ಯಮಕನಮರಡಿ: ಭಾರತೀಯ ಜನತಾಪಕ್ಷದಲ್ಲಿದ್ದುಕೊಂಡು ಚುನಾವಣೆಯಲ್ಲಿ ಟಿಕೇಟು ಸಿಗದೆ ಇದ್ದ ಕಾರಣಕ್ಕೆ £ರಾಶಗೊಂಡು ಪಕ್ಷಾಂತರವಾಗಿದ್ದು, ತಾಯಿಗೆ ದ್ರೋಹ ಬಗೆದಂತೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಅವರು ಬುಧವಾರ ದಿ. ೧೯ ರಂದು ಯಮಕನಮರಡಿಂiÀiಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರು ಹುಕ್ಕೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ದಾದಾಬಾನಟ್ಟಿಯಿಂದ ಯಮಕನಮರಡಿ ಗ್ರಾಮದವರೆಗೆ ತೆರೆದ ವಾಹನದಲ್ಲಿ ಭವ್ಯ ಮರೆವಣಿಗೆ ಮೂಲಕ ಗ್ರಾಮದ ಆಗಮಿಸಿದ ನಂತರ ಸಾರ್ವಜ£ಕರನ್ನು ಉದ್ದೇಶಿಸಿ ಮಾತನಾಡಿದರು. ರಾಜಕೀಯ ಇತಿಹಾಸದಲ್ಲಿ ಘಟಾನುಘಟಿಗಳು ಕೂಡಾ ಒಬ್ಬ ಸಾಮಾನ್ಯ ಅಭ್ಯರ್ಥಿಯಿಂದ ಸೋಲನ್ನು ಅನುಭವಿಸಿದ್ದಾರೆ. ಬಿಜೆಪಿಯಲ್ಲಿದ್ದ ಮುಖಂಡರೊಬ್ಬರು ಟಿಕೇಟು ಕೈತಪ್ಪಿದ್ದರಿಂದ ಜೆಡಿಎಸ್ ಪಕ್ಷದಿಂದ ಚುನಾವಣೆಗೆ ಸ್ಪರ್ದಿಸಿದ್ದು, ಅವರು ಚುನಾವಣೆ ಕಣದಿಂದ ಹಿಂದಕ್ಕೆ ಸರಿದು ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರನ್ನು ಬೆಂಬಲಿಸಬೇಕೆಂದು ಹೇಳಿದರು. ಡಬಲ್ ಎಂಜಿನ ಸರ್ಕಾರಗಳು ರಾಜ್ಯ ದೇಶದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡಿವೆ. ಯಮಕನಮರಡಿ ಮತಕ್ಷೇತ್ರದಲ್ಲಿ ಇನ್ನೂ ಹಲವಾರು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಜನಸಾಮಾನ್ಯರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರ ಗೆಲುವು ಖಚಿತ ಎಂದು ಮಹಾಂತೇಶ ಕವಟಗಿಮಠ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಮಾತನಾಡಿ ಕಳೆದ೧೫ ವರ್ಷಗಳಿಂದ ಕ್ಷೇತ್ರದಲಿ ಬಿಜೆಪಿ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಲಾಗಿದ್ದು, ಇಂದು ಕ್ಷೇತ್ರದಲ್ಲಡೆ ಬಿಜೆಪಿ ಪರ ವಾತಾವರಣವಿದ್ದು, ಈ ಚುನಾವಣೆಯು ನನ್ನ ಸ್ವಂತ ಚುನಾವಣೆಯಲ್ಲ ಪ್ರತಿಯೊಬ್ಬರ ಕಾರ್ಯಕರ್ತರ ಚುನಾವಣೆಯಾಗಿದೆ. ಸ್ಥಳೀಯ ಶಾಸಕರು ಹಿಂದೂಗಳ ಭಾವನೆಗೆ ವಿರುದ್ದವಾಗಿ ವರ್ತಿಸಿದ್ದು,ಅವರ ಈ £Ãತಿಯಿಂದ ಹಿಂದೂಗಳ ಭಾವನೆಗೆ ದಕ್ಕೆಯಾಗಿದೆ. ಕುಡಿಯುವ £Ãರು ಹಲವಾರು ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಈ ಚುನಾವಣೆಯಲ್ಲಿ ದುಡಿದು ಗೆಲ್ಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ರಾಜೇಶ ನೇರ್ಲಿ ರವಿ ಹಂಜಿ ಮಾತನಾಡಿದರು. ಈ ವೇಳೆಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಶ್ರೀಶೈಲ ಯಮಕನಮರಡಿ, ಅಪ್ಪಯ್ಯ ಜಾಜರಿ, ಶೇಖರಗೌಡ ಮೋದಗಿ, ಶಶಿಕಾಂತ ಪಾಟೀಲ, ಅಡಿವೆಪ್ಪ ಜಿಂಡ್ರಾಳಿ, ಮಹಾರುದ್ರ ಜರಳಿ, ಸಿದ್ದಲಿಂಗ ಸಿದ್ದಗೌಡರ, ಗುರುಸಿದ್ದ ಪಾಯನ್ನವರ, ಬಸವರಾಜ ಬರಗಾಲಿ, ಬಸವರಾಜ ಪೂಜೇರಿ, ಯಲ್ಲಪ್ಪ ಗಡಕರಿ, ಮಹಾವೀರ ನಾಶಿಪುಡಿ, ಅಮರನಾಥ ಮಹಾಜನಶೆಟ್ಟಿ, ಅರ್ಜುನ ಬಡಕರಿ, ಅಡಿವೆಪ್ಪ ಹುಕ್ಕೇರಿ, ಮೊದಲಾದವರು ಉಪಸ್ಥಿತರಿದ್ದರು. ಈರಣ್ಣಾ ಗುರುವ ಸ್ವಾಗತಿಸಿ ಕಾರ್ಯಕ್ರಮ £ರೂಪಿಸಿದರು.
Gadi Kannadiga > Local News > ಪಕ್ಷಕ್ಕೆ ದ್ರೋಹ ತಾಯಿಗೆ ದ್ರೋಹ ಬಗೆದಂತೆ ; ಮಹಾಂತೇಶ ಕವಟಗಿಮಠ
ಪಕ್ಷಕ್ಕೆ ದ್ರೋಹ ತಾಯಿಗೆ ದ್ರೋಹ ಬಗೆದಂತೆ ; ಮಹಾಂತೇಶ ಕವಟಗಿಮಠ
Suresh19/04/2023
posted on
