ಬೆಳಗಾವಿ ೩೧ :ದಿನಾಂಕ ೩೧.೦೩.೨೦೨೨ ರ ಗುರುವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಬೆಳಗಾವಿ ಉತ್ತರ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಒಟ್ಟಾರೆ ರೂ. ೧೨.೦೦ ಕೋಟಿಗಳ ಅನುದಾನದಡಿಯಲ್ಲಿ ಮೂಲಭೂತ ಸೌಲಭ್ಯಗಳಾದ ರಸ್ತೆ, ನಾಲಾ, ಡ್ರೆöÊನೇಜ, ಸಿಡಿ ನಿರ್ಮಾಣ ಹಾಗೂ ಪೇವರ್ಸ ರಸ್ತೆ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆಯನ್ನು ಮಾಡುವುದರೊಂದಿಗೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಮತಕ್ಷೇತ್ರದ ಅಭಿವೃಧ್ದಿಗಾಗಿ ಈಗಾಗಲೇ ಸರಕಾರದಿಂದ ಸಾಕಷ್ಟು ಅನುದಾನ ಮಂಜೂರಾಗಿದ್ದು, ಅಭಿವೃಧ್ದಿ ಕಾಮಗಾರಿಗಳು ಭರದಿಂದ ಸಾಗಿವೆ ಹಾಗೂ ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಅದರಂತೆಯೇ ಇಂದು ಡೋರ ಗಲ್ಲಿ, ಸರ್ಕಾರಿ ಆಸ್ಪತ್ರೆಯ ಒಳ ರಸ್ತೆ, ಹನುಮಾನ ನಗರ, ಟಿ.ವಿ. ಸೆಂಟರ್, ಶಾಹು ನಗರ, ಭಜಂತ್ರಿ ಗಲ್ಲಿ ಬಸವ ಕಾಲೋನಿ, ಕಣಬರ್ಗಿಯ ಶಾಂತಿ ಸಾಗರ ಗಲ್ಲಿ, ರಾಮತೀರ್ಥ ಗಲ್ಲಿ, ಕುಂಬಾರ ಗಲ್ಲಿ, ಮಹಾಂತೇಶ ನಗರ, ಅಸಾದಖಾನ ಸೋಸಾಯಿಟಿ, ಹಕೀಮ ಕಾಲೋನಿ, ಮುತ್ಯಾನಟ್ಟಿ, ಹಾಗೂ ಗ್ಯಾಂಗವಾಡಿಯಲ್ಲಿ ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಇಂದು ರೂ. ೧೨.೦೦ ಕೋಟಿಗಳ ವೆಚ್ಚದಲ್ಲಿ ಅಲ್ಲಿನ ಮೂಲಭೂತ ಸೌಲಭ್ಯಗಳಾದ ರಸ್ತೆ, ಡ್ರೆöÊನೇಜ, ಪೇವರ್ಸ ರಸ್ತೆ, ಸಿಡಿ ನಿರ್ಮಾಣ, ರಸ್ತೆ ಮರು ಡಾಂಬರೀಕರಣ ಹಾಗೂ ನಾಲಾ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಲಾಗಿದೆ ಎಂದರು.
ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ರೂ. ೫೦.೦೦ ಕೋಟಿಗಳಲ್ಲಿ ಇನ್ನೂ ಹಲವಾರು ಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಒಟ್ಟಾರೆಯಾಗಿ ಉತ್ತರ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಜನರು ಸಹಾಯ ಸಹಕಾರವನ್ನು ನೀಡಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವಂತೆ ಆಶೀರ್ವದಿಸಬೇಕೆಂದು ಮನವಿಯನ್ನು ಮಾಡಿದ ಅವರು ಸಕಾಲಕ್ಕೆ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕೆಂದು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರಸೇವಕರು ಸಂದೀಪ ಜಿರಗ್ಯಾಳ, ಆಶೋಕ ಥೋರಾಟ, ನ್ಯಾಯವಾದಿ ಎ.ಎಮ್.ಪಾಟೀಲ, ನಗರಸೇವಕರು ಶ್ರೇಯಸ ನಾಕಾಡಿ, ವಿಜಯ ಕೊಡಗನೂರ, ವಿನೋದ ಲಂಗೋಟಿ, ಕಟಾಂಬಳೆ, ಎಕ್ಸ ಮೇಯರ ಚಿಕ್ಕಲದಿನಿ, ವಿನಾಯಕ ಪವಾರ, ಬಾಳು ನಾಯಿಕ, ಸಂದೀಪ ಮೋಹಿತೆ, ಪಠಾಣ, ಬಾಬಾಜಾನ ಮತವಾಲೆ, ಹನಮಂತ ಕಾಗಲಕರ, ಗಣೇಶ ಧೆಡೆ, ಮುರಗೇಂದ್ರಗೌಡಾ ಪಾಟೀಲ, ಭೈರಗೌಡಾ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.
Gadi Kannadiga > Local News > ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಚಾಲನೆ
More important news
ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ
19/05/2022