This is the title of the web page
This is the title of the web page

Please assign a menu to the primary menu location under menu

Local News

ಆಗಷ್ಟ ೧೩ ರಂದು ಲೋಕ ಅದಾಲತ್


ಬೆಳಗಾವಿ,ಜುಲೈ ೭ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಮುರಳೀದರ ಪೈ. ಇವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಎಲ್ಲ ನ್ಯಾಯಾಲಯಗಳಲ್ಲಿ ಹಾಗೂ ಎಲ್ಲ ತಾಲೂಕುಗಳ ನ್ಯಾಯಾಲಯಗಳಲ್ಲಿ ಆಗಷ್ಟ ೧೩ರಂದು ಬೆಳಿಗ್ಗೆ ೧೧ ಗಂಟೆಯಿಂದ ಜಿಲ್ಲೆಯ ಎಲ್ಲ ನ್ಯಾಯಾಧೀಶರ ಹಾಗೂ ವಕೀಲರ ಸಹಯೋಗದಲ್ಲಿ ಲೋಕ ಅದಾಲತನ್ನು ಹಮ್ಮಿಕೊಳ್ಳಲಾಗಿದೆ.
ವೈವಾಹಿಕ, ಕೌಟುಂಬಿಕ ಮತ್ತು ಪಾಲು ವಿಭಾಗಕ್ಕೆ, ಬ್ಯಾಂಕುಗಳಿಗೆ ಸಂಬಂದಪಟ್ಟ ಪ್ರಕರಣಗಳು ಹಾಗೂ ಚೆಕ್ ಬೌನ್ಸ್, ಭಾರತ ದಂಡ ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು, ಹಣಕಾಸಿನ ದಾವೆಗಳು, ಸಿವಿಲ್ ವ್ಯಾಜ್ಯಗಳು, ಕಂದಾಯ ಪ್ರಕರಣಗಳು ಮತ್ತು ಇತರ ಎಲ್ಲ ರೀತಿಯ ರಾಜಿಯಾಗಬಹುದಾದಂತಹ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ತನಿಖೆಗೆ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಂಡು ರಾಜಿ ಸಂಧಾನದ ಮುಖಾಂತರ ಇತ್ಯರ್ಥಪಡಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಬಂದಪಟ್ಟ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ / ತಾಲೂಕಾ ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ, ಬ್ಯಾಂಕುಗಳು, ಕಕ್ಷಿದಾರರು ಹಾಗೂ ಜನ ಸಾಮಾನ್ಯರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply