This is the title of the web page
This is the title of the web page

Please assign a menu to the primary menu location under menu

Local News

ಸ್ಮಶಾನ ಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ಅನಿಲ ಬೆನಕೆ ಚಾಲನೆ


ಬೆಳಗಾವಿ : ಬೆಳಗಾವಿಯ ಚವ್ವಾಟ ಗಲ್ಲಿ ಸ್ಮಶಾನ ಭೂಮಿಯಲ್ಲಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಗ್ರೀನ್ ಸೇವಿಯರ್ಸ ಬೆಳಗಾವಿ ಹಾಗೂ ಸುರೇಂದ್ರ ಅನಗೋಳಕರ ಪೌಂಡೇಶನ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಭಾಗಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಚವ್ವಾಟ ಗಲ್ಲಿಯ ಸ್ಮಶಾನ ಭೂಮಿಯಲ್ಲಿ ಪರಿಸರ ಉಳಿಸುವ ಉದ್ದೇಶದೊಂದಿಗೆ ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಲು 1000 ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಆಯೋಜಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ನಗರದ ಜನತೆಯಲ್ಲಿ ಸಸ್ಯಗಳನ್ನು ಬೆಳೆಸುವುದು ಹಾಗೂ ಪರಿಸರದ ಜಾಗೃತಿಯನ್ನು ಮೂಡಿಸುವುದು ಮತ್ತು ಮುಂದಿನ ಪಿಳಿಗೆಗೆ ಉತ್ತಮ ವಾತಾವರಣವನ್ನು ನೀಡುವ ಉದ್ದೇಶದಿಂದ ಶಾಸಕ ಅನಿಲ ಬೆನಕೆ, ಗ್ರೀನ್ ಸೇವಿಯರ್ಸ ಬೆಳಗಾವಿ, ಸುರೇಂದ್ರ ಅನಗೋಳಕರ ಪೌಂಡೇಷನ್, ಚವ್ವಾಟ ಗಲ್ಲಿಯ ಪಂಚ ಕಮೀಟಿರವರು ಹಾಗೂ ಜಿ.ಆಯ್.ಟಿ ಯ 180 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಸಿ ನೆಡುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ನೂರಾರು ಜನ ಯುವಕ ಯುವತಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Gadi Kannadiga

Leave a Reply