ಗಡಿ ಕನ್ನಡಿಗ
ಖಾನಾಪುರ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವು ಗೂಂಡಾಗಳು ಮರಾಠಿಯಲ್ಲಿ ದಾಖಲೆಗಳನ್ನು ನೀಡುವಂತೆ ಸದಾ ಗಲಭೆ ಸೃಷ್ಟಿಸುತ್ತಿರುವದು ಹಳೇ ವಿಷಯ ಆದರೆ ಶಾಸಕ ವಿಠ್ಠಲ ಹಲಗೇಕರ ಮರಾಠಿ ಭಾಷೆಗೆ ಆದ್ಯತೆ ನೀಡಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿರುವುದು ಖಂಡನೀಯ ಆದ್ದರಿಂದ ಅವರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯನ ಗೌಡ ಬಣ) ವತಿಯಿಂದ ದೂರು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ವಿಠ್ಠಲ ಹಿಂಡಲಕರ ಸದಾ ಭಾಷಾ ವಿವಾದ ಇಟ್ಟುಕೊಂಡು ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿರುವದೇ ನಾಡದ್ರೋಹಿ ಎಂಇಎಸ್
ಕಾಯಕವಾಗಿದೆ ಎಂಬುದು ಗೊತ್ತಿರುವ ವಿಷಯವೇ ಆಗಿದೆ ಆದರೆ ಕರ್ನಾಟಕ ಸರಕಾರದ ವಿಧಾನ ಸಭೆಗೆ ಆಯ್ಕೆಯಾಗಿರುವ ಶಾಸಕ ವಿಠ್ಠಲ ಹಲಗೇಕರ ನಾಡದ್ರೊಹಿ ಎಂಇಎಸ್ ಮಾತು ಕೇಳಿಕೊಂಡು ಶಾಸಕ ವಿಠ್ಠಲ ಹಲಗೇಕರ ಮರಾಠಿ ಭಾಷೆಗೆ ಆದ್ಯತೆ ನೀಡಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿರುವುದು ಖಂಡನೀಯ ಆದ್ದರಿಂದ ಶಾಸಕರ ಮೇಲೆ ಕ್ರಮ ಕೈಗೊಳ್ಳುವಂತೆ ತಾಲೂಕಾ ತಹಶಿಲ್ದಾರ ಮೂಲಕ ವಿಧಾನ ಸಭಾದ್ಯಕ್ಷರಿಗೆ ದೂರು ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಉಪಾಧ್ಯಕ್ಷ ಭರತೇಶ ಜೋಳದ, ತಾಲೂಕಾ ಸಂಚಾಲಕ ಶ್ರೀಕಾಂತ ಪಾಟೀಲ, ತಮ್ಮನ್ನಾ ಗವನಾಳಿ, ರಾಮಚಂದ್ರ ಪಾಟೀಲ, ಸಿದ್ದು ಕೋಲಕಾರ, ದಿಗಂಬರ ನಾಯಿಕ, ಮಡಿವಾಳಿ ಪಾಟೀಲ, ಮಡಿವಾಳಿ ಗುಣಾಪ್ಪಾಚೆ, ರವಿ ಮಾದಿಗರ, ಬಸವರಾಜ ಬಡಿಗೇರ, ಪರಶುರಾಮ ಉದಿ,ಸಂಜಯ ಕಾರಕದ, ಉಮೇಶ ಎಮ್ಮಿನಕಟ್ಟಿ, ಮಹಾಂತೇಶ ಚವ್ಹಾಣ, ಮುಂತಾದವರು ಉಪಸ್ಥಿತರಿದ್ದರು.