WhatsApp Group
Join Now
ಬೆಳಗಾವಿ: .ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.21.08.2025ರಂದುಪೂಜ್ಯ ಕುಮದಿನಿ ತಾಯಿಯವರು ಗುರು ಜಗಜ್ಯೋತಿ ಬಸವಣ್ಣವರ ಭಕ್ತಿ ಗೀತೆ ಹಾಡಿದರು. ಪೂಜ್ಯವಾಗ್ದೇವಿ ತಾಯಿಯವರು ಉಪನ್ಯಾಸ ನಿಡುತ್ತಾ ಶಿವಶರಣ ನಗೆಯ ಮಾರಿತಂದೆ ಜೀವನಕ್ಕೆ ಹಾಸ್ಯಬೇಕು.ನಗೆ ಬೇಕು ಇವಿಲ್ಲದಿದ್ದರೆ ಬಾಳು ತಲೆ ಭಾರವಾಗುವುದು.ಹಾಸ್ಯ ಅಪಹಾಸ್ಯವಾಗ ಬಾರದು.ನಗೆ ಹೊಗೆಯಾಗಬಾರದು.ನಗುವದು ಜೀವನ ಪಾವನ ನಕ್ಕರೆ ಸ್ವಗ೯.ಉರಿ ಬಂದರೂ ಸಿರಿಬಂದರೂ ಇಕ್ಕುವ ಶೂಲ ಪ್ರಾಪ್ತಿಯಾದರೂ ಅದನ್ನು ನಗು ನಗುತ್ತಾ ಎದುರಿಸಿದರು.ನಗೆ ಮಾರಿ ತಂದೆ ತಂದೆಯ ಮಾರಿ ನೋಡಿದರೆ ನಗಬೇಕು ಅಂತಹ ನಗೆ ಮುಖದವರು ಇದ್ದರು.ಕಣ್ಣಲ್ಲಿ ಕಾರುಣ್ಯ ಮುಖವು ಮನಸಿನ ಬಾವನೆಗಳನ್ನು ತಿಳಿಸುತ್ತದೆ ದಿನಕ್ಕೆ ಮಗು ಮೂರುನೂರು ಸಾರೆ ನಗುವುದು.ಮಾನವನಿಗೆ ಬಿಗುಮಾನವಿರಬಾರದು ಅಹಂಕಾರವಿರಬಾರದು.ನಾವು ನಗುನಗುತ್ತಾ ಮಾತನಾಡಿಸುವುದು.ನಗುವುದು ನುಡಿವುದು ಶಿವಭಕ್ತರೊಡನೆ ಸುಮ್ಮಾನ ಹಮ್ಮ ಇರಬಾರದು.ನಗೆಯಲ್ಲಿ ಅನೇಕ ನಗೆಗಳಿವೆ. ಮಾನವನಿಗೆ ಸಹನೆ ಇರಬೇಕು.ಬೇಕು ಬೇಕು ಇರಬಾರದು. ಆಸೆ ಇರಬೇಕು ದುರಾಸೆ ಇರಬಾರದು ಎಂದು ಉಪನ್ಯಾಸ ನೀಡಿದರು.
ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಜಯಶ್ರೀ ನಷ್ಟೆ, ಸುಜಾತಾ ಮತ್ತಿಕಟ್ಟಿ,ದೀಪಾ ಪಾಟೀಲ,ಶೋಭಾ ದೇಯಣ್ಣವರ, ಲೀಲಾವತಿ ರಾಚೂಟಿಮಠ,ಶ್ರೀದೇವಿ ಕಾಡಣ್ಣವರ,ಗ೦ಗಾ ಯದ್ದಲಾಪೂರಮಠ,ರಾಜಶ್ರೀ ಖನಗಣಿ,ಶೋಭಾ ಅ೦ಗಡಿ,ರತ್ನಾ ಬೆಣಚನಮರಡಿ,ಸುಶೀಲಾ ವಸ್ತ್ರದ,ಪ್ರೀತಿ ಗುರಯ್ಯ ಮಠದ,ಸುವಣ೯ ತಿಗಡಿ,ಶಾಂತಾ ಮಲಗೌಡ ಪಾಟೀಲ, ರತ್ನಾ ಮು೦ಗರವಾಡಿ, ರೂಪಾ ದಿವಟಗಿ,ಜಯಶ್ರೀ ಚಾವಲಗಿ, ಬಸವರಾಜ ಕರಡಿಮಠ,ಪ.ಬಿ.ಕರಿಕಟ್ಟಿ,ಸತೀಶ ಪಾಟೀಲ,ಶೇಖರ ವಾಲಿ ಇಟಗಿ,ಶ೦ಕರ ಗುಡಗನಟ್ಟಿ,ಶ೦ಕರ ದಳವಾಯಿ, ಶಿವಾನಂದ ನಾಯಕ,ತಿಗಡಿ,ಮಹಾಂತೇಶ ಮೆಣಸಿನಕಾಯಿ, ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಶರಣ ಶರಣೆಯರು ಉಪಸ್ಥಿತರಿದ್ದರು. ಮಂಗಳಾ ಕಾಕತಿಕರ ದಾಸೋಹ ಸೇವೆಗೈದರು.ಸುರೇಶ ನರಗುಂದ ಸ್ವಾಗತಿಸಿ ವಂದಿಸಿದರು.ಸಂಗಮೇಶ ಅರಳಿ ನಿರೂಪಿಸಿದರು .ಮಂಗಲದೊಂದಿಗೆ ಸಂಪನ್ನ ಗೂಂಡಿತು.