This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲಾಡಳಿತದಿಂದ ಮಹಾಯೋಗಿ ವೇಮನ ಜಯಂತಿ


ಗದಗ ಜನೇವರಿ ೧೯ : ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಶಾಸಕರಾದ ಹೆಚ್ ಕೆ ಪಾಟೀಲ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಣೆಗೆ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕಂತಿ ಇಲಾಖೆ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶ್ರೀ ಮಹಾಯೋಗಿ ವೇಮನ ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘಗಳ ಸಹಯೋಗದಲ್ಲಿ ಗುರುವಾರ ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ಆಚರಿಸಲಾಯಿತು.
ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ ಅವರು ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿದರು. ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಹಾಗೂ ಅಬ್ಬಿಗೇರಿ ಬಸವರೆಡ್ಡಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಶೇಖರೆಡ್ಡಿ ಗದ್ದಿಕೇರಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಸಮಾಜ ಬಾಂಧವರು ಯಾವಾಗಲೂ ಶ್ರೀಮಂತರಾಗಿರಲಿ ಎಂದು ವರವನ್ನು ಪಡೆದವರು ಎಂದರು. ಸಮಾಜದ ಯುವ ಸಮುದಾಯವನ್ನು ಸರ್ಕಾರದ ಮುಖ್ಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಈ ಬಗ್ಗೆ ಮಹಿಳಾ ಮಣಿಗಳು ಕಾರ್ಯಶೀಲರಾಗಬೇಕು ಎಂದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೋ.ಆರ್.ಎಲ್.ಪೋಲಿಸ್ ಪಾಟೀಲ ಅವರು ಮಹಾಯೋಗಿ ವೇಮನರ ಜೀವನ ಮತ್ತು ಸಂದೇಶ ಕುರಿತು ಮಾತನಾಡಿ, ಕಾರಣಗಳನ್ನು ತಿಳಿದು ಮಹಾಪುರುಷರ ಜಯಂತಿ ಆಚರಣೆ ಮಾಡಬೇಕು ಎಂದರು. ಜೀವನದ ಕ್ರಮಗಳನ್ನು ತಿಳಿಯಲು, ನಮಗೆ ಬದುಕಿನ ಅರ್ಥ ಅರಿಯಲು ಮಹಾಪುರುಷರ ಜಯಂತಿ ಸಹಕಾರಿಯಾಗಿವೆ. ಭೂಮಿಯಲ್ಲಿ ಮಹಾನ್ ಪುಣ್ಯ ಪುರುಷರು ಹುಟ್ಟದಿದ್ದರೆ ಹಗಲು ರಾತ್ರಿಗಳೇ ಇರುತ್ತಿರಲಿಲ್ಲ.
ವಿದ್ವಾಂಸರ ಕುಟುಂಬದಲ್ಲಿ ಜನಿಸಿದ ವೇಮನರಿಗೆ ಬಾಲ್ಯದಲ್ಲಿ ಶಿಕ್ಷಣದ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಜೀವನದ ಮುಕ್ತಿ ಮಾರ್ಗ ತೋರಿಸುವವರು ಗುರುಗಳು ಎಂದು ವೇಮನರು ಶಿಕ್ಷಣದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವೇಮನರು ಮಹಾನ ಜ್ಞಾನಿ, ಮಹಾಯೋಗಿ ಯಾಗಿ ಪರವರ್ಥಿಸುವಲ್ಲಿ ಹೇಮರೆಡ್ಡಿ ಮಲ್ಲಮ್ಮ ಶ್ರಮ ಅಪಾರ ಎಂದರು. ಜನರಲ್ಲಿದ್ದು ಜನರಿಂದ ಕಲಿತು ಜನರಿಗೆ ಕಲಿಸುವ ಮಹಾಯೋಗಿ ವೇಮನರು.ರೆಡ್ಡಿ ಸಮಾಜದ ಗದಗ ಜಿಲ್ಲಾಧ್ಯಕ್ಷ ರವೀಂದ್ರನಾಥ ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಗಳಾಗಿ ಪ್ರಮುಖರಾದ ಮಾಜಿ ಶಾಸಕ ಬಿ ಆರ್ ಯಾವಗಲ್, ಸೋಮರೆಡ್ಡಿ ತಿಮ್ಮೆನಹಳ್ಳಿ, ಗಿರಡ್ಡಿ ಸೋಮಣ್ಣ, ಎ ಎನ್ ನಾಗರಲ್ಲಿ, ಶೇಖರೆಡ್ಡಿ ಗದ್ದಿಕೆರೆ, ಪ್ರೇಮಾ ಮೇಟಿ, ಎಚ್ ಜಿ ಹಿರೇಗೌಡ್ರ, ಕರಬಸಪ್ಪ ಹಂಚಿನಾಳ, ಆರ್ ಆರ್ ಸಾವಕಾರ, ಶಿವಶರಣಪ್ಪ, ಶಂಕರಗೌಡ, ರವಿ ಮೂಲಿಮನಿ, ಎಸ್ ಎಸ್ ರೆಡ್ಡಿ, ಸೇರಿಯಪ್ಪಗೌಡ್ರ ಇತರರು ಇದ್ದರು.
ಪಂ. ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯ ವೆಂಕಟೇಶ ಆಲಕೊಡ ಸಂಗಡಿಗರು ನಾಡಗೀತೆ, ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ಸುಧಾ ಹುಚ್ಚನ್ನನವರ ಕಾರ್ಯಕ್ರಮ ನಿರ್ವಹಿಸಿದರು.


Gadi Kannadiga

Leave a Reply