This is the title of the web page
This is the title of the web page

Please assign a menu to the primary menu location under menu

Local News

ದೇಶ ಮೊದಲು ಎಂಬ ಭಾವನೆ ಸೈನಿಕರಲ್ಲಿಜe :ಲೆಫ್ಟಿನೆಂಟ್ ಕರ್ನಲ್ ವಿನೋದಿನಿ ಶರ್ಮಾ


ಬೆಳಗಾವಿ:ಆಗಷ್ಟ-೨೨: “ದೇಶ ಮೊದಲು ಎಂಬ ಭಾವನೆ ಸೈನಿಕರಲ್ಲಿ ಇರುತ್ತದೆ. ಅವರಿಂದಲೇ ನಮ್ಮ ದೇಶ ಸುರಕ್ಷಿತವಾಗಿದೆ. ಹೀಗಾಗಿ ನಾವೆಲ್ಲರೂ ಅಂಥ ಭಾವನೆ ಹೊಂದಬೇಕು”ಎಂದು ಲೆಫ್ಟಿನೆಂಟ್ ಕರ್ನಲ್ ವಿನೋದಿನಿ ಶರ್ಮಾ ಹೇಳಿದರು.
ನಗರದ ಲಿಂಗಾಯತ ಭವನದಲ್ಲಿ ಸ್ವಾತಂತ್ರೋತ್ಸವ ಹಾಗೂ ಶ್ರಾವಣ ಮಾಸದ ನಿಮಿತ್ಯ ಅರಿಶಿಣ, ಕುಕುಂಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಪಾಲ್ಗೊಂಡು ಮಾತನಾಡಿದ ಅವರು,” ಉಕ್ರೇನ್ ಸಣ್ಣ ದೇಶವಾಗಿದ್ದರೂ ಬಲಿಷ್ಠ ರಷಿಯಾ ವಿರುದ್ಧ ಸೆಟೆದು ನಿಂತಿದೆ. ಅಲ್ಲಿನ ಸೈನಿಕರು ತಮ್ಮ ಜೀವದ ಹಂಗು ತೊರೆದು ಶೌರ್ಯ, ಸಾಹಸ ಮೆರೆದಿದ್ದಾರೆ. ಹಾಗೆಯೇ ನಮ್ಮ ಸೈನಿಕರೂ ಗಡಿಯಲ್ಲಿ ನಿಸ್ವಾರ್ಥದಿಂದ, ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಬದಿಗಿಟ್ಟು ಸೇವೆ ಮಾಡುತ್ತಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಲಿಂಗಾಯತ ಮಹಿಳಾ ಮಂಡಳ ಸದಸ್ಯೆಯರು ದೇಶ ಭಕ್ತಿ ಗೀತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸೈನಿಕರ ವೇಷವನ್ನು ತೊಟ್ಟು ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ವಿನೋದಿನಿ ಶರ್ಮಾ ಅವರನ್ನು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲಿಂಗಾಯತ ಮಹಿಳಾ ಸಮಾಜದ ಗೌರವ ಅಧ್ಯಕ್ಷೆ ಶೈಲಜಾ ಭಿಂಗೆ, ಶೈಲಜಾ ಪಾಟೀಲ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಮಾಧುರಿ ಉಪ್ಪಿನ, ಡಾ.ಭಾರತಿ ಮಠದ, ಅಧ್ಯಕ್ಷೆ ವೀಣಾ ಚಿಣ್ಣನವರ ಸೇರಿ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಗೀತಾ ಗುಂಡಕಲ್ಲಿ ಕಾರ್ಯಕ್ರಮ ನಿರ್ವಹಿಸಿದರು.


Gadi Kannadiga

Leave a Reply