This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ – ವೆಂಗುರ್ಲಾ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಿ : ಶಾಸಕ ಬೆನಕೆ 


ಬೆಳಗಾವಿ :  ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಹಾಗೂ ಮಹಾರಾಷ್ಟ್ರದ ಚಂದಗಡ ಶಾಸಕರಾದ ರಾಜೇಶ ಪಾಟೀಲ ರವರು ಜೊತೆಗೂಡಿ ಬುಧವಾರದಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ ಗಡ್ಕರಿರವರನ್ನು ನವದೆಹಲಿಯಲ್ಲಿ ಬೇಟಿ ಮಾಡಿ ಭಾರತಾಮಾಲಾ ಯೋಜನೆಯಡಿ ಬೆಳಗಾವಿ ವೆಂಗುರ್ಲಾ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡುವ ಕುರಿತು ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾದ್ಯಮಕ್ಕೆ ತಿಳಿಸಿದ ಶಾಸಕರು ಭಾರತಾಮಾಲಾ ಯೋಜನೆಯಡಿ ಬೆಳಗಾವಿ ವೆಂಗುರ್ಲಾ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡುವ ಕುರಿತು ಇಂದು ನವದೆಹಲಿಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ ಗಡ್ಕರಿರವರನ್ನು ಬೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಭಾರತ ಮಾಲಾ ಯೋಜನೆಯಡಿ ಬೆಳಗಾವಿಯಿಂದ ಸುಳಗೆ, ಬಾಚಿ, ಚಂದಗಡ, ಅಂಬೋಲಿ ಮಾರ್ಗವಾಗಿ ಹೀಗೆ ಅಂದಾಜು 127 ಕೀ.ಮೀ ವ್ಯಾಪ್ತಿಯ ಭಾರತಮಾಲಾ ಯೋಜನೆಯಡಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಿದ್ದಲ್ಲಿ ಬೆಳಗಾವಿ ಜಿಲ್ಲೆಯ ಹಾಗೂ ಚಂದಗಡ ತಾಲೂಕು ಗಡಿ ಭಾಗವಾಗಿದ್ದರಿಂದ ಎರಡು ರಾಜ್ಯಗಳ ಸಂಪರ್ಕವು ಉತ್ತಮವಾಗುತ್ತದೆ.

ಇದರಿಂದ ವಿಶೇಷವಾಗಿ ಈ ಭಾಗದಲ್ಲಿನ ಜನರಿಗೆ ಉದ್ಯೋಗ ಅವಕಾಶಗಳು ದೊರೆಯುವುದಲ್ಲದೆ, ಇಲ್ಲಿನ ಕೃಷಿಕರಿಗೆ ಮತ್ತು ಇತರ ವ್ಯಾಪಾರಸ್ಥರು ಉದ್ಯೋಗಗಳಲ್ಲಿ ಪ್ರಗತಿ ಹಾಗೂ ವಿಕಾಸವನ್ನು ಹೊಂದಬಹುದಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಲ್ಲಿ ವಿನಂತಿಸಿದರು. ಶಾಸಕದ್ವಯರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಜೂರು ಮಾಡುವುದಾಗಿ ಭರವಸೆಯನ್ನು ನೀಡಿದರು.


Gadi Kannadiga

Leave a Reply