This is the title of the web page
This is the title of the web page

Please assign a menu to the primary menu location under menu

Local News

ನಾಲೆಗಳಿಂದ ಈ ವರ್ಷ ನಗರದಲ್ಲಿ ಸಮಸ್ಯೆ ಆಗುವುದಿಲ್ಲ: ಶಾಸಕ ಬೆನಕೆ


ಬೆಳಗಾವಿ : ಕಳೆದ ಹಲವು ವರ್ಷಗಳಿಂದ ಬೆಳಗಾವಿ ನಗರದಲ್ಲಿ ಬಳ್ಳಾರಿ ನಾಲಾ ಹಾಗೂ ಲೇಂಡಿ ನಾಲಾಗಳು ಸಾಕಷ್ಟು ಅವಾಂತರಗಳು ಸೃಷ್ಟಿಸುತ್ತಿದ್ದು, ಈ ವರ್ಷ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ಶಾಸಕ ಅನಿಲ ಬೆನಕೆ ಅವರು ನಾಲೆಗಳ ಸ್ವಚ್ಚಗೊಳಿಸುವ ಕಾರ್ಯ ಮಾಡಿಸಿದ್ದಾರೆ.

ಮಳೆಗಾಲ ಬಂದರೆ ನಗರ ವಾಸಿಗಳಿಗೆ ಈ ನಾಲೆಗಳು ಶಾಪವಾಗಿ ಪರಿಣಮಿಸುತ್ತವೆ. ಆದೆ ಈ ಬಾರಿ ನಗರವಾಸಿಗಳು ನಿಟ್ಟುಸಿರು ಬಿಡುವಂತೆ ಶಾಸಕ ಅನಿಲ ಬೆನಕೆ ಅವರು ಮಾಡಿದ್ದಾರೆ.

ನಾಲೆಗಳ ಸ್ವಚ್ಚತಾ ಕಾರ್ಯ ವೀಕ್ಷಣೆ ಬಳಿಕ ಮಾಹಿತಿ ನೀಡಿರುವ ಅವರು ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿರುವ ಬಳ್ಳಾರಿ ನಾಲಾ ಹಾಗೂ ಲೇಂಡಿ ನಾಲಾಗಳು ಮಳೆಗಾಲದಲ್ಲಿ ನಗರ ವಾಸಿಗಳಿಗೆ ಸಾಕಷ್ಟು ತೊಂದರೆ ನೀಡುತ್ತಿದ್ದು, ನಾಲೆಗಳ ಸ್ವಚ್ಚತೆಯಿಂದ ಮನೆಗಳಿಗೆ ನೀರು ನುಗ್ಗುವುದು ಕಡಿಮೆ ಆಗಿದೆ. ಈ ವರ್ಷವು ನಾಲೆ ನೀರು ಮನೆಗಳಿಗೆ ನುಗ್ಗುವುದನ್ನು ತಪ್ಪಿಸಲು ಏಪ್ರಿಲ್ ತಿಂಗಳಿನಿಂದಲೇ ನಾಲೆಗಳ ಸ್ವಚ್ಚತಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಮುಂದಿನ ಹತ್ತು ದಿನಗಳಲ್ಲಿ ನಾಲೆಗಳ ಸ್ವಚ್ಚಗೊಳಿಸುವ ಕಾರ್ಯ ಮುಗಿಯಲಿದ್ದು, ಈ ವರ್ಷ ನಾಲೆಯಿಂದ ಯಾವುದೇ ತೊಂದರೆಗಳು ಆಗುವುದಿಲ್ಲ ಎಂದು ಶಾಸಕ ಅನಿಲ ಬೆನಕೆ ಅವರು ವಿಶ್ವಾಸವನ್ನು ವ್ಯಕ್ತ ಪಡಿಸಿದರು.


Leave a Reply