This is the title of the web page
This is the title of the web page

Please assign a menu to the primary menu location under menu

Local News

ಚಿತ್ರಕಲೆಯನ್ನು ಮಕ್ಕಳಲ್ಲಿಟ್ಟೇ ಭಗವಂತ ಕಳುಹಿಸಿರುತ್ತಾನೆ : ಕೆ. ವಿ. ಸುಬ್ರಮಣ್ಯಂ


ಬೆಳಗಾವಿ ೨- ಚಿತ್ರಕಲೆಯನ್ನು ಮಕ್ಕಳಲ್ಲಿಟ್ಟೇ ಭಗವಂತ ಭೂಮಿಗೆ ಕಳುಹಿಸಿರುತ್ತಾನೆ. ಮಕ್ಕಳಲ್ಲಿರುವ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಯಿಸಬೇಕಾದದ್ದು ಹಿರಿಯರಾದ ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಬೆಂಗಳೂರಿನ ಖ್ಯಾತ ಚಿತ್ರಕಲಾ ವಿಮರ್ಶಕರಾದ ಕೆ. ವಿ. ಸುಬ್ರಮಣ್ಯಂ ಇಂದಿಲ್ಲಿ ಹೇಳಿದರು.
ನಗರದ ಮುತಗಾ ಗ್ರಾಮದ ಕಂಚವೀರನಗರದಲ್ಲಿ ‘ಚಿಗುರಿದ ಚಿಣ್ಣರ ಚಿತ್ತಾರ’ ಚಿತ್ರಕಲಾ ಪ್ರದರ್ಶನವನ್ನು ಇದೇ ದಿ. ೧ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಈ ಚಿತ್ರಕಲಾ ಪ್ರದರ್ಶನದಲ್ಲಿ ಪುಟಾಣಿ ಕಲಾವಿದರಾದ ಕು. ಗಗನ ಓಂಕಾರ ಮಠದ ಹಾಗೂ ಕು. ಸುನಿಲ ಓಂಕಾರ ಮಠದ ರಚಿಸಿದ ಚಿತ್ರಗಳ ಪ್ರದರ್ಶನ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಬ್ರಮಣ್ಯಂ ಮೇಲಿನಂತೆ ಅಭಿಪ್ರಾಯಪಟ್ಟರು.
ಮುಂದೆ ಮಾತನಾಡುತ್ತ ಸುಬ್ರಮಣ್ಯಂ ಮಕ್ಕಳಿಗೆ ಗೋಡೆಗಳ ಮೇಲೆ ಬರೆಯೋದಕ್ಕೆ ಬಿಟ್ಟುಬಿಡಿ. ಹಾಗೆ ಬರೆಯಲು ಯಾರೂ ಕಲಿಸಬೇಕಾಗಿಲ್ಲ, ಕಲಿಸುವ ಅಗತ್ಯವೂ ಇಲ್ಲ. ಕಲಿತರೆ ಆ ಮಕ್ಕಳಿಗೆ ಅದಕ್ಕಿಂತಲೂ ಚನ್ನಾಗಿ ಚಿತ್ರಗಳನ್ನು ಬಿಡಿಸುವುದು ಹೇಗೆ ಎಂಬುದನ್ನು ಹೇಳಿಕೊಡಬಹುದು. ಮಕ್ಕಳಿಗೆ ಸ್ವಚ್ಛಂದತೆ ಬಹಳ ಮುಖ್ಯ. ಎಂದು ಸುಬ್ರಮಣ್ಯಂ ್ಲ ಹೇಳಿದರು.
ಎಲ್ಲ ಆಟಗಳಂತೆ ಬಣ್ಣಗಳೊಂದಿಗೆ ಆಟವಾಡುವುದನ್ನು ಮಕ್ಕಳಿಗೆ ಕಲುಹಿಸಿ ಕೊಡಬೇಕು. ಒಳ್ಳೆಯ ಆಟಗಳಲ್ಲಿ ಇದೂ ಒಂದು. ಈ ಆಟವನ್ನು ಯಾವಾಗಲೂ ಆಡಬಹುದು. ನೀವು ಬಿಡಿಸಿದ ಚಿತ್ರವನ್ನು ನಿಮ್ಮ ತಂದೆ, ತಾಯಿ, ಶಿಕ್ಷಕರಿಗೆ ತೋರಿಸಿ ಆನಂದಿಸಬಹುದು ಎಂದು ಅವರು ಹೇಳಿದರು.
ಆರ್ಟ ಅಫೇಯರ್ ಪತ್ರಿಕೆ ಸಂಪಾದಕ ವಿಶ್ವನಾಥ ಗುಗ್ಗರಿಯವರು ಅಧ್ಯಕ್ಷೆಯನ್ನು ವಹಿಸಿದ್ದರು. ಅತಿಥಿಗಳಾಗಿ ಕಲಾವಿದರಾದ ಬಾಳು ಸದಲಗೆ, ಶ್ರೀಮತಿ ಮಿನಾಕ್ಷಿ ಸದಲಗೆ, ಶಶಿಕಲಾ ಮಣ್ಣೂರಮಠ ಆಗಮಿಸಿದ್ದರು.


Leave a Reply