This is the title of the web page
This is the title of the web page

Please assign a menu to the primary menu location under menu

State

ಮದ್ಯಪಾನ ಸಂಯಮ ಮಂಡಳಿ ಮಲ್ಲಿಕಾರ್ಜುನ ತುಬಾಕಿ ಅಧ್ಯಕ್ಷರಾಗಿ ನೇಮಕ


ಬೆಳಗಾವಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸುತಗಟ್ಟಿ ಗ್ರಾಮದ ರೈತ ಕುಟುಂಬದ ಮಲ್ಲಿಕಾರ್ಜುನ ಬಸವಣ್ಣೆಪ್ಪ ತುಬಾಕಿ ಅವರನ್ನು ಕರ್ನಾಟಕ ಸರ್ಕಾರವು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದೆ .
72 ವರ್ಷ ವಯಸ್ಸಿನ  (ವಿದ್ಯಾರ್ಹತೆ : SSLC)
ರೈತ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ  ,ಇವರು  ಕೃಷಿಯನ್ನೇ  ವೃತ್ತಿಯಾಗಿಸಿಕೊಂಡವರು .ದಿ.ಬಾಬಾಗೌಡ ಪಾಟೀಲರ ಪ್ರಭಾವದಿಂದ ರೈತ ಸಂಘದ ಮೂಲಕ ರೈತ ಚಳವಳಿಯಲ್ಲಿ ತೊಡಗಿಸಿಕೊಂಡರು .ಬಾಬಾ ಗೌಡರೊಂದಿಗೆ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾದರು . ಬಾಬಾಗೌಡ ಪಾಟೀಲರು ಭಾರತೀಯ ಜನತಾ ಪಕ್ಷವನ್ನು ಬಿಟ್ಟು ಹೋದರೂ ಮಲ್ಲಿಕಾರ್ಜುನ ತುಬಾಕಿ ಮಾತ್ರ ಭಾರತೀಯ ಜನತಾ ಪಕ್ಷದಲ್ಲಿ ಉಳಿದರು ಪಕ್ಷವನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡರು ,ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ,ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ , ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾಗಿ ,ಭಾರತೀಯ ಜನತಾ ಪಕ್ಷದ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ರಾಗಿ ಪಕ್ಷದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು .
ಇವರೊಂದಿಗೆ ಇವರ ಇನ್ನಿಬ್ಬರು ಸಹೋದರರು ಒಕ್ಕಲುತನದಲ್ಲಿಯೇ ತಮ್ಮ ಜೀವನ ಕಂಡುಕೊಂಡಿದ್ದಾರೆ .ಶಿಕ್ಷಕರಾಗಿದ್ದ ಒಬ್ಬ ಸಹೋದರ ಕೊರೋನಾ ಸಂದರ್ಭದಲ್ಲಿ ನಿಧನರಾಗಿದ್ದಾರೆ .
ಪತ್ನಿ ,ಓರ್ವ ಪುತ್ರ ,ಇಬ್ಬರು ಪುತ್ರಿಯರ ತುಂಬು ಕುಟುಂಬದ ಕೃಷಿಕ ಮಲ್ಲಿಕಾರ್ಜುನ ಬಸವಣ್ಣೆಪ್ಪ ತುಬಾಕಿ ಅವರನ್ನು ಕರ್ನಾಟಕ ಸರ್ಕಾರ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದೆ .


Gadi Kannadiga

Leave a Reply