This is the title of the web page
This is the title of the web page

Please assign a menu to the primary menu location under menu

State

ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ಮ್ಯಾರಾಥಾನ್ ಓಟ


ಗದಗ ಅಗಸ್ಟ ೨೪ : ಅಗಷ್ಟ ೨೯ ರಂದು ಮೇಜರ್ ಧ್ಯಾನ್ ಚಂದ್‌ರವರ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಗುವುದು.ತನ್ನಿಮಿತ್ತ ಅಗಸ್ಟ ೨೬ ರಂದು ಮ್ಯಾರಾಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದ್ದು ಆ ದಿನ ಬೆಳಿಗ್ಗೆ ೬-೩೦ ಗಂಟೆಗೆ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ಪುಟ್ಟರಾಜ್ ಸರ್ಕಲ್-ಹಳೇ ಡಿ.ಸಿ.ಆಫೀಸ್ ಸರ್ಕಲ್ ಮೂಲಕ- ಬಸವೇಶ್ವರ ಪುತ್ಥಳಿವರೆಗೆ, ಮರಳಿ ಬಸವೇಶ್ವರ ಪುತ್ಥಳಿಯಿಂದ ಹಳೇ ಡಿ.ಸಿ. ಆಫೀಸ್ ಸರ್ಕಲ್, ಪುಟ್ಟರಾಜ ಸರ್ಕಲ್ ಮೂಲಕ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯವಾಗುತ್ತದೆ. ಆಸಕ್ತ ಕ್ರೀಡಾಪಟುಗಳು ಬೆಳಿಗ್ಗೆ ೬-೦೦ ಗಂಟೆಗೆ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಿದ್ದು, ಸದರಿ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಗದಗ ದೂರವಾಣಿ ೭೨೦೪೧೧೪೫೨೧ ಗೆ ಸಂಪರ್ಕಿಸಲು ಸಹಾಯಕ ನಿರ್ದೇಶಕರಾದ ಡಾ: ಶರಣು ಗೋಗೇರಿ ತಿಳಿಸಿದ್ದಾರೆ.


Leave a Reply