This is the title of the web page
This is the title of the web page

Please assign a menu to the primary menu location under menu

Local News

ಮಹದಾಯಿ ಕಳಸಾ ಬಂಡೂರಿ ಮತ್ತು ಮೇಕೆದಾಟು ಯೋಜನೆ ಶೀಘ್ರವೇ ಅನುಷ್ಠಾನಗೊಳಿಸಿ : ಕೋಡಿಹಳ್ಳಿ ಚಂದ್ರಶೇಖg


ಯರಗಟ್ಟಿ : ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಹದಾಯಿ ಹಾಗೂ ಕಳಸಾ, ಬಂಡೂರಿ ಯೋಜನೆ ವಿಚಾರವಾಗಿ ನ್ಯಾಯಾಲಯದ ತೀರ್ಪು ರಾಜ್ಯದ ಪರ ಬಂದಿದೆ. ಹೀಗಿದ್ದರೂ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ವಿಫಲವಾಗಿದೆ. ಇದರಿಂದ ರೊಚ್ಚಿಗೆದ್ದ ರೈತರೇ ಕಾಮಗಾರಿಗೆ ಅಡಿಗಲ್ಲು ಹಾಕುವ ದಿನ ದೂರವಿಲ್ಲ. ಇದಕ್ಕೂ ಪೂರ್ವ ಸರಕಾರ ಈ ಯೋಜನೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ೬೪ ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣ ವಾಗಿ ರೈತರು ಕಷ್ಟದಲ್ಲಿದ್ದಾರೆ. ಹೀಗಿರುವಾಗ ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ನೆರವಿಗೆ ಬರಬೇಕು,” ಎಂದು ಅವರು ಆಗ್ರಹಿಸಿದರು.
ಮಾಜಿ ಸೈನಿಕರು, ಪ್ರಗತಿಪರ ರೈತರು ಹಾಗೂ ನಿವೃತ್ತ ನೌಕರರನ್ನು ಇದೇ ವೇಳೆ ಸನ್ಮಾನಿಸಲಾಯಿತು. ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರೈತ ಮುಖಂಡರಾದ ಸೋಮು ರೈನಾಪೂರ, ಭೀಮಶಿ ಗಂಡಶಿ, ಮಲ್ಲನಗೌಡ ಪಾಟೀಲ, ಶಂಕರ ಮುದ್ದಿಹಳ್ಳಿ, ಜೆ.ರತ್ನಾಕರ ಶೆಟ್ಟಿ ವೆಂಕಣ್ಣ ಹುರಕನವರ, ರಂಗಪ್ಪ ಗಂಗರಡ್ಡಿ, ಯಕ್ಕರೆಪ್ಪ ತಳವಾರ, ತಮ್ಮಣ್ಣ ಖಿಲಾರಿ, ಕೃಷ್ಣಾ ಯಮ್ಮಿ ಗಿರೆಪ್ಪ ಗಂಗರಡ್ಡಿ, ಚಿದಂಬರ ಕಟ್ಟಿಮನಿ, ಯಶವಂತ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Leave a Reply