This is the title of the web page
This is the title of the web page

Please assign a menu to the primary menu location under menu

State

ಜಿ.ಪಂ. ಸಿ.ಇ.ಓ ಅವರಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಕಾಮಗಾರಿ ವೀಕ್ಷಣೆ


ಗದಗ ಸೆಪ್ಟೆಂಬರ್ ೨೦: ಜಿಲ್ಲೆಯ ಗದಗ ತಾಲ್ಲೂಕಿನ ಚಿಕ್ಕಹಂದಿಗೋಳ ಗ್ರಾಮದ ಶ್ಯಾಗೋಟಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಗತಿಯಲ್ಲಿರುವ ಕೆರೆ ಹೊಳೆತ್ತುವ ಕಾಮಗಾರಿಯನ್ನು ಜಿ.ಪಂ. ಸಿ.ಇ.ಓ ಡಾ.ಬಿ.ಸುಶೀಲಾ ವೀಕ್ಷಣೆ ಮಾಡಿದರು. ನಂತರ ಅವರು ಮಾತನಾಡಿ ನರೇಗಾ ಯೋಜನೆಯನ್ನು ಪ್ರತಿ ಕೂಲಿಕಾರರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ನರೇಗಾ ಯೋಜನೆಯಡಿ ಅನುಷ್ಠಾನಿಸುವ ಕಾಮಗಾರಿ ಹಾಗೂ ಕೂಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಸರ್ಕಾರ ಕೆಲಸಗಾರರ ದಿನದ ಹಾಜರಾತಿ ಆನ್‌ಲೈನ್ ಮೂಲಕ ಕೆಲಸದ ಸ್ಥಳದಲ್ಲೇ ದಿನಕ್ಕೆ ಎರಡು ಬಾರಿ ಹಾಕಲು ಏನ್.ಎಂ.ಎಂ.ಎಸ್ ಆಪ್ ಜಾರಿಗೆ ತಂದಿದೆ, ಕೆಲಸ ಮಾಡುವವರು ಎರಡು ಬಾರಿ ಹಾಜರಾತಿ ಹಾಕುವವರೆಗೆ ಕಾಮಗಾರಿ ಸ್ಥಳದಲ್ಲೇ ಇರಬೇಕು. ಆಗ ಮಾತ್ರ ಕೆಲಸಗಾರರು ಕೆಲಸ ಮಾಡಿದ ಕೂಲಿ ಹಣ ಅವರ ಬ್ಯಾಂಕ ಖಾತೆಗೆ ಜಮೆಯಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಕಾರ್ಯಾಲಯ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದ ಅವರು ಕೂಲಿಕಾರರು ಸದರ ಶಿಬಿರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ.ಸುಶೀಲಾ ಬಿ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ , ಸಹಾಯಕ ನಿರ್ಧೇಶಕರು (ಗ್ರಾ.ಉ), ಪಿಡಿಓ, ಜಿಲ್ಲಾ ಹಾಗೂ ತಾಲ್ಲೂಕ ಐ.ಇ.ಸಿ ಸಂಯೋಜಕರು, ನರೇಗಾ ತಾಂತ್ರಿಕ ಸಂಯೋಜಕ, ಗ್ರಾಪಂ ತಾಂತ್ರಿಕ ಸಹಾಯಕ, ಬಿ.ಎಫ್.ಟಿ ಹಾಗೂ ಗ್ರಾಮ ಕಾಯಕ ಮಿತ್ರರು ಸೇರಿದಂತೆ ೨೫೩ ಜನ ನೋಂದಾಯಿತ ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.


Gadi Kannadiga

Leave a Reply