This is the title of the web page
This is the title of the web page

Please assign a menu to the primary menu location under menu

Local News

ಯಮಕನಮರಡಿ ಕ್ಷೇತ್ರದಲ್ಲಿ ಧರ್ಮಕ್ಕಾಗಿ ಹೋರಾಟ : ಮಾರುತಿ ಅಷ್ಟಗಿ


ಯಮಕನಮರಡಿ: ಮಹಾಭಾರತದಲ್ಲಿ ಪಾಂಡವರ ಮತ್ತು ಕೌರವರ ನಡುವೆ ೧೮ ದಿನಗಳ ಕಾಲ ಯುದ್ದ ನಡೆದು ಕೊನೆಗೂ ಪಾಂಡವರಿಗೆ ಜಯ ಸಿಕ್ಕಿತು. ಯಮಕನಮರಡಿ ಮತಕ್ಷೇತ್ರದಲ್ಲಿ ಅಧರ್ಮ ತಾಂಡವಾಡುತ್ತಿದ್ದು, ಈ ಅಧರ್ಮವನ್ನು ಸದೆಬಡೆಯಲು ಧರ್ಮಕ್ಕಾಗಿ ೧೮ ದಿನಗಳ ಕಾಲ ಸ್ವಾಭಿಮಾನದ ಸಂಕಲ್ಪ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ರಾಜ್ಯ ಕರಕುಶಲ £ಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಹೇಳಿದರು.
ಅವರು ದಿ. ೧೭ ರಂದು ಇಸ್ಲಾಂಪೂರ ಗ್ರಾಮದಲ್ಲಿ ೧೦೦ಹಳ್ಳಿಗಳ ಸ್ವಾಭಿಮಾನದ ಸಂಕಲ್ಪ ಪಾದಯಾತ್ರೆ ಮುಕ್ತಾಯಗೊಳಿಸಿದ ಸಂದರ್ಭದಲ್ಲಿ ಮಾತನಾಡಿದರು. ರೈತರ ಜಮೀನುಗಳನ್ನು ಕಡಿಮೆ ದರದಲ್ಲಿ ಖರೀದಿಸಿರುವ ಶಾಸಕರು ರೈತರ ವಿರೋಧಿಗಳಾಗಿದ್ದಾರೆ. ಶಾಸಕರಿಗೆ ಜನರ ಹಿತ ಮುಖ್ಯವಲ್ಲ ತಮ್ಮ ಹಿತ ಮುಖ್ಯವಾಗಿದೆ. ೨೦೨೩ ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಕಸದ ಬುಟ್ಟಿಗೆ ಹಾಕಿ ಕ್ಷೇತ್ರದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಬಿಜೆಪಿ ಪಕ್ಷದ ಶಾಸಕರನ್ನು ಆಯ್ಕೆ ಮಾಡಲು ಜನರು ತಿರ್ಮಾ£ಸಿದ್ದಾರೆ. ಬಿಜೆಪಿ ಪಕ್ಷದವರು ಆಯೋಜಿಸಿರುವ ಸಭೆಗಳಿಗೆ ಭಂಗ ತರಲು ಕೆಲ ಪಟಬದ್ರ ಹಿತಾಸಕ್ತಿಗಳು ಅಡ್ಡಿ ಪಡಿಸುತ್ತಿರುವುದು ಖೇದ£Ãಯ ಸಂಗತಿ. ಕ್ಷೇತ್ರದಲ್ಲಿ ಬದಲಾವಣೆಗಾಗಿ ಬಿಜೆಪಿಯನ್ನು ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ರವಿ ಹಂಜಿ ಈ ಹಿಂದೆ ಡಿ.ಕೆ. ಶಿವಕುಮಾರೊಂದಿಗೆ ರಾಜಕೀಯ ಒಡನಾಟದಲ್ಲಿದ್ದಾಗ ಡಿ.ಕೆ. ಶಿವಕುಮಾರ ಅವರು ಹೇಳಿದ ಕಥೆಯನ್ನು ನೆನಪಿಸಿ ಅನ್ಯಾಯದ ವಿರುದ್ದ ತಡೆಗಟ್ಟುವ ವಿಚಾರವನ್ನು ಕಾರ್ಯಕರ್ತರಿಗೆ ತಿಳಿಸಿದರು. ಶಿವಾನಂದ ಪಡಗೂರಿ ಮಾತನಾಡಿದರು. ಈ ವೇಳೆಯಲ್ಲಿ ಲಕ್ಷö್ಮಣ ಅಷ್ಟಗಿ, ಬಸವರಾಜ ಉದೋಶಿ, ಪರಶುರಮ ಬಸನಾಯ್ಕ ಅಮೀತ ದೇಶಪಾಂಡೆ, ಹುಕ್ಕೇರಿ ತಾ.ಪಂ. ಮಾಜಿ ಸದಸ್ಯ ಪ್ರಕಾಶ ಪೈರಾಸಿ, ದುಂಡಪ್ಪಾ ದೇವರಮ£, ಯಲ್ಲಪ್ಪ ವಂಟಮೂರಿ, ಕಾಡಪ್ಪ ಜಿಂಡ್ರಾಳಿ, ಬಸಪ್ಪ ಜರಲಿ, ಮಲ್ಲಪ್ಪ ಕೆಂಚನ್ನವರ, ಗೌಡಪ್ಪ ಪಾಟೀಲ, ಅಜೀತ ಮಗದುಮ್ಮ ಹಾಗೂ ಸಮಸ್ತ ಬಿಜೆಪಿ ಕಾರ್ಯಕರ್ತರು ಇದ್ದರು.


Gadi Kannadiga

Leave a Reply