This is the title of the web page
This is the title of the web page

Please assign a menu to the primary menu location under menu

Local News

ಆರ್ ಬಿ ತಿಮ್ಮಾಪೂರಗೆ ಉಪ ಮುಖ್ಯಮಂತ್ರಿ ಸ್ಥಾನ £Ãಡಲು ಹೈ ಕಮಾಂಡಗೆ ಮಾದಿಗ ಸಮುದಾಯ ಒತ್ತಾಯ


ಬೆಳಗಾವಿ: ಈವರೆಗೆ ಕಾಂಗ್ರೇಸ್ ಪಕ್ಷದ £ಷ್ಠಾವಂತ ಕಾರ್ಯಕರ್ತರಾಗಿ ಯಾವ ಫಲಾಪೇಕ್ಷೆಯನ್ನು ಅಪೇಕ್ಷಿಸದೆ ಜನ ಸೇವೆಗೆ ಬದ್ಧರಾಗಿ. ಪಕ್ಷ ಸಂಘಟಿಸಿ ಕೆಲಸ ಮಾಡಿದ ಮಾಜಿ ಸಚಿವ ತಿಮ್ಮಾಪೂರ ರವರಿಗೆ ಕಾಂಗ್ರೇಸ್ ಪಕ್ಷದಿಂದಲೂ ಸಹ ಸಾಕಷ್ಟು ಬೆಂಬಲ, ಪ್ರೋತ್ಸಾಹ ದೊರಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಪ್ರತಿ ಬೆಳವಣಿಗೆಯಲ್ಲಿ ಕಾಂಗ್ರೇಸ್ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನವರೆಗೂ ಮತ್ತು ಅಭಿಮಾ£ಗಳು ಮತ್ತು ನಾಯಕರು ಜೊತೆಯಾಗಿ £ಂತು,
ಮಾಜಿ ಉಪ ಮುಖ್ಯಮಂತ್ರಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳರನ್ನು ಹೀನಾಯವಾಗಿ ಸೋಲಿಸುವ ಮೂಲಕ ತಮ್ಮ ೨೦ವರ್ಷದ ಕಹಿಬೇವಿಗೆ ಜೇನುತುಪ್ಪದ ಸವಿಯ ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ಆರ್. ಬಿ. ತಿಮ್ಮಾಪೂರರನ್ನು ೨೦೨೩ರ ಕಾಂಗ್ರೇಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ರಾಜ್ಯದ ಮಾದಿಗ ಎಡಗೈ ಸಮುದಾಯವು ಪಕ್ಷವನ್ನು ಒತ್ತಾಯಿಸಿದೆ.
ಕಾಂಗ್ರೆಸ್ ಪಕ್ಷದ ಹೈ ಕಮಾಂಡ ಸಾಮಾಜಿಕ ನ್ಯಾಯದಡಿಯಲ್ಲಿ ಆರ್ ಬಿ ತಿಮ್ಮಾಪೂರಗೆ ಉಪ ಮುಖ್ಯಮಂತ್ರಿ ಸ್ಥಾನ ಒದಗಿಸುತ್ತಾರೆಂದು ನಂಬಿದ್ದೇವೆ. ಶ್ರೀಯುತರು ೧೯೮೯ ರಲ್ಲಿ ಪ್ರಪ್ರಥಮ ಬಾರಿ ತಮ್ಮ ೨೭ ನೇ ವಯಸ್ಸಿನಲ್ಲಿಯೇ ಮುಧೋಳ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದಾಗ ಕೈಮಗ್ಗ ಮತ್ತು ಜವಳಿ £ಗಮದ ಅಧ್ಯಕ್ಷರಾಗಿ ನೇಕಾರರ ಬಗ್ಗೆ ಅಪಾರ ಕಾಳಜಿ ವಹಿಸಿ ಅನುಪಮ ಸೇವೆ ಸಲ್ಲಿಸಿದ್ದಾರೆ.
೨೦೦೦ ರಿಂದ ೨೦೦೪ ರಲ್ಲಿ ಮಾನ್ಯ ಶ್ರೀ ಎಸ್. ಎಮ್. ಕೃಷ್ಣರವರ ಸರಕಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಮುಧೋಳ ಕ್ಷೇತ್ರಕ್ಕೆ ಹತ್ತು ಹಲವಾರು ಜನಪರ ಯೋಜನೆಗಳನ್ನು ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.
೨೦೧೩ ರಲ್ಲಿ ಮಾನ್ಯ ಶ್ರೀ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದರು. ಆಗ ಕಾಂಗ್ರೆಸ್ ಜಯಗಳಿಸಿದ ಸಮಯದಲ್ಲಿ ಹಿನ್ನೆಡೆ ಕಂಡ ಆರ್ ಬಿ ತಿಮ್ಮಾಪೂರ ಕಾಂಗ್ರೆಸ್ ಪಕ್ಷವು ಮರು ಜೀವ £Ãಡಿತು ,ಪಕ್ಷ £ಷ್ಠೆಗೆ ಮತ್ತೆ ವಿಧಾನ ಪರಿಷತ ಸದಸ್ಯರನ್ನಾಗಿಸಿತು. ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿ ಕೆಲಸ ಮಾಡಿದರು. ಅಂದು ಕಬ್ಬು ಬೆಳಗಾರ ರೈತರ ಸಂಕಷ್ಟಕ್ಕೆ ಮುಖ್ಯಮಂತ್ರಿಗಳ ಮನವೊಲಿಸಿ, ಪ್ರತಿ ಟನ್ನ ಕಬ್ಬಿಗೆ ರೂ. ೩೫೦/- ಹೆಚ್ಚುವರಿ ಸರ್ಕಾರದ ಸಾಹಯ ಧನ ದೊರಕಿಸಲು ಶ್ರಮಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಬೀರಲು ಕಾರಣವಾದರು, ೨೦೧೮ ರ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅಬಕಾರಿ ಖಾತೆ £ರ್ವವಹಿಸಿದ್ದಾರೆ.
ಈ ಹಿಂದೆ ೨೦೧೯ ರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಶ್ರೀ ರಾಹುಲ್ ಗಾಂಧಿ ಮುಧೋಳಕ್ಕೆ ಆಗಮಿಸಿದ ಸಮಯದಲ್ಲಿ ಪ್ರಸುತ್ತ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಆರ್ ಬಿ ತಿಮ್ಮಾಪೂರ ಅವರು ಅತ್ಯಂತ ಚುರುಕಿ£ಂದ ಅಚ್ಚುಕಟ್ಟಾಗಿ ಕಾರ್ಯ£ರ್ವಹಿಸಿ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿ, ಭರ್ಜರಿ ಕಾರ್ಯಕ್ರಮ ಮಾಡಿ ಕ್ಷೇತ್ರದ ಮಾಹಾಜನತೆ ಹಾಗೂ ಪಕ್ಷದ ಹಿರಿಯ ನಾಯಕರಿಂದ ಸೈ ಅ£್ನಸಿಕೊಂಡಿದ್ದಾರೆ.
ಮಂಟೂರ ಮಹಾಲಕ್ಷಿ÷್ಮà ಏತ £Ãರಾವರಿ ಯೋಜನೆಗೆ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ಎಮ್. ಬಿ. ಪಾಟೀಲರಿಂದ ಮಂಜೂರಾತಿ ದೊರಕಿಸಿ ತಂದಿದ್ದು ಮಾಜಿ ಸಚಿವರು ಆರ್ ಬಿ ತಿಮ್ಮಾಪೂರ ರವರಿಗೆ ಈ ಸರಕಾರದ ರಚನೆಯಲ್ಲಿ ಸಾಮಾಜಿಕ ನ್ಯಾಯಡಿಯಲ್ಲಿ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಶ್ರೀ ಆರ್ ಬಿ ತಿಮ್ಮಾಪೂರ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರಕಿಸಿಕೊಡಲು ರಾಜ್ಯದ ಮಾದಿಗರ ಒತ್ತಾಯಿಸಿದೆ.

 


Leave a Reply