ಬಳ್ಳಾರಿ: ೦೪ : ನಗರದ ಮೊಹಮ್ಮದಿಯ ಸಮೂಹ ಸಂಸ್ಥೆಯಲ್ಲಿ ರಾಜ್ಯ ಆಯುಕ್ತರಾದ ಮೊಹಮ್ಮದ್ ಮೋಹ್ಸಿನ್ ಒಂದು ದಿನದ ಕಾರ್ಯಗಾರದಲ್ಲಿ ಪಾಲ್ಗೊಂಡು ವಿವಿದೆಡೆಯಿಂದ ಬಂದ ವಿದ್ಯಾರ್ಥಿಗಳನ್ನು ಹಾಗೂ ಸ್ಪರ್ದಾರ್ಥಿಗಳನ್ನು ಉದ್ದೇಶಿಸಿ ನಿಮ್ಮ ಕನಸುಗಳು ಉನ್ನತವಾಗಿರಲಿ, ಆ ಕನಸುಗಳು ನಿಮ್ಮನ್ನು ಮೇಲಕ್ಕೆ ಕರೆದೊಯ್ಯುತ್ತವೆ- ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪದವಿಗಳು ಕೇವಲ ತುಂಡು ಕಾಗದಕ್ಕೆ ಸಮ, ಮನದಲ್ಲಿರುವ ವಿಶ್ವಾಸ ನಿಮ್ಮನ್ನು ಬದಕಿಸುತ್ತದೆ, ಹಾಗೂ ಐಎಎಸ್ ಹಾಗೂ ಇತರ ಯುಪಿಎಸ್‌ಎಸ್ಸಿ ಪರೀಕ್ಷೆಗಳ ತಯಾರಿಯ ಕುರಿತು ಸುದೀರ್ಘವಾಗಿ ಮಕ್ಕಳೊಟ್ಟಿಗೆ ಸಂವಾದ ಮಾಡಿದರು. ಈ ಕಾರ್ಯಕ್ರಮದಲ್ಲಿ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಅಮೀನ್ ಮುದಸಿರ್ ಸಿ.ಐ.ಜಿ.ಎಮ್.ಎ ಸಂಸ್ಥಾಪಕರು, ನಾಗರೀಕ ಪರೀಕ್ಷೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಹಾಗೂ ವ್ಯಕ್ತಿತ್ವ ವಿಕಸನದ ಕುರಿತು ಸಂವಾದ ನೆಡೆಸಿದರು. ಈ ಕಾರ್ಯಗಾರದ ಆಯೋಜಕರಾದ ಮೊಹಮ್ಮದಿಯ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಡಾ. ಇದ್ರೀಸ್ ಮೌಲನಾ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಾರೈಸಿದರು. ಈ ಕಾರ್ಯಕ್ರಮದಲ್ಲಿ ಡಾ. ಇದ್ರೀಸ್ ಮೌಲನಾ ಮೊಹಮ್ಮದಿಯ ಸಮೂಹ ಸಂಸ್ಥೆ, ರಾಜ್ಯ ಆಯುಕ್ತರಾದ ಮೊಹಮ್ಮದ್ ಮೋಹ್ಸಿನ್, ಅಮೀನ್ ಮುದಸಿರ್ ಸಿ.ಐ.ಜಿ.ಎಮ್.ಎ ಸಂಸ್ಥಾಪಕರು, ಹಬೀಬ್ ಉಲ್ಲಾ ನಿವೃತ್ತ ಸಹಾಯಕ ಜಿಲ್ಲಾಧಿಕಾರಿಗಳು, ಮುಜ್ಜಾಮಿಲ್ ಪ್ರಾಂಶುಪಾಲರು, ಮೊಹಮ್ಮದಿಯಾ ಪಿಯು ಕಾಲಾಜು, ಸಂಸ್ಥೆಯ ಬೋದಕ ಹಾಗೂ ಬೋದಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಇದ್ದರು.