This is the title of the web page
This is the title of the web page

Please assign a menu to the primary menu location under menu

Local News

ರಕ್ಷಾಬಂಧನ ನಮ್ಮ ದೇಶದ ಸಹೋದರತೆಯನ್ನು ಗಟ್ಟಿಗೊಳಿಸಲಿ : ಬಾಗೇವಾಡಿ


ಬೆಳಗಾವಿ:ಆಗಷ್ಟ-೧೧: “ಮನುಷ್ಯ ಮೂಲತಃ ಸಂಘ ಜೀವಿ. ಸಾಂಘಿಕ ಜೀವನ ನಡೆಸಲು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ. ತನ್ಮೂಲಕ ವಿವಿಧ ಜನ ಸಮುದಾಯಗಳೊಂದಿಗೆ ಸಹೋದರತೆ ಮತ್ತು ಸೌಹಾರ್ದತೆಯಿಂದ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಆ ನಿಟ್ಟಿನಲ್ಲಿ ರಕ್ಷಾಬಂಧನ ನಮ್ಮ ದೇಶದ ಸಹೋದರತೆಯನ್ನು ಗಟ್ಟಿಗೊಳಿಸಲಿ” ಎಂದು ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಂಕರ ಬಾಗೇವಾಡಿ ಅಭಿಪ್ರಾಯ ಪಟ್ಟರು.
ನಗರದ ಹೊರವಲಯದ ಕಣಬರಗಿಯ ಸಮತಾ ಶಾಲೆಯಲ್ಲಿ ಜರುಗಿದ ‘ರಕ್ಷಾಬಂಧನ ಹಾಗೂ ಶಾಲೆಯ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಮ್ಮ ದೇಶದ ಭವಿಷ್ಯದ ನಾಯಕರಾಗಬಲ್ಲ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ರಾಗದ್ವೇಷರಹಿತ ಮನಸ್ಥಿತಿ ಬೆಳೆಸಿದರೆ ಬಹುಸಂಸ್ಕೃತಿಗಳ ನಮ್ಮ ದೇಶದಲ್ಲಿ ಶಾಂತಿ-ಸಹಬಾಳ್ವೆ ಸಾಧ್ಯವಾಗಬೇಕಾದರೆ ಶಿಕ್ಷಕರ ಜವಾಬ್ದಾರಿ ಗುರುತರವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಬಾಲಕಿಯರು ಬಾಲಕರಿಗೆ, ಶಿಕ್ಷಕಿಯರು ಶಿಕ್ಷಕರಿಗೆ ರಾಖಿ ಕಟ್ಟಿ ಸಹೋದರತೆಯ ಮಹತ್ವ ಸಾರಿದರು.
ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ಶಿಕ್ಷಕರಾದ ತೇಜಸ್ವಿನಿ ಬಾಗೇವಾಡಿ, ಸುನಂದಾ ಪಟ್ಟಣಶೆಟ್ಟಿ, ಶ್ರೀದೇವಿ ಕುಂಬಾರ, ಮಲಿಕಕಜಾನ ಗದಗಿನ, ರೇಣುಕಾ ಶಿರೂರ, ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಭಿನವ ಬಾಗೇವಾಡಿ ಸ್ವಾಗತಿಸಿದರು. ರೋಹಣ ಹಗೇದಾಳ ನಿರೂಪಿಸಿದರು. ಪ್ರತೀಕ್ಷಾ ಅಷ್ಟೇಕರ ವಂದಿಸಿದರು.


Gadi Kannadiga

Leave a Reply