ಬೆಳಗಾವಿ, ಜ.೧೨ : ಜನವರಿ ೧೨ ಹಾಗೂ ೧೩ ರಂದು ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಗ್ರಾಮದಲ್ಲಿ ಸಾರ್ವಜನಿಕ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇರುವುದರಿಂದ ೧೧ ಜನವರಿ ೨೦೨೩ ರ ಸಂಜೆ ೬ ಗಂಟೆಯಿಂದ ಜನವರಿ ೧೪ ರ ಮುಂಜಾನೆ ೬ ಗಂಟೆಯವರೆಗೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿರುವ ಎಲ್ಲ ಮದ್ಯ/ಬಾರ್ ಅಂಗಡಿಗಳನ್ನು ಬಂದ್ ಮಾಡಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಕೆ. ಪಾಟೀಲ ಅವರು ಆದೇಶಿಸಿದ್ದಾರೆ.
ಈ ಆದೇಶದ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂಥವರ ವಿರುಧ್ಧ ಕಾರ್ನಾಟಕ ಅಬಕಾರಿ ಕಾಯ್ದೆ ೧೯೬೫ ಕಲಂ ೩೨ ರನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಬೆಳಗಾವಿಯ ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರು, ಮತ್ತು ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಇವರು ಸದರಿ ದಿನಗಳಂದು ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು. ಕರ್ನಾಟಕ ಅಬಕಾರಿ ಕಾಯ್ದೆಯಡಿ ಒಬ್ಬ ವ್ಯಕ್ತಿ ಹೊಂದಬೇಕಾದ ಮದ್ಯ ಸಂಗ್ರಹಣೆ ಹೊರತು ಪಡಿಸಿ ಹೆಚ್ಚಿನ ಸಂಗ್ರಹಣೆ ಇರದಂತೆ ಹಾಗೂ ಲೈಸನ್ಸ್ ಇಲ್ಲದ ಆವರಣಗಳಲ್ಲಿ ಸಂಗ್ರಹಣೆ ಇರದಂತೆ ಸೂಕ್ತ ಕ್ರಮ ಜರುಗಿಸಲು ಈ ಮೂಲಕ ನಿತಿಶ್ .ಕೆ. ಪಾಟೀಲ ಜಿಲ್ಲಾ ದಂಡಾಧಿಕಾರಿಗಳು, ಬೆಳಗಾವಿ ಇವರು ಆದೇಶದಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಸಂಗೊಳ್ಳಿ ಉತ್ಸವ : ಗ್ರಾಮದಲ್ಲಿ ಮದ್ಯ ನಿಷೇಧ
ಸಂಗೊಳ್ಳಿ ಉತ್ಸವ : ಗ್ರಾಮದಲ್ಲಿ ಮದ್ಯ ನಿಷೇಧ
Suresh12/01/2023
posted on
More important news
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
24/05/2023
Àಂಗೀತ ಸಂಧ್ಯಾ ಕಾರ್ಯಕ್ರಮ
24/05/2023