ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಮಹಾನಗರ ಪಾಲಿಕೆಯು ಇತ್ತಿಚೆಗೆ ಅಂಗಡಿ ಹಾಗೂ ಮನೆಗಳ ಕರಗಳನ್ನು ಈ ಹಿಂದಿನಗಿಂತಲು 3 ರಿಂದ 5 ಪಟ್ಟು ಹೆಚ್ಚು ಮಾಡಿರುವ ವಿಷಯ ತಿಳಿದ ಅವರು ಇಂದು ಮಹಾನಗರ ಪಾಲಿಕೆ ಆಯುಕ್ತರನ್ನು ಬೇಟಿ ಮಾಡಿ 2 ರಿಂದ 3 ವರ್ಷಗಳ ಕಾಲ ಅತೀವೃಷ್ಟಿ ಹಾಗೂ ಕೋರೋನಾ ಮಹಾಮಾರಿಯಿಂದ ಸಾರ್ವಜನಿಕರು ನಷ್ಠದಲ್ಲಿದ್ದು, ಯಾವುದೇ ಆದಾಯ ಮೂಲಗಳಿಲ್ಲದಿರುವುದರಿಂದ ಹೆಚ್ಚಿಸಿರುವ ಕರಗಳನ್ನು ರದ್ದುಪಡಿಸಿ ಈ ಹಿಂದೆ ಇರುವ ಕರಗಳನ್ನೆ ಮುಂದುವರೆಸುವಂತೆ ಪತ್ರವನ್ನು ನೀಡುವ ಮೂಲಕ ತಿಳಿಸಿದರು.
ಇದರ ಕುರಿತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃಧ್ಧಿ ಸಚಿವರ ಗಮನಕ್ಕೆ ತಂದು ಹೊಸದಾಗಿ ಘೋಷಿಸಿರುವ ಕರಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸದಂತೆ ರದ್ದುಪಡಿಸಿ ಮೊದಲಿನ ಕರಗಳನ್ನು ಮುಂದುವರೆಸಲು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದೆಂದರು.