This is the title of the web page
This is the title of the web page

Please assign a menu to the primary menu location under menu

State

ಜೆ.ಇ ಲಸಿಕಾ ಅಭಿಯಾನ ಯಶಸ್ವಿಗೊಳಿಸಿ


ಗದಗ ನವೆಂಬರ್ ೨೩: ಡಿಸೆಂಬರ್ ೫ ರಿಂದ ೨೪ ರವರೆಗೆ ಜರುಗುವ ಜೆಇ ಲಸಿಕಾ ಅಭಿಯಾನವನ್ನು ತಾಲೂಕಿನ ಎಲ್ಲ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮುಂಡರಗಿ ತಹಶೀಲ್ದಾರ ಶ್ರೀಮತಿ ಶುÈತಿ ಮಲ್ಲಪ್ಪಗೌಡ್ರ ತಿಳಿಸಿದರು.
ಮುಂಡರಗಿ ತಾಲೂಕಾ ದಂಢಾಧಿಕಾರಿಗಳ ಕಛೇರಿಯಲ್ಲಿ ಮಂಗಳವಾರದಂದು ಜರುಗಿದ ತಾಲೂಕಾ ಮಟ್ಟದ ಟಾಸ್ಕ್ಪೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ೧ ವರ್ಷದಿಂದ ೬ ವರ್ಷದ ಗುರುತಿಸಿ, ಎಲ್ಲಾ ಮಕ್ಕಳಿಗೆ ಜೆ.ಇ ಲಸಿಕಾಕರಣದ ಕುರಿತು ಕ್ರಮ ಜರುಗಿಸಬೇಕು. ಎಲ್ಲಾ ವಸತಿ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಜೆ.ಇ ಲಸಿಕೆ ನೀಡುವಂತೆ ಕ್ರಮ ವಹಿಸಬೇಕು ಪಂಚಾಯಿತಿಯ ಎಲ್ಲಾ ಹಳ್ಳಿಗಳಲ್ಲಿ ಹಾಗೂ ವಾರ್ಡುಗಳಲ್ಲಿ ಜೆ.ಇ ಲಸಿಕಾ ಕಾರ್ಯಕ್ರಮದ ಕುರಿತು, ಕಸ ವಿಲೇವಾರಿ ಮಾಡುವ ಗಾಡಿಯ ಮುಖಾಂತರ ಮೈಕಿಂಗ್ ಹಾಗೂ ಡಂಗೂರ ಸಾರುವ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿಯ ೧ನೇ ತರಗತಿಯಿಂದ ೧೦ನೇ ತರಗತಿ ಎಲ್ಲಾ ಮಕ್ಕಳಿಗೆ ಜೆ.ಇ ಲಸಿಕೆ ನೀಡುವಂತೆ ಕ್ರಮ ವಹಿಸಬೇಕು. ಒಟ್ಟಾರೆಯಾಗಿ ತಾಲೂಕಾ ಮಟ್ಟದ ಜೆ.ಇ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಂಡರಗಿ ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಟಿ.ಎಸ್. ಅವರು ಮಾತನಾಡಿ ಡಿಸೆಂಬರ್ ೫ ರಿಂದ ೨೪ ರವರೆಗೆ ಜೆ.ಇ ಲಸಿಕಾ ಕಾರ್ಯಕ್ರಮದ ಅಭಿಯಾನ ನಡೆಯುತ್ತಿದ್ದು , ಈಗಾಗಲೇ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ೧೦ ಜಿಲ್ಲೆಗಳಲ್ಲಿ ಈ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಹೆಚ್ಚುವರಿಯಾಗಿ ೧೧ ಜಿಲ್ಲೆಗಳಲ್ಲಿ ಜೆ.ಇ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದಲ್ಲಿ ೧ ರಿಂದ ೧೫ ವರ್ಷದ ಮಕ್ಕಳಿಗೆ ಒಂದು ಡೋಸ್ ಜೆ.ಇ. ಲಸಿಕೆ ಚುಚ್ಚುಮದ್ದು ನೀಡಲಾಗುವುದೆಂದು ಹೇಳಿದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಎಮ್.ಎಸ್. ಸಜ್ಜನರ ಸರ್ವರನ್ನು ಸ್ವಾಗತಿಸಿ ಡಿಸೆಂಬರ ೫ ರಿಂದ ಈ ಕಾರ್ಯಕ್ರಮ ಚಾಲನೆಗೊಳ್ಳುವುದು. ಡಿಸೆಂಬರ್ ೧ನೇ ವಾರದಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿ ಒಟ್ಟು ಮಕ್ಕಳು ೨೬೦೨೭ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು. ನಂತರ ೨ನೇ ವಾರದಲ್ಲಿ ೧ ವರ್ಷದಿಂದ ೬ ವರ್ಷದ ಒಟ್ಟು ೯೬೫೩ ಮಕ್ಕಳಿಗೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುವುದು. ಒಟ್ಟಾರೆಯಾಗಿ ತಾಲೂಕಿನಲ್ಲಿ ೩೫೬೮೦ ಮಕ್ಕಳಿದ್ದು ಎಲ್ಲಾ ಮಕ್ಕಳಿಗೆ ಒಂದು ಡೋಸ್ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಬಿ.ಇ.ಓ ಎಮ್ ಎಫ್ ಬಾರ್ಕಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಎಮ್ ಎಮ್ ಇರಸನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


Gadi Kannadiga

Leave a Reply