This is the title of the web page
This is the title of the web page

Please assign a menu to the primary menu location under menu

Local News

ಶ್ರೀಧರ ಹೆಗಡೆ ಕಲಬಾಗರಿಗೆ ಹುಕ್ಕೇರಿ ಬಾಳಪ್ಪ ಸಂಸ್ಮರಣ ಪ್ರಶಸ್ತಿ ಶಾಲೆಗಳಲ್ಲಿ ಸಂಗೀತವನ್ನು ಕಡ್ಡಾಯಗೊಳಿಸಲಿ: ಭಾರತಿ ಭಟ್


ಬೆಳಗಾವಿ ೪: ಪ್ರಾಥಮಿಕ ಶಾಲೆಗಳಲ್ಲಿ ಸಂಗೀತ ವಿಷಯವನ್ನು ಕಡ್ಡಾಯವಾಗಿಟ್ಟು ಮಕ್ಕಳಲ್ಲಿ ಸಂಗೀತದಲ್ಲಿ ಅಭಿರುಚಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಹಿರಿಯ ಗಮಕಿ ಶ್ರೀಮತಿ ಭಾರತಿ ಭಟ್ ಇಂದಿಲ್ಲಿ ಹೇಳಿದರು.
ಇಲ್ಲಿಯ ಇಂಪು ಸಂಗೀತ ವೇದಿಕೆ ನೀಡುವ ಈ ವರ್ಷದ ಹುಕ್ಕೇರಿ ಬಾಳಪ್ಪ ಸಂಸ್ಮರಣ ಪ್ರಶಸ್ತಿಗೆ ಯುವ ಪ್ರತಿಭಾವಂತ ಗಾಯಕರಾದ ಶ್ರೀಧರ ಹೆಗಡೆ ಕಲಬಾಗ, ಹೊನ್ನಾವರ ಇವರನ್ನು ಆಯ್ಕೆ ಮಾಡಲಾಗಿದ್ದು ಇದೇ ದಿ. ೩ ರವಿವಾರದಂದು ಕನ್ನಡ ಸಾಹಿತ್ಯ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಸಪ್ತಕ ಸಂಗೀತ ಸಂಘ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಈ ಸಂದರ್ಭದಲ್ಲಿ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಿದ ಶ್ರೀಮತಿ ಭಟ್ ಮೇಲಿನಂತೆ ಅಭಿಪ್ರಾಯಪಟ್ಟರು.
ಮುಂದೆ ಮಾತನಾಡುತ್ತ ಭಟ್ ನಮ್ಮ ಕಾಲ ಮುಗಿಯಿತು. ಯುವ ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಅವರನ್ನು ಪ್ರೋತ್ಸಾಹಿಸಿ ಬೆಳೆಸುವುದು ಹಿರಿಯರಾದ ನಮ್ಮ ಕರ್ತವ್ಯವಾಗಿದೆ. ಎಂದು ಹೇಳಿದರು.
ಸಪ್ತಸ್ವರ ಸಂಗೀತ ವಿದ್ಯಾಲಯದ ಸಂಚಾಲಕರಾದ ಶ್ರೀಮತಿ ನಿರ್ಮಲಾ ಪ್ರಕಾಶ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಗೀತ ಕಲಾವಿದರಾದ ಪ್ರಭಾಕರ ಶಹಾಪೂರಕರ ಮತ್ತು ಕವಿಗಳಾದ ಪಿ. ಬಿ. ಸ್ವಾಮಿ ಅತಿಥಿಗಳಾಗಿ ಆಗಮಿಸಿದ್ದರು.
ಪ್ರಶಸ್ತಿ ಪ್ರದಾನದ ನಂತರ ಶ್ರೀಧರ ಹೆಗಡೆಯವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಾರವಾ ಹಾಗೂ ಕಾಫಿ ರಾಗಗಳನ್ನು ಪ್ರಸ್ತುತಪಡಿಸಿ ಸಂಗೀತಾಸಕ್ತರ ಮನ ತಣಿಸಿದರು. ಶ್ರೀ ಅಂಗದ ದೇಸಾಯಿ ತಬಲಾ, ಶ್ರೀ ಯೋಗೇಶ ರಾಮದಾಸ ಹಾರ್ಮೋನಿಯಂ ಸಾಥ್ ನೀಡಿದರು.
ಸಂಗೀತ ಕಲಾವಿದರಾದ ಶ್ರೀರಂಗ ಜೋಶಿ, ನೇತ್ರಾ ಜೋಶಿ ಅಲ್ಲದೇ ನಿವೃತ್ತ ಪ್ರಾಂಶುಪಾಲ ಡಾ. ಬಸವರಾಜ ಜಗಜಂಪಿ, ಕವಿಗಳಾದ ಎಂ. ಎಸ್. ಇಂಚಲ, ಡಾ. ಸಿ. ಕೆ. ಸೋರಾಪೂರ, ಜಿ. ಎಸ್. ಸೋನಾರ, ಎಂ. ಬಿ. ಹೊಸಳ್ಳಿ, ರಾಮಚಂದ್ರ ಕಟ್ಟಿ, ಬಸವರಾಜ ಗಾರ್ಗಿ,ಮದನ ಕಣಬೂರ, ಎಂ. ಎ. ಪಾಟೀಲ, ಆನಂದ ಪುರಾಣಿಕ ಮುಂತಾದವರು ಉಪಸ್ಥಿತರಿದ್ದರು. ಇಂಪು ಸಂಸ್ಥೆಯ ಸಂಚಾಲಕ ಎಲ್ ಎಸ್ ಶಾಸ್ತ್ರಿ ನಿರೂಪಿಸಿದರು. ಪ್ರಮೋದ ಸೇಠ ವಂದಿಸಿದರು.


Gadi Kannadiga

Leave a Reply