This is the title of the web page
This is the title of the web page

Please assign a menu to the primary menu location under menu

Local News

ಯುವಜನ ಕ್ರಿಯಾಶೀಲರಾಗಿ ಅಭಿವೃದ್ಧಿಗೆ ಕೈಜೋಡಿಸೋಣ: ಮೃಣಾಲ್ ಹೆಬ್ಬಾಳಕರ


ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ ಅವರು ಕ್ಷೇತ್ರಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದು ಸಾರ್ವಜನಿಕರು ಈ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಮಾಡಿಸಿಕೊಂಡು ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಹೇಳಿದರು.
ಗ್ರಾಮೀಣ ಕ್ಷೇತ್ರದ ಶಿಂದೊಳ್ಳಿ ಗ್ರಾಮದ ಒಳ ರಸ್ತೆಗಳ ನಿರ್ಮಾಣದ ಸಲುವಾಗಿ ಶಾಸಕರ ಅನುದಾನ (ಒಐಂ ಈuಟಿಜ) ದಲ್ಲಿ ೧೦ ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಲಾಗಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಅವರು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೇರಿ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆ ನೀಡಿದರು.
ಮುಂಬರುವ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು ಬೆಳಗಾವಿ ಗ್ರಾಮಿಣ ಕ್ಷೇತ್ರವನ್ನು ಮಾದರಿಯಾಗಿಸುವ ಗುರಿ ಹೊಂದಲಾಗಿದೆ. ಯುವ ಜನ ಹೆಚ್ಚು ಕ್ರಿಯಾಶೀಲರಾಗಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸೋಣ ಎಂದು ಮೃಣಾಲ್ ಹೇಳಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಶಿವಕುಮಾರ ಸೈಬಣ್ಣವರ, ಶೀಲಾ ತಿಪ್ಪಣ್ಣಗೋಳ, ಲಕ್ಷ÷್ಮಣ ಪಾಟೀಲ, ಅಭಿಷೇಕ ಪಾಟೀಲ, ಶೀತಲ್, ಮಲ್ಲಪ್ಪ ಶಹಾಪುರಕರ, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಹಾಗೂ ಕೆಲವು ಸದಸ್ಯರು ಉಪಸ್ಥಿತರಿದ್ದರು.


Gadi Kannadiga

Leave a Reply