ಬೈಲಹೊಂಗಲ -೨೦ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ ಅವರನ್ನು ಸಂಸ್ಕಾರವಂತರಾಗಿ ಮಾಡುವುದು ಪ್ರತಿಯೊಬ್ಬರ ರ‍್ತವ್ಯವಾಗಿದೆ ಎಂದು ರ‍್ನಾಟಕ ಮೂಲಸೌರ‍್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಹುಬ್ಬಳ್ಳಿ ಗ್ರಾಮೀಣ ಕರ‍್ಯನರ‍್ವಾಹಕ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಪಾಲಕರಿಗೆ ಕರೆ ನೀಡಿದರು
ಪಟ್ಟಣದ ಬೈಲವಾಡ ರಸ್ತೆಯಲ್ಲಿರುವ ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಆಕ್ಸರ‍್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ವರ‍್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದವರು ಶಿಕ್ಷಣ ಎಂದು ಎಲ್ಲರಿಗೂ ಅವಶ್ಯವಾಗಿದ್ದು ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಅವರ ಚಲನವಲನಗಳನ್ನು ಗಮನಿಸಿ ಮಕ್ಕಳು ದುಷ್ಟ ಚಟಕ್ಕೆ ಬಲಿಯಾಗದಂತೆ ನೋಡಿ ಅವರಿಗೆ ಒಳ್ಳೆಯ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸಬೇಕೆಂದು ನುಡಿದರು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ್ ಮಾತನಾಡಿ ವಿದ್ಯರ‍್ಥಿಗಳು ದುಷ್ಟ ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದು ಗುರು ಹಿರಿಯರಿಗೆ ಗೌರವ ನೀಡುತ್ತಿಲ್ಲ ಇಂಥ ಸಂರ‍್ಭದಲ್ಲಿ ಪಾಲಕರು ಮಕ್ಕಳ ಕಡೆಗೆ ಗಮನಹರಿಸಿ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ವಿದ್ಯರ‍್ಥಿ ಜೀವನ ಬಹು ಮುಖ್ಯವಾಗಿದ್ದು ವಿದ್ಯರ‍್ಥಿಗಳು ವಿದ್ಯಾಭ್ಯಾಸ ಕಡೆಗೆ ಗಮನಹರಿಸಿ ಉತ್ತಮ ಶಿಕ್ಷಣ ಪಡೆದು ಶಿಕ್ಷಣವಂತರಾಗಿ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ದೇಶದ ಪ್ರಗತಿಗೆ ಶ್ರಮಿಸಬೇಕೆಂದು ನುಡಿದರು
ಇನ್ನರ‍್ವ ಅತಿಥಿ ಮಾಜಿ ಶಾಸಕ ಕನ್ನಡ ಅಧ್ಯಕ್ಷ ಡಾಕ್ಟರ್ ವಿಶ್ವನಾಥ್ ಪಾಟೀಲ್ ಮಾತನಾಡಿ ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಅಲ್ಪಾವಧಿಯಲ್ಲಿ ದೊಡ್ಡ ಸಂಸ್ಥೆಯನ್ನಾಗಿ ಮಾಡಿ ಸಾವಿರಾರು ವಿದ್ಯರ‍್ಥಿಗಳಿಗೆ ವಿದ್ಯಾ ದಾನ ಮಾಡಿದ ಬಿರಾದರವರ ಸಾಧನೆಯನ್ನು ಶ್ಲಾಘಿಸಿ ಎಲ್ಲರೂ ಉತ್ತಮ ಶಿಕ್ಷಣ ಪಡೆದು ಪ್ರಜೆಗಳಾಗಬೇಕೆಂದು ನುಡಿದರು
ಸಮಾರಂಭ ಸಾನಿಧ್ಯ ವಹಿಸಿದ ತಾಳಿಕೋಟೆ ಖಾಸ್ಗತೇಶ್ವರ ಮಠದ ಪೂಜ್ಯಶ್ರೀ ಸಿದ್ದಲಿಂಗ ದೇವರು ಮಾತನಾಡಿ ವಿದ್ಯರ‍್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಹೊಂದಿ ಗುರು ಹಿರಿಯರಿಗೆ ಗೌರವ ನೀಡಿ ಆರ‍್ಶ ವಿದ್ಯರ‍್ಥಿಗಳ ಆಗಬೇಕೆಂದು ನುಡಿದರು.
ಸಂಸ್ಥೆಯ ಅಧ್ಯಕ್ಷ ಕಾಶಿನಾಥ್ ಬಿರಾದಾರ್ ಕರ‍್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಮಹಮದ್ ಸಾಹೇಬ್ರದ ಈಶ್ವರ್ ಹೂಟಿ ಕೆ ಎ ಎಸ್ ಅಧಿಕಾರಿ ರಶ್ಮಿ ಜಕಾತಿ, ಮೇಜರ್ ಸಂಜೀವ್ ರೆಡ್ಡಿ ಪಾಟೀಲ, ಡಾಕ್ಟರ್ ಚನ್ನಪ್ಪ ಇಂಗಳಗಿ, ಡಾಕ್ಟರ್ ಭಾರತಿ ಹುಡೆದ, ಸಂಸ್ಥೆ ಉಪಾಧ್ಯಕ್ಷ ಯೋಗೀಶ್ ಬಿರಾದರ, ಪ್ರಾಚರ‍್ಯ ರಾಜಶೇಖರ್ ಬಿರಾದಾರ ಅತಿಥಿಗಳಾಗಿ ಆಗಮಿಸಿದ್ದರು.
ಶಾಲೆಯ ಹಳೆ ವಿದ್ಯರ‍್ಥಿಗಳನ್ನು ಗಣ್ಯರನ್ನು ಈ ಸಂರ‍್ಭದಲ್ಲಿ ಸನ್ಮಾನಿಸಲಾಯಿತು ಅಲ್ಲದೆ ವಿದ್ಯರ‍್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯರ‍್ಥಿಗಳಿಂದ ಮನರಂಜನ ಕರ‍್ಯಕ್ರಮಗಳು ಜರುಗಿದವು.
ಪ್ರಾಚರ‍್ಯ ಅಜಯ್ ಗಡ್ಡಿ ಸ್ವಾಗತಿಸಿದರು ಶಿಕ್ಷಕ ಎಸ್ ವಿ ಚಿಕ್ಕೋಡಿ ನಿರೂಪಿಸಿದರು. ಶಿಕ್ಷಕಿ ಗೀತಾಂಜಲಿ ಬಾಗಲಕೋಟ ವರದಿ ವಾಚಿಸಿದರು.