This is the title of the web page
This is the title of the web page

Please assign a menu to the primary menu location under menu

State

ಐತಿಹಾಸಿಕ ನಗರಿಯಲ್ಲಿ ಯೋಗಥಾನ್-2022 ಇತಿಹಾಸ ಬರೆಯಲಿ: ಡಾ.ವಿಜಯಮಹಾಂತೇಶ ದಾನಮ್ಮನವರ


ವಿಜಯಪುರ : ರಾಜ್ಯಾದ್ಯಂತ ನಿಗದಿಯಾದ ಯೋಗಥಾನ್ 2022 ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯಲ್ಲಿ ಕೂಡ ಯಶಸ್ವಿಯಾಗಿ ಏರ್ಪಾಡು ಮಾಡುವುದಕ್ಕೆ ಸಂಬAಧಿಸಿದAತೆ ಚರ್ಚಿಸಲು ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಅಧ್ಯಕ್ಷತೆಯಲ್ಲಿ ಜುಲೈ 05ರಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ನಡೆಯಿತು.
ಯೋಗಥಾನ್-2022 ಕಾರ್ಯಕ್ರಮವನ್ನು ಆಗಸ್ಟ್ 12ರಿಂದ ಆಗಸ್ಟ್ 14ರವರೆಗೆ ನಡೆಸಲು ಸ್ಥಳ ಗೊತ್ತುಪಡಿಸುವ ಬಗ್ಗೆ ಮತ್ತು ಯಾವ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು. ಆಗಸ್ಟ್ 12ರಂದು ಯುವೋತ್ಸವ ಕಾರ್ಯಕ್ರಮ, ಆಗಸ್ಟ್ 13ರಂದು ಯೋಗಥಾನ್-2022 ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ ಕಾರ್ಯಕ್ರಮ ಮತ್ತು ಆಗಸ್ಟ್ 14ರಂದು ಯೋಗಥಾನ್-2022 ಗಿನ್ನೀಸ್ ವರ್ಡ್ಲ ರೇಕಾರ್ಡ್ ಕಾರ್ಯಕ್ರಮಗಳನ್ನು ನಗರದ ಸೈನಿಕ ಶಾಲೆಯ ಶ್ರೀಕಂಠಿ ಅಡಿಟೋರಿಯಂನಲ್ಲಿ ನಡೆಸಲು ತಾತ್ಕಾಲಿಕವಾಗಿ ನಿರ್ಣಯಿಸಲಾಯಿತು.
ಯೋಗಥಾನ್ ಕಾರ್ಯಕ್ರಮ ಐತಿಹಾಸಿಕವಾಗಿ ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ವಿಜಯಪುರ ನಗರದ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆ, ಪದವಿಪೂರ್ವ ಮಹಾವಿದ್ಯಾಲಯಗಳು, ಪದವಿ ಮಹಾವಿದ್ಯಾಲಯಗಳು, ಮೆಡಿಕಲ್ ಕಾಲೇಜುಗಳು, ಎಂಜನಿಯರಿAಗ್ ಕಾಲೇಜಗಳು, ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಗಳು, ಆಯುರ್ವೇದ ಮಹಾವಿದ್ಯಾಲಯಗಳು, ವಸತಿ ನಿಲಯಗಳು, ಸೈನಿಕ ಶಾಲೆ, ನವೋದಯ ಶಾಲೆಗಳ ವಿದ್ಯಾರ್ಥಿಗಳನ್ನು ಸೇರಿಸಲು, ಪತಂಜಲಿ ಯೋಗ ಸಮಿತಿಯ ಯೋಗಪಟುಗಳು, ಎಲ್ಲ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳು, ಎನ್ಸಿಸಿ-ಎನ್.ಎಸ್.ಎಸ್ ಘಟಕಗಳು ಹಾಗೂ ಸಾರ್ವಜನಿಕರು ಮತ್ತು ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಸೇರಿ ದಾಖಲೆಯ ಸಂಖ್ಯೆಯಲ್ಲಿ ಜನರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಯೋಜನೆ ರೂಪಿಸಲಾಯಿತು.
ಯೋಗಥಾನ್-2022 ಕಾರ್ಯಕ್ರಮದ ಯಶಸ್ವಿ ಸಂಘಟನೆಗೆ ಅನುಕೂಲವಾಗುವಂತೆ ಇದೆ ವೇಳೆ ಉಪ ಸಮಿತಿಗಳನ್ನು ಕೂಡ ರಚಿಸುವ ಬಗ್ಗೆ ಚರ್ಚಿಸಲಾಯಿತು. ಪ್ರಚಾರ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ ಮತ್ತು ಕಾರ್ಯಕ್ರಮ ಸಂಘಟನಾ ಸಮಿತಿ, ಸಾರಿಗೆ ಸಮಿತಿಗಳನ್ನು ರಚಿಸಿ, ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜವಾಬ್ದಾರಿ ಹಂಚಿಕೆ ಮಾಡಿ ಕಾರ್ಯಕ್ರಮ ಏರ್ಪಾಡು ಮಾಡುವ ಬಗ್ಗೆ ಕೂಡ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 14ರವರೆಗೆ ಯೋಗಥಾನ್ 2022 ಉತ್ಸವವು ರಾಜ್ಯಾದ್ಯಂತ ಪ್ರಪ್ರಥಮವಾಗಿ ಪ್ರಾರಂಭಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಯೋಗಾಥಾನ್-2022 ಕಾರ್ಯಕ್ರಮದ ಮೂಲಕ ಗಿನ್ನಿಸ್ ಮತ್ತು ವಿಶ್ವ ದಾಖಲೆ ನಿರ್ಮಾಣ ಮಾಡಿದಲ್ಲಿ ಕರ್ನಾಟಕ ರಾಜ್ಯವು ಜಾಗತಿಕಮಟ್ಟದಲ್ಲಿ ಮತ್ತೊಮ್ಮೆ ಹೆಸರಾಗಲಿದೆ. ಇದರಿಂದ ಯೋಗ ತರಬೇತುದಾರರಿಗೆ ಹಾಗೂ ಯೋಗಾಸಕ್ತರಿಗೆ ಪ್ರಯೋಜನವಾಗಲಿದೆ. ಪರೋಕ್ಷವಾಗಿ ಯುವ ಸಮುದಾಯವನ್ನೊಳಗೊಂಡು ಎಲ್ಲಾ ವಯೋಮಾನದವರ ಆರೋಗ್ಯ ಉತ್ತಮಗೊಳ್ಳಲು ಅನುಕೂಲವಾಗಲಿದೆ. ಸದೃಢ ಸಮಾಜ ನಿರ್ಮಾಣ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಅರಿವನ್ನು ಮೂಡಿಸುವ ಮಹತ್ವದ ಉದ್ದೇಶ ಕೂಡ ಇದೆ ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ: ಯೋಗಥಾನ್-2022 ಮಹತ್ವದ ಕಾರ್ಯಕ್ರಮವಾಗಿದೆ. ವಿಜಯಪುರ ಐತಿಹಾಸಿಕ ನಗರವಾಗಿದ್ದು, ಈ ನೆಲದಲ್ಲಿ ಮಹತ್ವದ ಯೋಗಥಾನ್-2022 ಕಾರ್ಯಕ್ರಮವು ಇತಿಹಾಸ ಬರೆಯುಂತಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಸರ್ವ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲೆಯ ಸಾರ್ವಜನಿಕರು ಸೇರಿದಂತೆ ಎಲ್ಲರೂ ವೈಯಕ್ತಿಕ ಕಾಳಜಿ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆಗಳಲ್ಲಿನ ಮಾರ್ಗಸೂಚಿಯನ್ವಯ ಯೋಗಥಾನ್-2022 ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಸಲು ಜಿಲ್ಲೆಯ ಜನತೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು, ಸಭೆಯ ಮೂಲಕ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಆಗಸ್ಟ್ 12ರಂದು ಯುವೋತ್ಸವ: ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ನಡೆಯುವ ಯುವೋತ್ಸವ ಕಾರ್ಯಕ್ರಮದಲ್ಲಿ ಯುವ ಸ್ಪಂದನ ಸಹಾಯ ಕೇಂದ್ರಗಳ ಮೂಲಕ ಯುÄವಕರಿಗೆ ಕೌಶಲ್ಯಾಭಿವೃದ್ಧಿ ಕುರಿತು ತರಬೇತಿ ನೀಡಲು ಮಳಿಗೆಗಳನ್ನು ತೆರೆಯುವ ವ್ಯವಸ್ಥೆ ಮಾಡಬೇಕು. ಯೋಗ ತರಬೇತಿದಾರರಿಗೆ ಹಾಗೂ ಯೋಗಾಸಕ್ತರಿಗೆ ಕಾರ್ಯಕ್ರಮದ ಉದ್ದೇಶದ ಬಗ್ಗೆ ಅರಿವು ಮೂಡಿಸಬೇಕು. ಯುವಕರಿಗೆ ಸರಕಾರದ ನಾನಾ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದರು.
ಆನ್‌ಲೈನ್ ಮೂಲಕ ನೋಂದಣಿ: ಯೋಗಥಾನ್-2022ರಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಆನ್‌ಲೈನ್ ಮತ್ತು ಆಫಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಬ್ಯಾಂಡ್‌ಗಳನ್ನು ನೀಡುವುದರ ಮೂಲಕ ಪ್ರವೇಶ ನೀಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ವಿಶ್ವಸಾಕ್ಷಿ ಕಾರ್ಯಕ್ರಮಕ್ಕೆ ಜೋಡಣಿಯಾಗಿ ಯೋಗಾ ಸರ್ಟಿಫೀಕೆಶನ್ ಬೋರ್ಡದಿಂದ ವೈಯಕ್ತಿಕವಾಗಿ ಪ್ರಮಾಣ ಪತ್ರವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರಚಾರಕ್ಕೆ ಸೂಚನೆ: ಯೋಗ ತರಬೇತಿದಾರರು ನೋಂದಣಿ ಮಾಡಲು ಕುಶಲಕೋಶ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಬಗ್ಗೆ ಮತ್ತು 09 ವಾರಗಳ ಪ್ರಸ್ತಾಪಿತ ಕಾರ್ಯಕ್ರಮದ ವಿವರಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಲು ಇದೆ ವೇಳೆ ವಾರ್ತಾಧಿಕಾರಿಗಳಿಗೆ ಸೂಚಿಸಲಾಯಿತು.
ಶಾಲಾ-ಕಾಲೇಜುಗಳಿಗೆ ಸೂಚನೆ: ಯೋಗಥಾನ್ ವಿಷಯಗಳ ವೇಳಾಪಟ್ಟಿಯಂತೆ ಮಾನಸಿಕ ಆರೋಗ್ಯಕ್ಕಾಗಿ ಯೋಗ, ಬೊಜ್ಜು ನಿರ್ವಹಣೆಗೆ ಯೋಗ, ಧನಾತ್ಮಕತೆಯ ಮೇಲೆ ಯೋಗ, ಒತ್ತಡಕ್ಕೆ ಯೋಗ, ರೋಗ ನಿರೋಧಕ ಶಕ್ತಿಗಾಗಿ ಯೋಗ, ಯೋಗಕ್ಷೇಮದ ಮೇಲೆ ಯೋಗ ಮತ್ತು ಅಧ್ಯಾತ್ಮಿಕತೆಯ ಮೇಲೆ ಯೋಗ, ಸ್ಮರಣಿಯ ಮೇಲೆ ಯೋಗದಂತಹ ನಾನಾ ರೀತಿಯ ಯೋಗಗಳ ಮೇಲೆ ಪ್ರತಿ ಭಾನುವಾರ ಆಯಾ ಶಾಲಾ ಕಾಲೇಜುಗಳಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲು ಇದೆ ವೇಳೆ ಜಿಲ್ಲಾಧಿಕಾರಿಗಳು ಆಯಾ ಶಾಲಾ-ಕಾಲೇಜುಗಳ ಯೋಗ ಶಿಕ್ಷಕರಿಗೆ ಸೂಸಿದರು. ತಮ್ಮ ಶಾಲಾ-ಕಾಲೇಜುಗಳಲ್ಲಿ ಯೋಗ ಶಿಕ್ಷಕರು ಇಲ್ಲದಿದ್ದಲ್ಲಿ ಬೇರೆ ಶಾಲೆಯ ಯೋಗ ಶಿಕ್ಷಕರನ್ನು ನೇಮಿಸಿಕೊಂಡು ಯೋಗ ತರಬೇತಿಗೆ ವ್ಯವಸ್ಥೆ ಮಾಡಿಸಲು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ, ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ಎಲ್.ಎಸ್.ಲಕ್ಕಣ್ಣವರ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಜಿ.ಲೋಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ, ಆಯುಷ್ ಇಲಾಖೆಯ ಅಧಿಕಾರಿ ಅನುರಾಧ ಎಲ್ ಚಂಚಲಕರ, ಸೈನಿಕ ಶಾಲೆಯ ಪ್ರಾಂಶುಪಾಲರಾದ ಪ್ರತಿಭಾ ಬಿ., ಸಂಘ-ಸAಸ್ಥೆಗಳ ಪ್ರಮುಖರಾದ ಜಾವೇದ್ ಅಹಮದ್, ಅರವಿಂದ ಕೊಪ್ಪ ಹಾಗೂ ಮೆಡಿಕಲ್, ಆಯುರ್ವೇದ ಕಾಲೇಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply