This is the title of the web page
This is the title of the web page

Please assign a menu to the primary menu location under menu

State

ಕುಷ್ಟಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗೋಡಿ ಆಯ್ಕೆ


ಕುಷ್ಟಗಿ:-ಕುಷ್ಟಗಿ ತಾಲೂಕ ನ್ಯಾಯವಾದಿಗಳ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು198 ಜನ ನ್ಯಾಯವಾದಿಗಳಿದ್ದು ಇದರಲ್ಲಿ 183 ಜನ ನ್ಯಾಯವಾದಿಗಳು ಮತದಾನ ಮಾಡಿದರು .ಅದರಲ್ಲಿ ಮಲ್ಲಿಕಾರ್ಜುನ್ ಗೋಡಿ ಅವರಿಗೆ 94 ಮತಗಳು ಇವರ ಪ್ರತಿ ಸ್ಪರ್ಧಿ ಸಂಗನಗೌಡ ಪಾಟೀಲ್ 88 ಮತಗಳು ಪಡೆದರು.ಇದರಲ್ಲಿ 6 ಮತಗಳ ಅಂತರದಿಂದ ಮಲ್ಲಿಕಾರ್ಜುನ ಗೋಡಿ ವಕೀಲರು ಅಧ್ಯಕ್ಷರಾಗಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ 3 ಅಭ್ಯರ್ಥಿಗಳಾಗಿ ಮಹಾಂತೇಶ ಎಸ್ ದಂಡಿನ ,ಶಿವಕುಮಾರ ಎ ದೊಡ್ಡಮನಿ,ವಿಜಯಕುಮಾರ ಎಲ್ ಕಟ್ಟಿಮನಿ ಸ್ಪರ್ಧೆ ಮಾಡಿದ್ದರು. ಇದರಲ್ಲಿಮಹಾಂತೇಶ ಎಸ್ ದಂಡಿನ 90 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆ ಯಾದರು.ಶಿವಕುಮಾರ ಎ ದೊಡ್ಡಮನಿ ಯವರಿಗೆ ,57 ಮತಗಳು ಹಾಗೂ ವಿಜಯಕುಮಾರ ಎಲ್ ಕಟ್ಟಿಮನಿಯವರಿಗೆ 36 ಮತಗಳನ್ನು ಪಡೆದಿದ್ದರು.ನಂತರ ಸಂಘದ ಕಾರ್ಯದರ್ಶಿಯನ್ನಾಗಿ ಪರಸಪ್ಪ ಆಡೀನ್ ಹಾಗೂ ಜಂಟಿ ಕಾರ್ಯದರ್ಶಿ ಯಾಗಿ ಸುರೇಶ ಜರಕುಂಟಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಒಂದು ವರ್ಷದ ಅವಧಿಗೆ ನಡೆದ ತಾಲೂಕ ನ್ಯಾಯವಾದಿಗಳ ಸಂಘದ ಚುನಾವಣೆ

ಚುನಾವಣೆಯ ಅಧಿಕಾರಿಯಾಗಿ ಶಫಿ ಹೇರೂರು, ಸಂಗಮೇಶ ಕಂದುಕೂರ, ಎಸ್ ಎನ್ ನಾಯಕ್ ಚುನಾವಣಾ ಅಧಿಕಾರಿಗಳಾಗಿ ನಡೆಸಿಕೊಟ್ಟರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ

 


Gadi Kannadiga

Leave a Reply