This is the title of the web page
This is the title of the web page

Please assign a menu to the primary menu location under menu

State

ನರೇಗಾ ಕೆಲಸದ ಮೂಲಕ ಈ ಬಾರಿ ಅಬ್ಬಿಗೇರಿ ಗ್ರಾಮವನ್ನು ರಾಜ್ಯದಲ್ಲೇ ಗುರುತಿಸುವ ಕೆಲಸ ಮಾಡೋಣ : ಮಾಲಾಶ್ರೀ ಅಮ್ಮನ್ನವರ


ಗದಗ ಮಾರ್ಚ ೨೯ :- ರೋಣ ತಾಲೂಕಿನಲ್ಲಿ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಸೃಷ್ಟಿ ಆಗುವ ಗ್ರಾಮ ಪಂಚಾಯತಿ ಅಬ್ಬಿಗೇರಿ ಪಂಚಾಯತ್ ಅಗಿದ್ದು ಈ ಭಾರಿ ಸಮುದಾಯ ಕೆಲಸದ ಮೂಲಕ ಅಬ್ಬಿಗೇರಿ ಪಂಚಾಯತಿ ಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವ ಹಾಗೆ ಕೆಲಸ ಮಾಡೋಣ ಅದಕ್ಕೆ ತಮ್ಮೇಲ್ಲರ ಸಹಕಾರ ಅಗತ್ಯ ಅಂತಾ ಕಾಯಕ ಬಂದುಗಳಿಗೆ ಹಾಗೂ ಗ್ರಾಮ ಕಾಯಕ ಮಿತ್ರರಿಗೆ ಅಬ್ಬಿಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾಲಾಶ್ರೀ ಅಮ್ಮನ್ನವರ ಹೇಳಿದರು.
ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮ ಪಂಚಾಯತಿ ಯಲ್ಲಿ ಕಾಯಕ ಬಂಧುಗಳ ಸಭೆ ಹಾಗೂ ತರಬೇತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ನರೇಗಾ ಕೂಲಿ ಮೊತ್ತ ? ೩೦೯ ರಿಂದ ?೩೧೬ಕ್ಕೆ ಹೆಚ್ಚಳವಾಗಿದೆ. ಉದ್ಯೋಗ ಖಾತ್ರಿಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕೂಲಿ £Ãಡಲಾಗುತ್ತದೆ. ಏಪ್ರಿಲ್ ೧ ರಿಂದ ಅಬ್ಬಿಗೇರಿ ಪಂಚಾಯತಿಯಲ್ಲಿ ಕೆಲಸ ಪ್ರಾರಂಭ ಮಾಡಲಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿಯ ಸಮುದಾಯ ಕೆಲಸ ಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಎನ್‌ಎಂಎಂಎಸ್ ಆ?ಯಪ್ ಇಲ್ಲದೆ ಯಾವುದೇ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲಾ, ಆದ್ದರಿಂದ ಮೇಟ್‌ಗಳು ಎನ್‌ಎಂಎಂಎಸ್ ಆ?ಯಪ್‌ನ ಮೂಲಕ ಹಾಜರಾತಿ ಹಾಕಿ, ಕೆಲಸದಲ್ಲಿ ಯಾವುದೇ ರೀತಿಯ ವಿಳಂಬವಾಗುದಂತೆ ನೋಡಿಕೊಳ್ಳಬೇಕು ಎಂದರು.
ಟಿಐಇಸಿ ಮಾತನಾಡಿ, ಕಾಯಕ ಬಂಧುಗಳ ಜವಾಬ್ದಾರಿ ಮತ್ತು ಕರ್ತವ್ಯದ ಕುರಿತು ವಿವರಿಸಿದರು. ಹೊಸ ಜಾಬ್‌ಕಾರ್ಡ್, ಜಾಬ್‌ಕಾರ್ಡ್ ಪ್ರತ್ಯೇಕಿಸುವಿಕೆ, ನಮೂನೆ -೬ರಲ್ಲಿ ಕೆಲಸದ ಬೇಡಿಕೆ ಸಲ್ಲಿಸುವ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ
ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು, ಮಹಿಳಾ ಸಂಘದ ಸದಸ್ಯರು ಪಾಲ್ಗೊಂಡಿದ್ದರು.


Leave a Reply