This is the title of the web page
This is the title of the web page

Please assign a menu to the primary menu location under menu

Local News

ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರು


ಬೆಳಗಾವಿ: ಮದುವೆ ಕಾರ್ಯದಲ್ಲಿ ತೊಡಗಿದ್ದ ಕನ್ನಡಿಗರ ಮೇಲೆ ಹಲ್ಲೆ ಮಾಡಿ ಮತ್ತೆ ಬಾಲ ಬಿಚ್ಚಿದ ಮರಾಠಿಗರು.ಮದುವೆ ಹುಡುಗ ಮತ್ತು ಹುಡುಗಿಯ ಮೇಲೆ ಹಲ್ಲೆ.

ಹೌದು ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ಮದುವೆ ಸಮಾರಂಭ ನಿಮಿತ್ಯವಾಗಿ ಕನ್ನಡ ಹಾಡು ಹಚ್ಚಿಕೊಂಡು ಮದುವೆ ಸಮಾರಂಭದಲ್ಲಿ ಮೆರವಣಿಗೆ ನಡೆಯುತ್ತಿರುವ ವೇಳೆ ಮರಾಠಿ ಪುಂಡರ ಗುಂಪೊಂದು ಕನ್ನಡಿಗರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ತಡ ರಾತ್ರಿ ಮದುವೆ ಹುಡುಗಿ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕನ್ನಡ ಹಾಡುಗಳನ್ನ ಹಚ್ಚಿಕೊಂಡು ಸಂಭ್ರಮ ಆಚರಣೆ ಮಾಡುತ್ತಿರುವಾಗ ಮರಾಠಿ ಪುಂಡರ ಗುಂಪೊಂದು ಬಂದು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ 10:30 ರಿಂದ 11 ಗಂಟೆಗೆ ನಡೆದ ಘಟನೆ ಆಗಿದೆ. ಗಾಯಗೊಂಡವರನ್ನ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ MLC ಕೇಸ್ ಕೂಡಾ ಆಗಿದ್ದು ಒಟ್ಟಾರೆ 5 ಜನರಿಗೆ ಗಾಯಗಳಾಗಿದ್ದು ಒಬ್ಬ ಯುವಕನಿಗೆ ತಲೆಗೆ ಪೆಟ್ಟಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಾಗೇಯೆ ಮದುವೆ ಮನೆಯಲ್ಲಿ ಸಂಭ್ರಮ ಸಡಗರದಿಂದ ಇರಬೇಕಿತ್ತು ಆದರೆ ಈ ಗಲಾಟೆಯಿಂದ ಮನೆಯಲ್ಲಿ ಮೌನದ ವಾತಾವರಣ ನಿರ್ಮಾಣವಾಗಿದೆ.

ಈ ವೇಳೆ ಮಾತನಾಡಿದ ಗಾಯಗೊಂಡ ಯುವಕ ದಾಮನೆ ಗ್ರಾಮದಲ್ಲಿ ಮರಾಠಿಗರು ನಮ್ಮ ಮೇಲೆ ಪದೇ ಪದೇ ದಬ್ಬಾಳಿಕೆ ಮಾಡುತ್ತಿದ್ದು, ನಿನ್ನೆ ನಮ್ಮ ಅಣ್ಣನ ಮದುವೆ ಮೆರವಣಿಗೆಯಲ್ಲಿ ಕನ್ನಡ ದ್ವಜ ಹಿಡಿದು ಡಾನ್ಸ್ ಮಾಡುತ್ತಾ ಹೋಗುವಾಗ ಪಕ್ಕಕ್ಕೆ ಕರೆದು ಹಲ್ಲೆ ಮಾಡಿದರು ಎಂದರು..
ಎರಡು ತಿಂಗಳ ಹಿಂದೆ ನನ್ನ ಗಾಡಿ ಕೂಡಾ ಸುಟ್ಟಿದ್ದರು, ಅದಕ್ಕೆ ಪೊಲೀಸರಿಗೆ ದೂರು ಕೊಟ್ಟು, ಸಾಕ್ಷಿ ಕೂಡಾ ಕೊಟ್ಟಿದ್ದೆ, ಆದರೆ ಇನ್ನೂ ಕೂಡ ಏನು ಆಗಿಲ್ಲ, ಅಜಯ ಯಲ್ಲೂರ್ಕರ, ಆಕಾಶ್ ಚೌಗುಲೆ ಇದಕ್ಕೆಲ್ಲಾ ಕಾರಣ ಕನ್ನಡದ ಯಾವುದೇ ಕಾರ್ಯ ಮಾಡಿದರು ಜಗಳ ಮಾಡುತ್ತಾರೆ ಎಂದರು.


Gadi Kannadiga

Leave a Reply