This is the title of the web page
This is the title of the web page

Please assign a menu to the primary menu location under menu

State

ಮೇಕ್ ಇನ್ ಇಂಡಿಯಾ ಸ್ವಯಂ ಉದ್ಯೋಗ ಸೃಷ್ಟಿಗೆ ಅವಕಾಶ್


ನವದೆಹಲಿ,ನ.೨೨- ‘ಮೇಕ್ ಇನ್ ಇಂಡಿಯಾ’, ‘ಲೋಕಲ್ ಫಾರ್ ವೋಕಲ್’ ನಂತಹ ಯೋಜನೆಗಳು ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶ ಸೃಷ್ಟಿಸಲು ಸಹಕಾರಿಯಾಗಲಿವೆ ಎಂದು ಪ್ರಧಾ£ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಪ್ರೊಡಕ್ಷನ್ ಲಿಂಕ್ ಇ£ಶಿಯೇಟಿವ್ (ಪಿಎಲ್‌ಐ) ಉತ್ಪಾದನೆ ಆಧಾರಿತ ಉಪಕ್ರಮ ಯೋಜನೆ ಹೊಸ ಉದ್ಯೋಗಾವಕಾಶಗಳ ತಾಣ. ಈ ಯೋಜನೆಯಡಿ ೬೦ ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ £ರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಎರಡನೇ ಉದ್ಯೋಗ ಮೇಳದಲ್ಲಿ ದೇಶಾದ್ಯಂತ ೭೧,೦೫೬ ಮಂದಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ಆನ್‌ಲೈನ್‌ನಲ್ಲಿ ವಿತರಿಸಿ ಮಾತನಾಡಿದ ಮೋದಿ “ಪಿಎಲ್‌ಐ ಯೋಜನೆಯಡಿಯಲ್ಲಿ ೬೦ ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ £ರೀಕ್ಷೆಯಿದೆ. ಇದು ಮೇಕ್ ಇನ್ ಇಂಡಿಯಾ ಅಥವಾ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.ಈ ಎಲ್ಲಾ ಯೋಜನೆಗಳು ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶ ಸೃಷ್ಟಿಸುತ್ತಿವೆ. ಅವಕಾಶಗಳೆಂದರೆ ಬರೀ ಸರ್ಕಾರಿ ಮತ್ತು ಸರ್ಕಾರೇತರ ಉದ್ಯೋಗಗಳು £ರಂತರವಾಗಿ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.ಅಮೃತ ಕಾಲದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟçವನ್ನಾಗಿ ಮಾಡುವ ಸಂಕಲ್ಪವನ್ನು ಪುನರುಚ್ಚರಿಸಿದ ಪ್ರಧಾ£, ಈ ಅವಧಿಯಲ್ಲಿ ಹೊಸದಾಗಿ ನೇಮಕಗೊಂಡವರು ದೇಶದ ‘ಸಾರಥಿ’ಯಾಗಿರುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.”೪೫ ನಗರಗಳಲ್ಲಿ ೭೧,೦೦೦ ಯುವಕರಿಗೆ ನೇಮಕಾತಿ ಪತ್ರಗಳನ್ನು £Ãಡಲಾಗುತ್ತಿದ್ದು, ದಕ್ಷತೆ ಹೆಚ್ಚಿಸಲು ಸಾಮರ್ಥ್ಯ ವರ್ಧನೆಯಾಗುವ ರೀತಿ ಕೆಲಸ ಮಾಡಿಈ ಮೂಲಕ ಸಾವಿರಾರು ಕುಟುಂಬಗಳಳಲ್ಲಿ ಸಂತೋಷ ತರಲಿದೆ ಎಂದು ಅವರು ತಿಳಿಸಿದ್ದಾರೆ.
”ದೇಶದ ಉಳಿದ ಜನರ ಮುಂದೆ, ಈ ಹೊಸ ಜವಾಬ್ದಾರಿಯನ್ನು ಹೊರಲು ಹೊರಟಿರುವ £ಮ್ಮೆಲ್ಲರನ್ನು ಒಂದು ರೀತಿಯಲ್ಲಿ ಕೇಂದ್ರ ಸರ್ಕಾರದ ಪ್ರತಿ£ಧಿಯಾಗಿ ನೇಮಿಸಲಾಗುತ್ತಿದೆ” .ಸರ್ಕಾರದೊಳಗೆ ದಕ್ಷತೆಯನ್ನು ಹೆಚ್ಚಿಸಲು ಸಾಮರ್ಥ್ಯ ವರ್ಧನೆಯ ಮೇಲೆ ಕೆಲಸ ಮಾಡಲು ಹೊಸ ನೇಮಕಾತಿ ಸಹಕಾರಿಯಾಗಲಿ ಎಂದಿದ್ದಾರೆ.
ಈ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ದ್ವೀಪಗಳು, ಗುಜರಾತ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟçದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಕೇಂದ್ರ ಸರ್ಕಾರದ ಬದ್ದತೆಗೆ ಇದು ಸಾಕ್ಷಿ ಎಂದಿದ್ದಾರೆ.


Gadi Kannadiga

Leave a Reply