ಬೆಳಗಾವಿ ೧೦: ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಶ್ರೀ ಗುರುದೇವ ರಾನಡೆ ಮಂದಿರದಲ್ಲಿ ಏರ್ಪಡಿಸಲಾದ ಗುರುವಂದನಾ ಕಾರ್ಯಕ್ರಮದಲ್ಲಿ ಸಂಸಾರದಲ್ಲಿದ್ದುಕೊಂಡೇ ಇತರರಿಗೆ ಅಧ್ಯಾತ್ಮದ ಬಗ್ಗೆ ಅರಿವು ಮೂಡಿಸುತ್ತಿರುವ ಗಣ್ಯರಾದ ಡಾ. ಸಂತೋಷ್ ಮಗದುಮ್ ಆಧ್ಯಾತ್ಮ ಚಿಂತಕರಾದ ಸುಮನ್ ಪತ್ರಾವಳಿ ಅನಗೋಳದ ಸಂತಮೀರಾ ಶಾಲೆಯ ಶಿಕ್ಷಕಿ ವೀಣಾ ಜೋಶಿ ಇವರಿಗೆ ಗುರು ವಂದನೆ ಸಲ್ಲಿಸಲಾಯಿತು ಡಾ.ಸಂತೋಷ್ ಮಗದುಮ ಮಾತನಾಡಿ ನಮಗೆ ನಾವೇ ಗುರುವಾದರೆ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಹೇಳಿದರು
ಸುಮನ್ ಪತ್ರಾವಳಿ ಮಾತನಾಡಿ ಆತ್ಮ ಹಾಗೂ ಗುರುವಿನ ಸಂಬಂಧವನ್ನು ತಿಳಿಸಿ ಯಾವುದೇ ಕೆಲಸದ ಹಿಂದೆ ಉದ್ದೇಶ ಒಳ್ಳೆಯದಾಗಿರಬೇಕು ಆಗ ಮಾತ್ರ ನಮಗೆ ಒಬ್ಬ ಒಳ್ಳೆಯ ಗುರುವಿನ ಆಶೀರ್ವಾದ ಸಿಗಲು ಸಾಧ್ಯ ಎಂದು ಹೇಳಿದರು ಇಂದಿನ ದಿನಗಳಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಕಲಿಸಿಕೊಡುವುದು ಅತಿ ಅಗತ್ಯವಾಗಿದೆ ಭಗವದ್ಗೀತೆ ಕಲಿತು ಅದರ ಅರ್ಥವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಶಿಕ್ಷಕಿ ವೀಣಾ ಜೋಶಿ ಅವರು ಹೇಳಿದರು ಕಾರ್ಯಕ್ರಮದಲ್ಲಿ ಉಮಾ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿಗಳು ಗುರು ದಂಪತಿಗಳಾದ ಮಂಗಲ ಮಠದ ಡಾ. ರಾಜೇಂದ್ರ ಮಠದ ಅವರಿಗೆ ಗುರುವಂದನೆಯನ್ನು ಸಲ್ಲಿಸಿದರು ಅಧ್ಯಕ್ಷರಾದ ಮಂಗಲ ಮಠದ ಸ್ವಾಗತಿಸಿದರು ಕಾರ್ಯದರ್ಶಿಗಳಾದ ರತ್ನ ಶ್ರೀ ಗುಡೇರ ಪ್ರಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದ ಪ್ರಾಯೋಜಕರಾದ ಗೀತಾ ಎಮ್ಮಿ ಮತ್ತು ಮಮತಾ ಆಂಟಿನ ಪ್ರಾರ್ಥನೆ ಮಾಡಿದರು ಸುಲೋಚನಾ ವಸ್ತ್ರದ್ ಅನಿತಾ ಜಕ್ಕನವರ್ ಅತಿಥಿ ಪರಿಚಯ ಮಾಡಿದರು ಮೈನಾ ಕುಲಕರ್ಣಿ ವಂದಿಸಿದರು ಶೈಲಾ ದೇಶಪಾಂಡೆ ನಿರೂಪಣೆ ಮಾಡಿದರು ಈ ವರ್ಷದ ಮಂಡಳದ ಹೊಸ ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು ಅಧ್ಯಕ್ಷರಾಗಿ ಮಂಗಲ ಮಠದ ಉಪಾಧ್ಯಕ್ಷರಾಗಿ ತೃಶೀಲಾ ಪಾಯಪ್ಪನವರ ಕಾರ್ಯದರ್ಶಿಗಳಾಗಿ ರೇಣುಕಾ ಕಾಂಬಳೆ, ಉಪ ಕಾರ್ಯದರ್ಶಿಗಳಾಗಿ ಮಮತಾ ಆಂಟಿನ ಖಜಾಂಚಿಗಳಾಗಿ ಗೀತಾ ಎಮ್ಮಿ ಉಪಕಚಾಂಜಿಯಾಗಿ ದೀಪ್ತಿ ಕಾಗವಾಡ ಇವರನ್ನು ನೇಮಿಸಲಾಯಿತು
ಆಡಳಿತ ಮಂಡಳಿಯ ಸದಸ್ಯರು ಮಂಗಲ ಮಠದ ತೃಶೀಲಾಪಾಯಪ್ಪನವರ ರೇಣುಕಾ ಕಾಂಬಳೆ ಗೀತಾ ಎಮ್ಮಿಆಶಾ ನಿಲಜಗಿ ರತ್ನಶ್ರೀ ಗುಡೇರ ಮಮತಾ ಆಂಟಿನ ದೀಪ್ತಿ ಕಾಗವಾಡ ಶೋಭಾ ಕಾಡನ್ನವರ್ ಭಾರತಿ ರತ್ನಪ್ಗೊಳ ಅಕ್ಷತಾ ಪಾಟೀಲ್ ಕಾರ್ಯಕ್ರಮದಲ್ಲಿ ಉಮಾಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು
Gadi Kannadiga > Local News > ನಮಗೆ ನಾವೇ ಗುರುವಾದರೆ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ : ಮಗದುಮ್ಮ
ನಮಗೆ ನಾವೇ ಗುರುವಾದರೆ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ : ಮಗದುಮ್ಮ
Suresh10/07/2023
posted on
