This is the title of the web page
This is the title of the web page

Please assign a menu to the primary menu location under menu

Local News

“ಸಾಹಿತಿಗಳು ನಿರ್ಭೀತವಾಗಿ ಬರೆಯುವ ಮನೋವೃತ್ತಿ ಬೆಳೆಸಿಕೊಳ್ಳಬೇಕು”: ಶಾಸ್ತ್ರಿ ಮನೆಮನೆಗೆ ಸಾಹಿತ್ಯದ ೯೧ ನೆಯ ಕಾರ್ಯಕ್ರಮ ಪ್ರಾರಂಭೋತ್ಸವ


ಬೆಳಗಾವಿ೨೮: ” ಸಾಹಿತಿಗಳು ಯಾವುದೇ ಪ್ರಶಸ್ತಿ , ಅವಕಾಶಗಳಿಗಾಗಿ ಹಾತೊರೆಯದೆ ಸಾಂಸ್ಕೃತಿಕ ಲೋಕಕ್ಕೆ ಆಗುವ ಅನ್ಯಾಯಗಳನ್ನು ನಿರ್ಭೀತವಾಗಿ ಪ್ರತಿಭಟಿಸುವಂತಹ ಮನೋವೃತ್ತಿ ಬೆಳೆಸಿಕೊಳ್ಳಬೇಕು ” ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಲ್. ಎಸ್. ಶಾಸ್ತ್ತಿ ಅವರಿಲ್ಲಿ ಹೇಳಿದರು.
ರಾಮತೀರ್ಥ ನಗರದ ಬಸವೇಶ್ವರ ಬಡಾವಣೆಯ ಪಂಚ‌ಮಂದಿರಗಳ ಆವರಣದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದೊಡನೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಮಂಟಪದ ೯೧ ನೆಯ ಮನೆಮನೆಗೆ ಸಾಹಿತ್ಯ ಕಾರ್ಯಕ್ರಮದ ಅಂಗವಾಗಿ ಜೋರಾಪುರರ ಮೂರು ಕೃತಿಗಳ ಅವಲೋಕನ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದ ಶಾಸ್ತ್ರಿಯವರು ಡಾ. ಸಿ. ಕೆ. ಜೋರಾಪೂರ ಅವರು ಬರೆದ ಪಾಕ್ ದುರಾಕ್ರಮಣ ಮತ್ತು ವಿಶ್ವ ಭಯೋತ್ಪಾದಕತೆ ಅವರ ನಿರ್ಭೀತ ಮನೋವೃತ್ತಿಗೆ ಸಾಕ್ಷಿಯಾಗಿದ್ದು ಯಾವುದೇ ವಿಷಯವಿರಲಿ ಅವರು ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಮಾಹಿತಿಪೂರ್ಣ ಪುಸ್ತಕಗಳನ್ನು ಬರೆಯುತ್ತಾರೆಂಬುದು ಶ್ಲಾಘನೀಯವಾಗಿದೆ. ಅವರು ಈಗಾಗಲೇ ೩೦ ಕೃತಿಗಳನ್ನು ರಚಿಸಿದ್ದು ಅವರಿಂದ ಇನ್ನಷ್ಟು ಇಂತಹ ಕೃತಿಗಳು ಬರಲಿ ಎಂದು ಹಾರೈಸಿದರು.
ಆರಂಭದಲ್ಲಿ ಭುವನೇಶ್ವರಿ ಶಹಾಪುರಕರರಿಂದ ವೇದಮಂತ್ರ ಪಠಣ, ರಾಜೇಶ್ವರಿ ಹಿರೇಮಠರಿಂದ   ನಾಡಗೀತೆಗಳಾದವು. ಡಾ. ಸಿ. ಕೆ . ಜೋರಾಪೂರ ಅವರು ಸ್ವಾಗತಿಸಿ ತಮ್ಮ ಕೃತಿರಚನೆಯ ಹಿನ್ನೆಲೆ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೋರಾಪುರ ಅವರ ದಶಾವತಾರ ಗ್ರಂಥದ ಕುರಿತು ಪಂ. ಶ್ರೀನಿಧಿ ಆಚಾರ್ಯ ಅವರು ಮಾತನಾಡಿ ಅವತಾರಗಳು ಕೇವಲ ದುಷ್ಟಸಂಹಾರಕ್ಕಾಗಿ ಮಾತ್ರವಲ್ಲ, ಮನುಷ್ಯನಿಗೆ ಹೇಗೆ ಮನುಷ್ಯತ್ವದೊಡನೆ ಬದುಕಬೇಕೆಂಬುದನ್ನು ತಿಳಿಸಿಕೊಡುವ ಉದ್ದೇಶದಿಂದ ಕೂಡಿದ್ದು ಜೋರಾಪೂರರು ಸಮಗ್ರ ಅಧ್ಯಯನದೊಡನೆ ಉತ್ತಮ ಗ್ರಂಥ ರಚನೆ ಮಾಡಿದ್ದಾರೆಂದರು. ಪಾಕ್ ದುರಾಕ್ರಮಣ ಮತ್ತು ವಿಶ್ವ ಭಯೋತ್ಪಾದಕತೆ ಕೃತಿಯ ಕುರಿತು ಡಾ. ನಿರ್ಮಲಾ ಬಟ್ಟಲ ಅವರ ಭಾಷಣವನ್ನು ಶ್ರೀಮತಿ ಮಮತಾ ಶಂಕರ ಅವರು ಓದಿದರು. ವಸುಧಾರಾ ಕಾದಂಬರಿ ಕುರಿತು ರಾಜೇಶ್ವರಿ ಹಿರೇಮಠ ಅವರು ಮಾತನಾಡಿ ಇದೊಂದು ಉತ್ತಮ  ಆದರ್ಶಗಳಿಂದ ಕೂಡಿದ ಕೃತಿಯಾಗಿದ್ದು ಸಂಗಡ ಪ್ರವಾಸ ಕಥನವೂ ಆಗಿರುವುದು ವೈಶಿಷ್ಟ್ಯಪೂರ್ಣವಾಗಿದೆಯೆಂದರು. ಶ್ರೀಮತಿ ಅನ್ನಪೂರ್ಣಾ ಹಿರೇಮಠ ನಿರೂಪಿಸಿದರು. ವೇದಿಕೆಯಲ್ಲಿ ನಿರುಪಾದಯ್ಯ ಕಲ್ಲೋಳಿಮಠ, ಆರ್. ಪಿ. ಪಾಟೀಲ,
ಶಿ. ಗು. ಕುಸುಗಲ್ಲ, ಬಾಳಪ್ಪ ರಾಯಣ್ಣವರ, ಬಿ. ಕೆ. ಕಮ್ಮಾರ,  ಅಶೋಕ ಮಳಗಲಿ, ನಗರಸೇವಕ ಹನುಮಂತ ಕೊಂಗಾಲಿ ದೀಪಾ ಕುಡಚಿ, ಆನಂದ ಪುರಾಣಿಕ ಮೊದಲಾದವರು ಉಪಸ್ಥಿತರಿದ್ದರು.  ಶ್ರೀ ವಿ. ಕೆ. ಬಡಿಗೇರ ವಂದಿಸಿದರು. ಸ. ರಾ. ಸುಳಕೂಡೆ, ಬಸವರಾಜ ಗಾರ್ಗಿ, ಆರ್. ಎಸ್. ಚಾಪಗಾವಿ,  ಕೇದಾರ ಜೋರಾಪೂರ, ಪ್ರಹ್ಲಾದ ಜೋರಾಪೂರ, ಅನ್ನಪೂರ್ಣಾ ಮಳಗಲಿ, ಶ್ರೀರಂಗ ಜೋಶಿ ಮೊದಲಾದವವರ ಸಹಿತ ಅನೇಕ ಗಣ್ಯರು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.


Leave a Reply