This is the title of the web page
This is the title of the web page

Please assign a menu to the primary menu location under menu

State

ಮತದಾರರ ಜಾಗೃತಿಗಾಗಿ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮ


ಗದಗ ಎಪ್ರಿಲ್ ೧೭: ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನದ ಪಾತ್ರ ಪ್ರಮುಖವಾಗಿದೆ. ಮತದಾರರನ್ನು ಜಾಗೃತಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಸೋಮವಾರದಂದು ನಗರದ ಗಾಂಧಿ ಸರ್ಕಲ್‌ನಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಮೂರ್ತಿ ಭೀಷ್ಮ ಕೆರೆಯವರೆಗೆ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಜಾಥಾದಲ್ಲಿ ಶಿಕ್ಷಣ ಇಲಾಖೆ ಸಂಘಟನೆಯವರು ಪಾರಂಪರಿಕ ಉಡುಗೆ ಧರಿಸಿ ಎಲ್ಲರ ಕಣ್ಮನ ಸೆಳೆದರು ಮತ್ತು ಅರ್ಹ ಮತದಾರರು ಮತ ಚಲಾಯಿಸುವಂತೆ ಪ್ರೇರೇಪಿಸಲು ಮತದಾರರ ಜಾಗೃತಿ ಕುರಿತು ಹಾಡುಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ)ಜಿ.ಎಂ.ಬಸವಲಿಂಗಪ್ಪ, ಡಯಟ್‌ದ ಪ್ರಾಚಾರ್ಯರಾದ ಜಿ.ಎಲ್.ಬಾರಾಟಕ್ಕೆ, ತಹಶೀಲ್ದಾರರಾದ ಮಲ್ಲಿಕಾರ್ಜುನ, ಜಿಲ್ಲಾ ಸ್ವೀಪ್ ಚಟುವಟಿಕೆಗಳ ನಿರ್ವಹಣಾ ಸಮಿತಿ ಸದಸ್ಯ ಆರ್.ಎಸ್. ಬುರುಡೆ,ಕ್ಷೇತ್ರ ಸಮನ್ವಯಾಧಿಕಾರಿಗಳು, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿ.ಆರ್.ಪಿ. ಬಿ.ಆರ್.ಪಿ, ಬೋಧಕೇತರ ಸಿಬ್ಬಂದಿ ಜಿಲ್ಲಾ ಮತ್ತು ತಾಲೂಕಾ ಹಂತದ ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.


Leave a Reply