This is the title of the web page
This is the title of the web page

Please assign a menu to the primary menu location under menu

Local News

ಆನಂದ ಮಾಮನಿ ಗುಣಮುಖರಾಗಲೆಂದು ಮಹಾಮೃತ್ಯುಂಜಯ ಯಾಗ


ಸವದತ್ತಿ ೨೮: ಶಾಸಕ ಆನಂದ ಮಾಮನಿಯವರು ಬೇಗನೆ ಗುಣಮುಖ ರಾಗಲೇಂದು ಹಾರೈಸಿ ಅಭಿಮಾನಿ ಬಳಗದವರು ಎಸ್ ಎಲ್ ಓ ಕ್ರಾಸ ಹತ್ತಿರದ ಕೆ ಇ ಬಿ ಮಹಾಮೃತ್ಯುಂಜಯ ಯಾಗವನ್ನು ಗಜಾನನ ದೇವಸ್ಥಾನದಲ್ಲಿ ಮಾಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಗುರ್ಲಹೊಸೂರಿನ ಗಣ್ಯರಾದ ಬಸವರಾಜ ಕಾರದಗಿ ಯವರು ಮಾತನಾಡಿ ಶಾಸಕ ಆನಂದ ಮಾಮನಿಯವರು ಗುಣಮುಖರಾಗಿ ಬರುವುದರಲ್ಲಿ ಯಾವೂದೇ ಸಂದೇಹವಿಲ್ಲ ಸಕ್ಕರೆ ಖಾಯಿಲೆ ಅವರನ್ನು ಕಾಡುತ್ತಿದೆ, ಮತ್ತು ತಾಲೂಕಿನಲ್ಲಿ ಅವರು ಮಾಡಿದ ಅಭಿವೃದ್ದಿ ಕಾರ್ಯಗಳು ಮತ್ತು ತಾಲೂಕಿನಲ್ಲಿ ಎಲ್ಲ ದೇವಸ್ಥಾನಗಳು ಅವರ ಅಧಿಕಾರದ ಅವಧಿಯಲ್ಲಿ ಅಭಿವೃದ್ದಿ ಯಾಗಿವೆ ಆ ಎಲ್ಲ ದೇವರು ಅವರ ರಕ್ಷಣೆಗೆ ಇದ್ದಾರೆ. ಮತ್ತು ಜಗನ್ಮಾತೆ ರೇಣುಕಾ ಮಾತೆಯ ಆಶಿರ್ವಾದ ಅವರಿಗಿದೆ ಅವರು ಆರೋಗ್ಯ ಸುಧಾರಣೆ ಯಾಗಿ ಬರುತ್ತಾರೆ ಮತ್ತೆ ತಾಲೂಕಿಗೆ ಅವರೇ ಶಾಸಕರಾಗಿ ಸಚಿವರಾಗಿ ಬರುತ್ತಾರೆ ಜನರು ಆತಂಕಕ್ಕೆ ಒಳಗಾಗಬಾರದು ಎಂದು ಮಾತನಾಡಿದರು
ವೇದ ಮೂರ್ತಿ ಹರೀಶ್ ಶರ್ಮಾರವರು ಈ ಮಹಾಮೃತ್ಯುಂಜಯ ಯಾಗವೂ ಬಹಳಷ್ಟು ಶಕ್ತಿಯಾದ ಹೋಮ ಈದನ್ನು ಭಕಿ ಶ್ರದ್ದೆಯಿಂದ ಮಾಡಿದರೆ ಅವರ ಇಷ್ಟಾರ್ಥಗಳು ಇಡೆರುತ್ತವೆ ಮಾಮನಿ ಬಳಗದವರು ಮಾಡಿದ ಯಾಗವು ಅವರು ಗುಣಮುಖರಾಗಿ ಬರುವರು ಎಂದರು
ಈ ಸಂದರ್ಭದಲ್ಲಿ ಆನಂದ ಮಾಮನಿಯವರ ಪುತ್ರ ಚಿನ್ಮಯ ಆನಂದ ಮಾಮನಿ, ಗಣೇಶ ಪೂಜಾರ ಬಸವರಾಜ ಶೀಂತ್ರಿ ನಿಂಗಪ್ಪ ಮಿಶಿ ಶ್ರೀಶೈಲ ಕಾರದಗಿ, ,ಮಲ್ಲಿಕಾರ್ಜುನ ನರಗುಂದ, ಶೇಖರ ಪುರದಗುಡಿ, ಚೇತನ ಸುತಗಟ್ಟಿ, ಸೇರಿದಂತೆ ಆನಂದ ಮಾಮನಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು


Gadi Kannadiga

Leave a Reply