ಬೆಳಗಾವಿ ೨೬ : ದಿನಾಂಕ ೨೬.೦೪.೨೦೨೨ ರ ಮಂಗಳವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಬೆಳಗಾವಿ ಉತ್ತರ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವಿವಿಧ ಇಲಾಖೆಗಳಿಂದ ಒಟ್ಟಾರೆ ರೂ. ೧೨.೬೦ ಕೋಟಿಗಳ ಅನುದಾನದಡಿಯಲ್ಲಿ ಮೂಲಭೂತ ಸೌಲಭ್ಯಗಳಾದ ಅಲಂಕಾರಿಕ ವಿದ್ಯುತ ದೀಪಗಳ ಅಳವಡಿಕೆ, ರಸ್ತೆ ನಿರ್ಮಾಣ, ನಾಲಾ ನಿರ್ಮಾಣ, ಡ್ರೆöÊನೇಜ, ಪೇವರ್ಸ ಹಾಗೂ ಕಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆಯನ್ನು ಸಲ್ಲಿಸುವುದರೊಂದಿಗೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇಂದು ನಗರದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನವಸತಿ ಪ್ರದೇಶಗಳ ಅಭಿವೃಧ್ದಿಗಾಗಿ ಎಸ್.ಸಿ.ಪಿ ಎಸ್.ಟಿ.ಪಿ ಯೋಜನೆಯಡಿಯಲ್ಲಿ ರೂ. ೦೩.೦೦ ಕೋಟಿಗಳ ಅನುದಾನದಲ್ಲಿ ರಸ್ತೆ ಮತ್ತು ಗಟಾರು ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರಲ್ಲದೆ ಮಹಾನಗರ ಪಾಲಿಕೆಯ ೧೫ ನೇ ಹಣಕಾಸು ಯೋಜನೆಯಡಿ ರೂ. ೧೬೦ ಲಕ್ಷಗಳ ವೆಚ್ಚದಲ್ಲಿ ಕಪಿಲೇಶ್ವರ ರಸ್ತೆ ಹತ್ತಿರದಲ್ಲಿ ಶನಿ ಮಂದಿರದಿಂದ ಸಂಜಯ ಪಾಟೀಲ ಅಂಗಡಿ ವರೆಗೆ ಪೇವರ್ಸ ಅಳವಡಿಸುವುದರೊಂದಿಗೆ ಕಪಿಲೇಶ್ವರ ರಸ್ತೆಯ ರೈಲ್ವೆ ಟ್ರಾö್ಯಕ್ ನಿಂದ ಓಮ್ ಆಸ್ಪತ್ರೆವರೆಗೆ ಡ್ರೆöÊನೇಜ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡರು ನಂತರದಲ್ಲಿ ಬೆಳಗಾವಿ ನಗರಾಬಿವೃದ್ದಿ ಪ್ರಾದಿಕಾರದ ಯೋಜನೆಯಡಿ ರೂ. ೮ ಕೋಟಿಗಳ ವೆಚ್ಚದಲ್ಲಿ ರಾಮತೀರ್ಥ ನಗರದಲ್ಲಿ ಅಲಂಕಾರಿಕ ವಿದ್ಯುತ ದೀಪಗಳ ಅಳವಡಿಕೆ, ಆವರಣ ಗೋಡೆ ನಿರ್ಮಾಣ ಹಾಗೂ ಉದ್ಯಾನವನಗಳ ಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಒಟ್ಟಾರೆಯಾಗಿ ಮತಕ್ಷೇತ್ರದಲ್ಲಿ ಇಂದುವಿವಿಧ ಇಲಾಖೆಗಳಿಂದ ರೂ. ೧೨.೬೦ ಕೋಟಿಗಳ ಅನುದಾನದಲ್ಲಿ ಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆರವರೊಂದಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ಮಾರ್ಟ ಸಿಟಿ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಬುಡಾ ಅಧಿಕಾರಿಗಳು, ಗುತ್ತಿಗೆದಾರರು, ಸ್ಥಳೀಯ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Gadi Kannadiga > Local News > ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಚಾಲನೆ
More important news
ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ
19/05/2022