This is the title of the web page
This is the title of the web page

Please assign a menu to the primary menu location under menu

State

ಬೆಳಗುತಾರೆ” ಕವನಸಂಕಲನ ಲೋಕಾರ್ಪಣೆ ಸಾಹಿತ್ಯ ಬದುಕಿಗೆ ದಾರಿದೀಪ-ಮಂಗಲಾ ಮೆಟಗುಡ್ಡ


ಬೆಳಗಾವಿ11 : ಜೀವನ ಸುಖ ಸಂತೋಷ ನೆಮ್ಮದಿಯಿಂದ ಕೂಡಿರಬೇಕಾದರೆ ಮನುಷ್ಯ ಸಾಹಿತ್ಯ ಕ್ಷೇತ್ರದ ಕಡೆಗೆ ಹೆಚ್ಚಿನ ಒಲವು ಬೆಳಸಿಕೊಳ್ಳಬೇಕು. ಸಾಹಿತ್ಯ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ ಇವತ್ತಿನ ಒತ್ತಡದ ಜೀವನ ಶೈಲಿಯಲ್ಲಿ ಸಾಹಿತ್ಯ ಓದುವುದರೊಂದಿಗೆ ಸಾಹಿತ್ಯ ಕೃಷಿ ಕಾರ್ಯದಲ್ಲಿ ತೊಡಗಿದ್ದಾದರೆ ಬದುಕು ಸುಂದರವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಅಭಿಪ್ರಾಯಪಟ್ಟರು.

ಅವರು ಶನಿವಾರದಂದು ನಗರದ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬೆಳಗುತಾರೆ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಸಾಹಿತಿ ಬಿ.ಕೆ.ಮಲಬಾದಿ ರಚಿಸಿದ “ಬೆಳಗುತಾರೆ” ಕವನಸಂಕಲನ ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ ನಿಂದ ಸಾಹಿತ್ಯಿಕ ಚಟುವಟಿಕೆಗಳಿಗೂ ಬಹಳಷ್ಟು ಸಹಾಯ ಸಹಕಾರ ನೀಡಲಾಗುತ್ತಿದ್ದು ಈಗಿನ ಯುವ ಸಮೂಹ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಾಹಿತಿ ಬಿ.ಕೆ.ಮಲಬಾದಿ ತಮ್ಮ ಕವನ ಸಂಕಲನ ಬೆಳಗುತಾರೆ ದೇವರು ಮತ್ತು ಮನುಷ್ಯನ ಸಂಬಂದದ ಕುರಿತು ರಚಿಸಲಾದ ಕೃತಿಯಾಗಿದ್ದು ಕೃತಿ ಬಿಡುಗಡೆಗೆ ಸಹಕರಿಸಿದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಮದುರ್ಗ ತಾಲೂಕಾ ಅಧ್ಯಕ್ಷ ಪಾಂಡುರಂಗ ಜಟಕನ್ನವರ, ಮೂಡಲಗಿ ತಾಲೂಕಾ ಅಧ್ಯಕ್ಷ ಡಾ. ಸಂಜಯ ಶಿಂದಿಹಟ್ಟಿ, ಕಿರಣ ಸಾವಂತನವರ, ಆಕಾಶ್ ಥಬಾಜ, ಡಾ. ಜಗಧೀಶ ಹಾರೂಗೊಪ್ಪ, ಮಹಿಳಾ ಪ್ರತಿನಿಧಿ ಶ್ರೀಮತಿ ಸುಧಾ ಪಾಟೀಲ, ಜಯಶ್ರೀ ನಿಲಾಕರಿ, ಜಯಶಿಲಾ ಬ್ಯಾಕೋಡ ಮತ್ತೀತರು ಉಪಸ್ಥಿತರಿದ್ದರು.

ಮೊದಲಿಗೆ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಎಂ.ವೈ.ಮೆಣಶಿನಕಾಯಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ತಾಲೂಕಾ ಅಧ್ಯಕ್ಷ ಡಾ: ಸುರೇಶ ಹಂಜಿ ವಂದಿಸಿದರು.

ವರದಿ: ಆಕಾಶ್ ಅರವಿಂದ ಥಬಾಜ,
ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ
ಕಸಾಪ ಬೆಳಗಾವಿ ಜಿಲ್ಲೆ
9448634208/ 9035419700


Gadi Kannadiga

Leave a Reply