಾಬ್ದಾರರಾಗುತ್ತಾರೆ. ಆದ್ದರಿಂದ ಅಗತ್ಯ ದಖಲೆ ಪತ್ರಗಳನ್ನು ತಮ್ಮ ಹತ್ತಿರ ಇಟ್ಟುಕೊಂಡೆ ವಾಹನಗಳನ್ನು ಚಾಲನೆ ಮಾಡಬೇಕು ಎಂದು ನ್ಯಾಧೀಶ ರಾದ ಶಶಿಧರ ಎಮ್ ಗೌಡ ರವರು ಹೇಳಿದರು
ಅವರು ಪಟ್ಟಣದ ಗಾಂದೀಚೌಕದಲ್ಲಿ ನಡೆಯುತ್ತಿರುವ ನವರಾತ್ರಿ ನಾಡಹಬ್ಬ ಉತ್ಸವದ ನಾಲ್ಕನೇಯ ದಿನದ ನ್ಯಾಯವಾದಿಗಳ ವೇದಿಕೆಯ ಮೇಲೆ ಮುಖ್ಯ ಅಥಿತಿಗಳಾಗಿ ಮಾತನಾಡಿದರು
ನಂತರ ಇನ್ನೂರ್ವ ನ್ಯಾಧೀಶರಾದ ಸಿದ್ರಾಮರೆಡ್ಡಿ ಮಾತನಾಡಿ ಈಗಿನ ಜನರಿಗೆ ಕಾನೂನಿನ ಅರಿವಿಲ್ಲದೆ ಶಿಕ್ಷಗೆ ಗುರಿಯಾಗುತ್ತಿದ್ದಾರೆ, ಮನುಷ್ಯನಿಗೆ ಕಾನೂನಿನ ಅರಿವು ಅತ್ಯವಶ್ಯವಾಗಿ ಬೇಕು ಎಂದರು
ನಂತರ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಹಿರಿಯ ನ್ಯಾಯವಾದಿಗಳಾದ ಬಿ ಎಚ್ ರಜಪೂತ ರವರು ಮಾತನಾಡಿ ನಾಡಹಬ್ಬ ನವರಾತ್ರಿ ಉತ್ಸವ ಸಮಿತಿಯವರು ಮಾಡುತ್ತಿರುವ ಈ ಹಬ್ಬವು ಉತ್ತಮವಾದ ಕಾರ್ಯ ನಾಡಿನ ಎಲ್ಲ ಕಲಾವಿಧರನ್ನು ಸಾಹಿತಿಗಳನ್ನು ಗುರುತಿಸಿ ಅವರನ್ನು ಆಹ್ವಾನಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದರು
ಕಾರ್ಯಕ್ರಮ ದಿವ್ಯ ಸಾನಿಧ್ಯವಹಿಸಿದ ಬ್ರಹ್ಮಾನಂದ ಆಶ್ರಮದ ಶಿವಾನಂದ ಮಹಾಸ್ವಾಮಿಗಳು ಮತ್ತು ಉಗರಗೋಳ ನಿರ್ವಾಣೆಶ್ವರ ಮಠದ ಮಹಾಂತ ಮಹಾಸ್ವಾಮಿಗಳು ಆಗಮಿಸಿ ಮಾತನಾಡಿದರು
ಅಥಿತಿಗಳಾಗಿ ಬಸವರಾಜ ಪುರದಗುಡಿ ್ತಉಪಸ್ಥಿತರಿದ್ದರು ನ್ಯಾಯವಾದಿಗಳಾದ ಸಿ ವಿ ಸಾಂಬಯ್ಯನವರಮಠ, ಎಸ್ ಎಸ್ ಮಾನೆ ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಎಂಭವಿಷಯವಾಗಿ ಉಪನ್ಯಾಸ ಮಾಡಿದರು
ನಂತರ ನಾಡಹಬ್ಬ ಉತ್ಸವ ಸಮಿತಿಯಿಂದ ಬಸವರಾಜ ಅತ್ತಿಗೇರಿ ಹಾಗೂ ಸಂಘಡಿಗರು ನ್ಯಾಯಾಧೀಶರನ್ನು ಸನ್ಮಾನಿಸಿ ಗೌರವಿಸಿದರು ಸಾಹಿತಿ ಶ್ರೀಧರ ಆಸಂಗಿಹಾಳ ಸ್ವಾಗತಿಸಿದರು , ಪ್ರಕಾಶ ಬಾಳೋಜಿ ಮತ್ತು ಹುಸೇನ ನದಾಪ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು


Gadi Kannadiga

Leave a Reply