ಯಮಕನಮರಡಿ:- ಕನ್ನಡ ನೆಲ ಜಲ ನಾಡು ನುಡಿ ಸಂಸ್ಕೃತಿ ರಕ್ಷಣೆಗಾಗಿ ಇಂದು ಹಲವಾರು ಕನ್ನಡಪರ ಸಂಘಟನೆಗಳು ಕಾರ್ಯ ಮಾಡುತ್ತಿದ್ದು, ಕನ್ನಡ ಕಟ್ಟುವ ಕೆಲಸ £ತ್ಯವು ನಡೆಯಬೇಕೆಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಸಮೀಪದ ಹಿಡಕಲ್ ಡ್ಯಾಮಿನ ಶ್ರೀ ಶಿವಾಲಯ ಮಂದಿರದ ಸಭಾಭವನದಲ್ಲಿ ವಿಜಯಕರ್ನಾಟಕ ರಕ್ಷಣಾ ವೇದಿಕೆ ಹುಕ್ಕೇರಿಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ ಉಳಿದರೆ ಮಾತ್ರ ನಮ್ಮತನ ಉಳಿಯಲು ಸಾಧ್ಯ ಗಡಿ ವಿವಾದ ಹೆಸರಿನಲ್ಲಿ ಕೆಲವರು ಸಮಾಜದಲ್ಲಿ ಸಾಮರಸ್ಯ ಭಾವನೆಗಳಿಗೆ ದಕ್ಕೆ ತರುವಂತಹ ಕೆಲಸ ಮಾಡುತ್ತಿರುವುದು ಸಲ್ಲದು ಕನ್ನಡ ಭಾಷೆ ಬೆಳವಣಿಗೆಯಲ್ಲಿ ಇಮ್ಮಡಿ ಪುಲಕೇಶಿಯವರ ಕೊಡುಗೆಯು ಅಪಾರವಾಗಿದ್ದು, ಕನ್ನಡ ಶಾಲೆಗಳು ವಿವಿಧತೆಯಲ್ಲಿ ಏಕತೆ ಬಿಂಬಿಸುವ ದೇವಾಲಯಗಳು ಆಗಿವೆ. ಈ ಶಾಲೆಗಳಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಸಂಸ್ಕಾರ ನೈತಿಕ ಮೌಲ್ಯ ಕಲಿಸಲಾಗುತ್ತದೆ. ಇಂದು ಪ್ರತಿಯೊಂದು ಮನೆ ಮನೆಗಳಲ್ಲಿ ಕನ್ನಡಮಯ ವಾತಾವರಣ £ರ್ಮಿಸುವುದು ಅಗತ್ಯವಾಗಿದ್ದು, ಕನ್ನಡದ ಬಗ್ಗೆ ಅಭಿಮಾನಕ್ಕಿಂತ ಸ್ವಾಬಿಮಾನ ಬೇಕು ಎಂದು ರಮೇಶ ಕತ್ತಿ ಹೇಳಿದರು.
ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ ಬಸವರಾಜ ಮಟಗಾರ ಮಾತನಾಡಿ ಪ್ರಾಚೀನ ಇತಿಹಾಸವುಳ್ಳ ಕನ್ನಡ ಭಾಷೆ ನೆಲ ಜಲ ರಕ್ಷಣೆಗಾಗಿ ಪಣತೊಟ್ಟ ಈ ಭಾಗದ ಮಹಿಳೆಯರ ಕನ್ನಡ ಸೇವೆಯು ಅವಿಸ್ಮರಣಿಯವಾದದು, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಮಹಿಳೆಯರು ಮುಂದಾಗಬೇಕಾಗಿದೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾ£ಧ್ಯ ವಹಿಸಿದ್ದ ಘೋಡಗೇರಿ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಆರ್ಶಿವಚನ £Ãಡಿ ಪಾಲಕರು ಮಕ್ಕಳನ್ನು ಒಳ್ಳೆಯ ಸಂಸ್ಕಾರ ಪರಿಸರದಲ್ಲಿ ಬೆಳಸಿ ಉತ್ತಮ ನಾಗರಿಕನಾಗಿ ಮಾಡಬೇಕು ಕನ್ನಡ ಪರ ಸಂಘಟನೆಗಳು ನಾಡುನುಡಿ ರಕ್ಷಣೆಗಾಗಿ ತಮ್ಮ ಧ್ಯೇಯ ಮೀಸಲಾಗಿಡಬೇಕು ಹೊರತು ರಾಜಕೀಯ ಸಂಘಟನೆಯಾಗಿ ಹೊರಹೊಮ್ಮಬಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಕ.ರ.ವೇ.ಸ ರಾಜ್ಯಾಧ್ಯಕ್ಷ ಎಮ್.ಬಿ. ಮಹೇಶಕುಮಾರ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತ ಘಟಕದ ರಾಜ್ಯಾಧ್ಯಕ್ಷ ಚಂದ್ರಕಾಂತ ಪಾಟೀಲ, ಮಹಾಂತೇಶ ಮುದಕಣಗೌಡರ, ಹಿಡಕಲ್ ಡ್ಯಾಂ ಶ್ರೀ ಸಂಗಮ ಸಹಕಾರಿ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಬಿಜೆಪಿ ಹುಕ್ಕೇರಿ ಮಂಡಳ ಅಧ್ಯಕ್ಷ ರಾಚಯ್ಯ ಹಿರೇಮಠ, ಹಿರಿಯ ಸಾಹಿತಿಗಳಾದ ಕಾ.ಹೊ.ಶಿಂಧೆ, ಎಸ್.ಎಮ್. ಶಿರೂರ, ಆರ್. ಕರುಣಾಕರಶೆಟ್ಟಿ, ಲಕ್ಷ್ಮೀ ಮಹಾಂತೇಶ ಪಂಚನ್ನವರ, ಹೊಸಪೇಟ ಗ್ರಾ.ಪಂ.ಅಧ್ಯಕ್ಷ ರೇಣುಕಾ ಬೂದಿಹಾಳ, ಉಪಾಧ್ಯಕ್ಷ ಮಹಾ£ಂಗ ಮರೆನ್ನವರ, ಎನ್.ಎಸ್.ಆಜರೇಕರ, ಎಲ್.ಎಸ್. ತಳವಾರ, ಸಂತೋಷ ತೋರಗಲ್ಲ, ಚಂದ್ರಶೇಖರ ಗಣಾಚಾರಿ, ಹೊಸಪೇಟ ಗ್ರಾ.ಪಂ. ಸದಸ್ಯರಾದ ಸದಾನಂದ ಮಾಳ್ಯಾಗೋಳ, ಎನ್.ಆರ್ ಖನಗಾಂವಿ, ಮಹಿಳಾ ಘಟಕದ ತಾಲೂಕಾಧ್ಯಕ್ಷರಾದ ಜಯಶ್ರೀ ಶಂಕರ ಮತ್ತಿಕೊಪ್ಪ, ಉಪಾಧ್ಯಕ್ಷ ವಿದ್ಯಾಶ್ರೀ ನಾಗನಾಥ, ಲಕ್ಷ್ಮೀ ಬಿ. ವಾಳದವರ, ಅ£ತಾ ಶಿರಾಳೆ, ಜ್ಯೋತಿ ಮಣಿ, ಹುಕ್ಕೇರಿ ತಾಲೂಕಾ ಸಂಘಟನಾ ಕಾರ್ಯದರ್ಶಿ ಸುಮಿತ್ರಾ ಹಾರುಗೇರಿ, ರುಮಾನಾ ಮೋಮಿನ, ಶೋಭಾ ಪಾಟೀಲ, ಸಾವಿತ್ರಿ ಕರಿಗಾರ, ಚಂಪವ್ವಾ ಖೋತ, £ರ್ಮಲಾ ರಾವಳ, ಶಾಂತಾ ಚಿಂಚಿ, ಲಕ್ಷ್ಮೀ ಪತ್ತಾರ, ಕುಮಾರಿ ತೋರಗಲ್ಲ, ಅಕ್ಷತಾ ಕುರಣಿ, ಶಾರವ್ವಾ ಬೆಂಡಿಗೇರಿ, ಭಾರತಿ ಕಾಂಬಳೆ, ಶಮಾ ಮುಲ್ತಾ£, ಕಾವ್ಯಾ ಯಲಬುರ್ಗಿ, ಶಾಲಿನ ಶೇರವಿ, ದ್ರಾಕ್ಷಾಯಣಿ, ಮಲಗೌಡನವರ, ಲಕ್ಷ್ಮೀ ಖೋತ, ಅನ್ನಪೂರ್ಣಾ ಗಿರೆಪ್ಪನವರ, ಗಂಗವ್ವಾ ಜಾಂಬೋಟಿ, ಜ್ಯೋತಿ ಯಲಬುರ್ಗಿ, ಸುರೇಖಾ ಶಹಾ ಹಾಗೂ ಸಮಸ್ತ ಮಹಿಳಾ ಘಟಕದ ಪದಾಧಿಕಾರಿಗಳು ಗ್ರಾಮಸ್ಥರು ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕ ಜೆ.ಎಸ್. ಕರೆನ್ನವರ ಸ್ವಾಗತಿಸಿ ಕಾರ್ಯಕ್ರಮ £ರೂಪಿಸಿದರು.
Gadi Kannadiga > Local News > ಕನ್ನಡ ಕಟ್ಟುವ ಕೆಲಸ £ತ್ಯ ನಡೆಯಲಿ: ರಮೇಶ ಕತ್ತಿ