This is the title of the web page
This is the title of the web page

Please assign a menu to the primary menu location under menu

Local News

ಗ್ರಂಥಾಲಯಗಳು ಇಂದಿನ ಅಗತ್ಯವಾಗಿದೆ :ಕಡಾಡಿ


ಬೆಳಗಾವಿ: ರಾಜ ಮಹಾರಾಜರುಗಳ ಕಾಲದಲ್ಲಿ ಶಕ್ತಿ ಇದ್ದವರು ದೇಶವನ್ನು ಆಳುತ್ತಿದ್ದರು ಹೀಗಾಗಿ ಊರಿಗೊಂದು ಗರಡಿ ಮನೆ ಇದ್ದವು ಅದು ಅಂದಿನ ಅಗತ್ಯವಾಗಿತ್ತು. ಇಂದು ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ, ನಮ್ಮ ಜ್ಞಾನದಮಟ್ಟವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಗ್ರಂಥಾಲಯಗಳು ಇಂದಿನ ಅಗತ್ಯವಾಗಿದೆ. ಹೀಗಾಗಿ ಇವತ್ತಿನ ದಿನ ನಾವೆಲ್ಲ ಗ್ರಂಥಾಲಯವನ್ನು ಹೆಚ್ಚು ಉಪಯೋಗ ಮಾಡಿಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.
ಶನಿವಾರ ಜು-೦೮ ರಂದು ಬೈಲಹೊಂಗಲ ತಾಲೂಕಿನಲ್ಲಿ ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾಗಿರುವ ತುರಕರಶೀಗೆಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಗ್ರಂಥಾಲಯಗಳಿಲ್ಲದÀ ಊರುಗಳು ದೇವರಿಲ್ಲದ ಗುಡಿ ಇದ್ದಂತೆ ಎಂದು ಹೇಳಿದ ಅವರು ಪ್ರತಿಯೊಂದು ಊರಿನಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರಬೇಕಾದ್ದದು ಬಹಳ ಅಗತ್ಯವಿದೆ ಸ್ಮರ್ಧಾತ್ಮಕ ಜಗತ್ತಿಗೆ ನಮ್ಮ ಮಕ್ಕಳು ತಾವು ತಮ್ಮನ್ನು ತೋಡಗಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಈ ಗ್ರಂಥಾಲಯವನ್ನು ಗ್ರಾಮದ ವಿದ್ಯಾರ್ಥಿಗಳು, ಯುವಕರು ಹಾಗೂ ಹಿರಿಯರು ಎಲ್ಲರೂ ಸದ್ದವಿನಿಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು ಮತ್ತು ಬರುವಂತಹ ದಿನಗಳಲ್ಲಿ ಈ ತುರಕರಶೀಗೆಹಳ್ಳಿ ಗ್ರಾಮವನ್ನು ಒಂದು ಆದರ್ಶ ಗ್ರಾಮವನ್ನಾಗಿ ಮಾಡುವ ದಿಶೆಯಲ್ಲಿ ಕಾಮಗಾರಿಗಳು ಪ್ರಾರಂಭವಾಗಿವೆ ಇವುಗಳನ್ನು ಹೆಚ್ಚು ತೀವ್ರಗತಿಯಲ್ಲಿ ಮಾಡಿ ಇಂದೊಂದು ಆದರ್ಶ ಗ್ರಾಮ ಮಾಡಲಿಕ್ಕೆ ಸ್ಥಳೀಯ ಶಾಸಕರಾದ ಮಹಾಂತೇಶ ಕೌಜಲಗಿ ಅವರ ಸಹಕಾರ, ಮಾರ್ಗದರ್ಶನದೊಂದಿಗೆ ಮುಂದುª Àರೆಯುತ್ತೇವೆ ಎಂದರು. ಕಿತ್ತೂರು ಕಲ್ಮಟ ಪೂಜ್ಯ ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶಾಸಕರಾದ ಮಹಾಂತೇಶ ಕೌಜಲಗಿ, ಗ್ರಾಮ ಪಂಚಾಯತ ಅಧ್ಯಕ್ಷ ಚಂದ್ರಶೇಖರ ಕಡೇಮನಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಎಸ್ ಸಂಪಗಾಂವಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.


Leave a Reply